ಸಕಲೇಶಪುರ
ಆರ್ಧಿಕವಾಗಿ ಅಶಕ್ತರಾಗಿರುವಂತಹ ಕಟ್ಟೆ ಕಡೆಯ ವ್ಯಕ್ತಿಗೂ ಕಾನೂನಿನ ನೆರವು ಕಲ್ಪಿಸುವುದು ಕಾನೂನು ಅ ರಿವು ನೆರವು ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶೆ ಧನಲಕ್ಷ್ಮಿ ತಿಳಿಸಿದರು.
ತಾಲೂಕು ಕಾನೂನುಸೇವಾ ಸಮಿತಿ, ವಕೀಲರ ಸಂಘ ಮತ್ತು ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಲಯನ್ ಸೇವಾ ಮಂದಿರದಲ್ಲಿ ಆಯೋಜಿಸಿದ್ದ ಕಾನೂನು ಅರಿವು -ನೆರವು ಕಾರ್ಯಕ್ರಮದಲ್ಲಿ ಪ್ರಾಸ್ತವಿಕ ನುಡಿಗಳನ್ನಾಡಿದ ಅವರು ಇತ್ತೀಚ್ಚಿನ ವರ್ಷಗಳಲ್ಲಿ ವಿಜ್ಞಾನ ಬೆಳೆಯುತ್ತಿದ್ದಂತೆ ಅಪರಾಧಗಳು ಹೆಚ್ಚುತ್ತಿದ್ದು ಪ್ರತಿಯೊಬ್ಬರೂ ಸಾಧ್ಯವಾದಷ್ಟು ತಮ್ಮ ವೈಯಕ್ತಿಕ ಮಾಹಿತಿಗಳು ಗೋಪ್ಯವಾಗಿಡ ಬೇಕೆಂದು ಸಲಹೆ ನೀಡಿದರು.
ಹಿರಿಯ ನಾಗರೀಕ ಸಂರಕ್ಷಣೆ ಖಾಯಿದೆ ಕುರಿತು ಮಾಹಿತಿ ನೀಡಿದ ಸಿವಿಲ್ ನ್ಯಾಯಾಧೀಶರಾದ ಸುಧೀರ್ ಅವರು ಹಿರಿಯರ ಸಂರಕ್ಷಣೆ ಮತ್ತು ಸುರಕ್ಷತೆ ಮನಗಂಡು ರಾಷ್ಟ್ರೀಯ ಕಾನೂನು ಮಂಡಳಿ ಮತ್ತು ಕೇಂದ್ರ ಸರ್ಕಾರ ವಿಶೇಷ ಮುತುವರ್ಜಿ ವಹಸಿ ಸದರಿ ಖಾಯಿದೆ ಜಾರಿಗೆ ತಂದಿದ್ದು , ವಯಸ್ಸಾದ ತಂದೆ ತಾಯಿಗಳನ್ನ ಒಳಗೊಂಡ ಹಿರಿಯರನ್ನು ಸಂರಕ್ಷಿಸ ಬೇಕಿರುವ ಮಕ್ಕಳು ಅಧವಾ ಸಂಬಂದಿಕರ ನಿರ್ಲಕ್ಷ್ಯದ ಕುರಿತು ದೂರುಗಳು ಸಲ್ಲಿಸಲು ಸಂತ್ರಸ್ತರು ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಖುದ್ದು ಹಾಜರಾಗ ದೂರು ಸಲ್ಲಿಸ ಬಹುದಾಗಿದೆ ಇದಕ್ಕೆವ ಯಾವುದೇ ನ್ಯಾಯ ವಾದಿಗಳ ನೆರವಿನ ಅಗತ್ಯವಿಲ್ಲ ,ಉಪವಿಭಾಗಾಧಿಕಾರಿಗಳು 90ದಿನದೊಳಗೆ ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳ ಬೇಕು. ಆಸ್ತಿ ಬರೆಸಿಕೊಂಡು ಸಂರಕ್ಷಿಸದಿದ್ದರೂ ಕೂಡಾ ಅಂತಹಾ ಪ್ರಕರಣಗಳಲ್ಲಿ ಕಾನೂನಿನ ಕ್ರಮ ಜರುಹಿಸಲು ಸಾಧ್ಯವಿದೆ ಎಂದರು.
ಇತ್ತೀಚ್ಚಿನ ದಿನಗಳಲ್ಲಿ ಹೆಚ್ವುತ್ತಿರುವ ಸೈಬರ್ ಕ್ರ್ಯಂ ಬಗ್ಗೆ ಮಾಹಿತಿ ನೀಡಿದ ಸಹಾಯಕ ಸರಕಾರಿ ಅಭಿಯೋಜಕರಾದ ಪ್ರೇಂಕುಮಾರ್
ಅಂತರ್ ಜಾಲ ತಾಣಗಳಲ್ಲಿ ಸಾಕಷ್ಟು ಅವಘಡಗಳು ಹಲವು ಮಾದರಿಯಲ್ಲಿ ಅವಿತು ಕೂತಿದೆ. ಅಂತರ್ ಜಾಲತಾಣಗಳಲ್ಲಿ ಆಗುವಂತಹ ಹಲವು ವಂಚನೆಗಳು, ಹಣಿ ಟ್ರಾಪ್, ಬ್ಯಾಕ್ ಖಾತೆಗಳಿಂದ ಹಣ ಲಪಟಾಯಿಸುವುದು ಸೇರಿದಂತೆ ಹಲವು ಮೋಸಗಳಿಂದ ಬಚಾವಾಗಲು ವಾಟ್ಸ್ ಅಪ್ ,ಫೇಸ್ ಬುಕ್ ಹಾಗೂ ಹಲವು ಸೋಷಿಯಲ್ ಮೀಡಿಯಾಗಳಲ್ಲಿ ಸಾಧ್ಯವಾದಷ್ಟು ನಮ್ಮ ಮಾಹಿತಿಗಳು ,ಪ್ರೊಫೈಲ್ ಲಾಕ್ ಮಾಡುವುದು ಅಗತ್ಯ , ಹಾಗೇನೆ ನಾವು ಬಳಸುವ ಕೆಲ ಆಪುಗಳು ಮುಖಾಂತರ ನಮ್ಮ ಡಾಟಾಗಳು ಮಾರಾಟ ಮಾಡುವ ಜಾಲವೇ ಇದೆ , ವಾಟ್ಸ್ ಅಪಿನಲ್ಲಿ ಬರುವಂತಹಾ ಅಪರಿಚಿತ ವೀಡಿಯೋ ಕರೆಗಳನ್ನು ಸ್ವೀಕರಿಸುವಾಗ ಎಚ್ವರದಿಂದಿರ ಬೇಕು. ಯಾವುದೆ ಸರಕಾರಿ ಇಲಾಖೆಗಳ ಹೆಸರಿನಲ್ಲಿ ಬರುವ ಮೆಸೇಜುಗಳು,ಪ ಲಿಂಕುಗಳು ಅತ್ಯಂತ ವಿವೇಚನೆಯಿಂದ ಬಳಸುವುದು,ನಮ್ಮ ಖಾಸಗಿ ಮಾಹಿತಿಗಳು ಯಾರೊಂದಿಗೂ ಹಂಚಿ ಕೊಳ್ಳದೆ ಇರುವುದು ನಮ್ಮ ಮಾನಸಿಕ ಹಾಗೂ ಆರ್ಧಿಕ ನಷ್ಟಗಳು ತಡೆಗಟ್ಟುವ ಮುಂಜಾಗ್ರತಾ ಕ್ರಮಗಳಾಗಿದೆ ಎಂದರು. ಒಂದು ವೇಳೆ ಈ ರೀತಿಯ ವಂಚನೆಗೊಳಗಾಗಿದ್ದತೆ ಕೂಡಲೇ ನಾಷಣಲ್ ಸೈಬರ್ ರ್ಕ್ರೈಂ ಸೇವೆಯ 1930 ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಡಿದರೆ ತನಿಖೆ ನಡೆಸಲಾಗುವುದು ಎಂದರು.
ವಕೀಲರ ಸಂಘದ ನಿಕಟ ಪೂರ್ವ ಅಧ್ಯಕ್ಷ ಯಶ್ವಂತಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಧೆ ಅಧ್ಯಕ್ಷ ಜಯಶಂಕರ್, ಕಾರ್ಯದರಶಿ ವಿಶ್ವನಾಥ್, ಖಜಾಂಜಿ ದುರ್ಗೇಶ್ ಉಪಸ್ಥಿತರಿದ್ದರು