*ಶಾಂತ ಮೂರ್ತಿ ಡಾ. ಬಿ.ಡಿ.ಶಶಿಧರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳ ನುಡಿ ನಮನಗಳು.*
ಸಾಹಿತಿ ಯಡೇಹಳ್ಳಿ ಆರ್ ಮಂಜುನಾಥ್ ರವರ ವಿಶೇಷ ಲೇಖನ ತಪ್ಪದೇ ಎಲ್ಲರೂ ಓದಿ 👇👇
ಬಾಳ್ಳುಪೇಟೆಯ ಕೆಲವು ಮನೆತನಗಳು ಬಾಳಿ ಬೆಳಗಿ ಗ್ರಾಮಗಳ ಏಳಿಗೆಗೆ, ಸುಖ ಕಷ್ಟಗಳಲ್ಲಿ, ಹುಟ್ಟು ಸಾವುಗಳಲ್ಲಿ, ಉಳ್ಳವರ ಮತ್ತು ಬಡವರ ಮನೆಗಳಲ್ಲಿ ಭಾಗವಹಿಸಿ ಸಹಕರಿಸಿ.ಊರಿನ ದೇವಸ್ಥಾನ,ಆಸ್ಪತ್ರೆ, ಶಾಲೆ, ರಸ್ತೆ, ಕುಡಿಯುವ ನೀರು ಎಲ್ಲ ಅಭಿವೃದ್ಧಿಗಳಿಗೆ ದಾನ ಧರ್ಮ ಮಾಡಿ ಜನತೆಯ ಅಭಿವೃದ್ಧಿಗೋಸ್ಕರ ದುಡಿದು ಹೆಸರು ಗಳಿಸಿದಂತ ಹಲವು ಮನೆತನಗಳಲ್ಲಿ ಮೇರು ವ್ಯಕ್ತಿತ್ವದ ದಿವಂಗತ ಬಿ.ಸಿದ್ದಣ್ಣಯ್ಯನವರ ಕುಟುಂಬ ಎತ್ತರದ ಸ್ಥಾನದಲ್ಲಿ ನಿಲ್ಲುತ್ತದೆ. ಸಿದ್ದಣ್ಣಯ್ಯನವರ ಪುತ್ರರಾದ ದಿವಂಗತ ದೇವರಾಜ್ರವರು ಉನ್ನತ ವಿದ್ಯಾಭ್ಯಾಸವನ್ನು ಪಡೆದುಕೊಂಡಿದ್ದರು ಕೂಡ ಸರ್ಕಾರಿ ಕೆಲಸವನ್ನು ಬಯಸದೆ “ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು” ಎಂದು ತಂದೆಯ ಮಾರ್ಗದರ್ಶನಗಳಲ್ಲಿ ಕೃಷಿ ತೋಟ ಮತ್ತು ವ್ಯವಹಾರಗಳನ್ನು ಸುಂದರವಾಗಿ ನಡೆಸಿ ಹಲವಾರು ಕೃಷಿ ಕುಟುಂಬಗಳಿಗೆ ಮಾರ್ಗದರ್ಶಿಯಾಗಿದ್ದರು.ಶ್ರೀ ಬಿ.ಎಸ್.ದೇವರಾಜ್ ಮತ್ತು ಶ್ರೀಮತಿ ವೇದಾವತಿ ದಂಪತಿಗಳಿಗೆ ಬಿ.ಡಿ. ಬಸವಣ್ಣನವರು (ಕಾಫಿ ಬೆಳೆಗಾರರಾಗಿ ಸಮಾಜ ಸೇವಕರಾಗಿ ಬಾಳ್ಳುಪೇಟೆಯ ದಿವಾನ್ ಎಸ್ಟೇಟ್ ನಲ್ಲಿ ನೆಲೆಸಿದ್ದಾರೆ), ಬಿ.ಡಿ. ಶಶಿಧರವರು, ಬಿ.ಡಿ. ಪ್ರಭುಶಂಕರ್ ರವರು(ಬೆಂಗಳೂರಿನಲ್ಲಿ ಆಶ್ರಯ ಇಂಟರ್ ನ್ಯಾಷನಲ್ ಹೋಟೆಲ್ ಉದ್ಯಮ ನಡೆಸುತ್ತ ನೆಲೆಸಿದ್ದಾರೆ) ಪುತ್ರರನ್ನು ಪಡೆದಿದ್ದಾರೆ. ಮೂವರು ತಮ್ಮ ತಮ್ಮ ಕ್ಷೇತ್ರದಲ್ಲಿ ಶ್ರದ್ಧೆಯಿಂದ ದುಡಿದು ಸಮಾಜದ ಏಳಿಗೆಗೆ ದಾನ ಧರ್ಮಗಳೊಂದಿಗೆ ಗುರುತಿಸಿಕೊಂಡು ನೇರ ನಿಷ್ಠುರ ನಡೆಯಿಂದ ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿ ಬದುಕು ನಡೆಸುತ್ತಿದ್ದಾರೆ.( ಬಿ.ಎಸ್.ದೇವರಾಜ್ ರವರು 2005ರಲ್ಲಿ ಲಿಂಗೈಕ್ಯರಾದರು)
ಇಂದು ಈ ಸುಸಂಸ್ಕೃತ ಕುಟುಂಬದ ಎರಡನೆಯ ಕುಡಿ ಶಶಿಧರ್ ರವರು ಲಿಂಗೈಕ್ಯರಾಗಿದ್ದಾರೆ. ಒಂದು ನೆನಪು
9-12-1954 ರಂದು ಬಾಳ್ಳುಪೇಟೆಯಲ್ಲಿ ಶ್ರೀ ಬಿ.ಎಸ್. ದೇವರಾಜ್ ಮತ್ತು ಶ್ರೀಮತಿ ವೇದಾವತಿಯವರ ಎರಡನೇ ಪುತ್ರರಾಗಿ ಜನಿಸಿದ ಶಶಿಧರ್ ಅವರು ಮೈಸೂರಿನ ನಿರ್ಮಲ ಕಾನ್ವೆಂಟ್ ಮತ್ತು ಶ್ರೀರಾಮಕೃಷ್ಣ ವಿದ್ಯಾ ಶಾಲೆಯಲ್ಲಿ ಪಿಯುಸಿ ವರೆಗಿನ ಅಧ್ಯಯನದ ನಂತರ ದಾವಣಗೆರೆಯ ಜೆ.ಜೆ. ಎಂಎಂಸಿ ಯಲ್ಲಿ ಎಂಬಿಬಿಎಸ್., ಎಂ ಡಿ ಉನ್ನತ ಶಿಕ್ಷಣವನ್ನು ಪಡೆದು. ಒಂದು ವರ್ಷದವರೆಗೆ ಮಣಿಪಾಲಿನ ಕಸ್ತೂರಿಬಾ ಆಸ್ಪತ್ರೆಯಲ್ಲಿ ಸೇವೆ ಪ್ರಾರಂಭ ಮಾಡಿದರು. ನಂತರ ಹಿರಿಯ ವೈದ್ಯ ಡಾಕ್ಟರ್ ಎಆರ್ ಪೈ ಅವರ ಜೊತೆಯಲ್ಲಿ ನಾಲ್ಕೈದು ವರ್ಷ ವೈದ್ಯ ವೃತ್ತಿ ಸೇವೆಯನ್ನು ನಡೆಸಿ ಅಪಾರ ವಿದ್ವತ್ತನ್ನು ಸಂಪಾದಿಸಿಕೊಂಡರು, ಇದಾದ ಮೇಲೆ ಬೆಂಗಳೂರಿನ ವೈಯಾಲಿಕಾವಲ್ನಲ್ಲಿ ಸ್ಟ್ಯಾಂಡರ್ಡ್ ಲ್ಯಾಬ್ ಮತ್ತು ಪಾಲಿಕ್ಲಿನಿಕ್ ಎಂಬ ಹೆಸರಿನ ಕ್ಲಿನಿಕನ್ನು ಸ್ವತಂತ್ರವಾಗಿ ಪ್ರಾರಂಭಿಸಿದರು. ಶಾಂತತೆಯಿಂದ ವಿದೇಯತೆಯಿಂದ ರೋಗಿಗಳ ಆರೈಕೆಯನ್ನು ಬಹಳ ಮೃದು ಸ್ವಭಾವದಿಂದ ನಡೆಸುತ್ತಿದ್ದ ವೈದ್ಯರಾದ ಡಾ ಬಿ.ಡಿ.ಶಶಿಧರ್ ರವರಲ್ಲಿಗೆ ಅಂತರಾಷ್ಟ್ರೀಯ ಖ್ಯಾತಿ ಹೊಂದಿದ್ದ ಚಿತ್ರಕಲಾವಿದರಾದ ರಷ್ಯಾ ಮೂಲದ ರೋರಿಕ್ ದೇವಿಕಾರಾಣಿ ದಂಪತಿಗಳು ಬರುತ್ತಿದ್ದರಂತೆ.ಬರ ಬರುತ್ತಾ ಅವರ ಜೊತೆ ಬಾಂಧವ್ಯ ಆತ್ಮೀಯತೆ ಮೂಡಿ ಸಣ್ಣ ಆರೋಗ್ಯದಲ್ಲಿ ವ್ಯತ್ಯಾಸವಾದರೂ ಕುಟುಂಬದ ಶಶಿಧರ್ ರವರಲ್ಲಿ ತಪಾಸಣೆ ನಡೆಸಿದರೆ ಮಾತ್ರ ಗುಣವಾಗತಿತಂತೆ ನಂತರ ಕುಟುಂಬದ ವೈದ್ಯರಾಗಿ ಆತ್ಮೀಯರಾದರು ಒಮ್ಮೆ ವಿಶ್ವವಿಖ್ಯಾತ ಚಿತ್ರಗಾರರ ರೋರಿಕ್ ದಂಪತಿಗಳು ರಷ್ಯಾ ಪ್ರವಾಸಕ್ಕೆ ಡಾಕ್ಟರ್ ಸತೀಶ್ ಶಶಿಧರ್ ಅವರನ್ನು ಪ್ರೀತಿಯಿಂದ ಆಹ್ವಾನಿಸಿ ಕರೆದುಕೊಂಡು ಹೋದರಂತೆ, ವಿಶೇಷವಾಗಿ ಇವರಿಗೆ ರಷ್ಯಾ ಸರ್ಕಾರ ಚಾರ್ಟೆಡ್ ಫ್ಲೈಟ್ ಅನ್ನು ಕಳಿಸುತ್ತಂತೆ,ಅಲ್ಲಿ ಹೋದ ನಂತರ ಎಲ್ಲಾ ಕಡೆ ರಾಜ ಮರ್ಯಾದೆ ಮತ್ತು ಎಸ್ಕಾರ್ಟ್ ಸರ್ವಿಸ್ ಕೊಟ್ಟಿದ್ದರಂತೆ,ಉಳಿಯಲು ವಿಸ್ತಾರವಾದ ಒಂದು ಬೃಹತ್ ಬಂಗಲೇ ಅಡಿಗೆ ಮಾಡಲು ಬಾಣಸಿಗರು ಎಲ್ಲಾ ಕೆಲಸಗಳಿಗೂ ನೌಕರರು ಎಲ್ಲವನ್ನು ರಷ್ಯಾ ಸರ್ಕಾರ ಇವರಿಗೆ ಆಯೋಜನೆ ಮಾಡಿದ್ದು ಅಂತರಾಷ್ಟ್ರೀಯ ಕಲಾವಿದನ ಜೊತೆ ಡಾ. ಶಶಿಧರ್ ಅವರು ವೃತ್ತಿ ಧರ್ಮಕ್ಕೆ ಮೆಚ್ಚಿ ಸಿಕ್ಕ ಗೌರವವಾಗಿದೆ.
ನಂತರ 1967ರಲ್ಲಿ ಬ್ರಿಗೇಡ್ ರಸ್ತೆಯಲ್ಲಿ ರಿಪಬ್ಲಿಕ್ ನರ್ಸಿಂಗ್ ಹೋಮ್ ಕುಟುಂಬದ ಸಹಾಯದಿಂದ ಖರೀದಿ ಮಾಡಿ ಈ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಅತ್ಯುತ್ತಮ ಆಡಳಿತ ನಡೆಸಿ ರೋಗಿಗಳಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿದ್ದರು ಪ್ರತಿ ವರ್ಷ ನಡೆಯುವ ಬಾಂಡ್ಲುಪೇಟೆ ಶ್ರೀ ದೇವಿರಮ್ಮನವರ ಜಾತ್ರಾ ಮಹೋತ್ಸವ ಸುಗ್ಗಿ ಮಹೋತ್ಸವದಲ್ಲಿ ಎಷ್ಟೊಂದು ಪ್ರಸಿದ್ಧಿ ಹೊಂದಿದ್ದ ವ್ಯಕ್ತಿ ಸರಳವಾಗಿ ಜನರ ಮಧ್ಯೆ ಸಾಮಾನ್ಯರಂತೆ ಬಿಳಿ ವಸ್ತ್ರ ಧರಿಸಿ ಭಾಗವಹಿಸುತ್ತಿದ್ದರು, ಪರಿಚಯವಿದ್ದರೊಂದಿಗೆ ನಾಲ್ಕು ಮಾತು ನಗುಮುಖದ ಸೌಮ್ಯ ಸ್ವಭಾವದ ರಾಗಿದ್ದ ವ್ಯಕ್ತಿಯಾಗಿದ್ದರು, ಪ್ರತಿ ವರ್ಷ ಸುಗ್ಗಿಯಲ್ಲಿ ನಮ್ಮ ತಂದೆ ಬಿ.ಡಿ. ಬಸವಣ್ಣನವರ ಸಹೋದರ ಎಂದು ತೋರಿಸಿ ಪರಿಚಯಿಸಿದ್ದರು.
ಬಾಳುಪೇಟೆಯ ಒಂದು ಕುಟುಂಬದ ಕುಡಿ ಬೆಂಗಳೂರಲ್ಲಿ ಖ್ಯಾತ ವೈದ್ಯರಾಗಿ ಸೇವೆ ಸಲ್ಲಿಸಿದ್ದು ನಮ್ಮೆಲ್ಲರಿಗೂ ಹೆಮ್ಮೆಯಾಗಿದೆ.ಶ್ರೀಯುತರು ಪತ್ನಿ ಸಂಜೀವಿನಿ ಹಾಗೂ ಪುತ್ರ ಅಜಯ್ ಪುತ್ರಿ ಸಹನ ರವರನ್ನು ಹಾಗೂ ಸರ್ವರನ್ನು ಬಿಟ್ಟು ಅಗಲಿದ್ದಾರೆ. ಶ್ರೀಯುತರ ಕುಟುಂಬಕ್ಕೆ ವೈದ್ಯಕೀಯ ಲೋಕಕ್ಕೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.ಸೌಮ್ಯ ಸಹೃದಯ ಸರಳ ವ್ಯಕ್ತಿಯನ್ನು ಕಳೆದುಕೊಂಡಿರುವ ದುಃಖವನ್ನು ಬರಿಸುವ ಶಕ್ತಿ ಕುಟುಂಬಕ್ಕೆ ನೀಡಲೆಂದು ದೇವರನ್ನು ಪ್ರಾರ್ಥಿಸೋಣ.
(ಮಂಜರಾಬಾದ್ ತಾಲೂಕಿನ ಮಹಾನುಬಾವರುಗಳು…ರಸ್ತೆ ಮನೆ ಮಲ್ಲೇಗೌಡ ಮತ್ತು ಸಹೋದರ ಗುರುವೇಗೌಡ ವಂಶವೃಕ್ಷದ ಇತಿಹಾಸ ಪುಸ್ತಕದ ಅಧ್ಯಯನದಿಂದ)
ಯಡೇಹಳ್ಳಿ”ಆರ್”ಮಂಜುನಾಥ್.
9901606220