Sunday, April 20, 2025
Homeಸುದ್ದಿಗಳುಹೇಮಾವತಿ ನದಿಯನ್ನು ಕಲುಷಿತಗೊಳಿಸಲು ಮುಂದಾದ ಸಕಲೇಶಪುರದ ಪುರಸಭೆ.

ಹೇಮಾವತಿ ನದಿಯನ್ನು ಕಲುಷಿತಗೊಳಿಸಲು ಮುಂದಾದ ಸಕಲೇಶಪುರದ ಪುರಸಭೆ.

ಹೇಮಾವತಿ ನದಿಯನ್ನು ಕಲುಷಿತಗೊಳಿಸಲು ಮುಂದಾದ ಸಕಲೇಶಪುರದ ಪುರಸಭೆ.

ನದಿ ತೀರದಲ್ಲಿ ಬೃಹತ್ ಗುಂಡಿ ತೋಡಿ ಘನತ್ಯಾಜ್ಯ ಸುರಿಯುತ್ತಿರುವ ಪುರಸಭೆ ವಿರುದ್ಧ ಸಾರ್ವಜನಿಕರ ಆಕ್ರೋಶ.

ಯುವ ಕಾಂಗ್ರೆಸ್ ಮುಖಂಡ ಜಾವೇದ್ ರಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ

ಪರಿಸರ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಘನತ್ಯಾಜ್ಯ ವಿಲೇವಾರಿ ನಡೆಸುತ್ತಿರುವ ಪುರಸಭೆ

 

ಸಕಲೇಶಪುರ : ಪುರಸಭೆಯಿಂದ ಹೇಮಾವತಿ ಹೊಳೆ ತೀರದಲ್ಲಿ 25 ಅಡಿಗಳಷ್ಟು ಆಳದವರೆಗೆ ಗುಂಡಿಯನ್ನು ತೆಗೆದು, ಸಕಲೇಶಪುರ ಪಟ್ಟಣದ ತ್ಯಾಜ್ಯ ವಸ್ತುಗಳನ್ನು ಸುರಿಯುತ್ತಿರುವುದನ್ನು ತಡೆಯುವಂತೆ ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್ ಅವರಿಗೆ ಯುವ ಕಾಂಗ್ರೆಸ್ ಮುಖಂಡರು ಸೋಮವಾರ ಮನವಿ ಸಲ್ಲಿಸಿದ್ದಾರೆ.

 

 

ಸಕಲೇಶಪುರ ಪುರಸಭೆಯ ಘನತ್ಯಾಜ್ಯ ವಸ್ತುಗಳನ್ನು ಸುರಿಯಲು ಮಳಲಿ ಗ್ರಾಮದಲ್ಲಿ ಸ್ಥಳ ಗುರುತಿಸಿದ್ದರೂ ಸಹ, ಪುರಸಭಾ ಅಧಿಕಾರಿಗಳು ರಾಜಕೀಯ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗಿ, ನಿಗಧಿತ ಸ್ಥಳದಲ್ಲಿ ಸುರಿಯದ, ಇತ್ತೀಚೆಗೆ ಸಕಲೇಶಪುರ ಟೌನ್, ಹೇಮಾವತಿ ಹೊಳೆ ತೀರದಲ್ಲಿ , ಹೇಮಾವತಿ ಹಿನ್ನೀರು ನಿಲ್ಲವಂತಹ ಖಾಸಗಿಯವರ ಜಮೀನಿನಲ್ಲಿ ಸುಮಾರು 28 ಗಳಷ್ಟು ಆಳದವರೆಗೆ ಗುಂಡಿಯನ್ನು ತೆಗೆದು, ಸಕಲೇಶಪುರ ಘನ ತ್ಯಾಜ್ಯವಸ್ತುಗಳನ್ನು ಸುರಿಯುತ್ತಾ, ಪರಿಸರವನ್ನು ಹಾಳು ಮಾಡುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಯುವ ಕಾಂಗ್ರೆಸ್ ಮುಖಂಡ ಜಾವೇದ್ ಆರೋಪಿಸಿದ್ದಾರೆ.

 

ಮಳೆಗಾಲದಲ್ಲಿ ಹೇಮಾವತಿ ನೀರಿನ ಹರಿವು ಈ ಗುಂಡಿಯ ಸುರಿಯುವ ತ್ಯಾಜ್ಯ ವಸ್ತುಗಳು, ನೀರಿನೊಂದಿಗೆ ಸೇರಿಕೊಂಡು, ಜಲಚರ ಜೀವಿಗಳ ಪ್ರಾಣಕ್ಕೆ ಮಾರಕವಾಗುವುದಲ್ಲದೆ, ಈ ನೀರನ್ನು ಕುಡಿಯುವ

ಸಾರ್ವಜನಿಕರು, ಕೊರೋನದಂತಹ ಮಹಾಮಾರಿ ಕಾಯಿಲೆಗಳಿಗೆ ತುತ್ತಾಗ, ಆರೋಗ್ಯ ಸಮಸ್ಯೆಯನ್ನು ಎದುರಿಸಲು ಕಾರಣವಾಗುತ್ತದೆ ಇದಕ್ಕೆ ನೇರವಾಗಿ ಪುರಸಭೆಯೆಂದು ಅಸಮಾಧಾನ ಹೊರಹಾಕಿದ್ದಾರೆ.

ಅಲ್ಲದೆ, ಈ ಭಾಗದ ಈಗಾಗಲೇ ಕಾಡಾನೆಗಳು ಓಡಾಡುತ್ತಿರುವುದರಿಂದ,ತೆಗೆದಿರುವ ಬೃಹತ್ ಗುಂಡಿಯಲ್ಲಿ ಕಾಡಾನೆಗಳು ಬಿದ್ದು , ಪ್ರಾಣಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಪುರಸಭೆಯವರು ಹೊಳೆ ತೀರದಲ್ಲಿ ಖಾಸಗಿಯವರ ಜಮೀನನ್ನು ವರ್ಷರ 15 ಲಕ್ಷಕ್ಕೂ ಹೆಚ್ಚು ಹಣಕ್ಕೆ ಟೆಂಡ‌ ನೀಡಿ, ಸರ್ಕಾರಿ ಬೊಕ್ಕಸವನ್ನು ಪೋಲು ಮಾಡಿರುತ್ತಾರೆ. ಘನ ತ್ಯಾಜ್ಯವನ್ನು ಸುರಿಯಲು ಪರಿಸರ ಮಾನ್ಯ ಇಲಾಖೆಯಿಂದಾಗಲೀ ಅಥವಾ ಸಂಬಂಧಪಟ್ಟ ಇತರೆ ಯಾವುದೇ ಇಲಾಖೆಗಳಿಂದಲೂ ಸಹ ಅನುಮತಿಯನ್ನು ಪಡೆಯದೆ, ಅಕ್ರಮವಾಗಿ ಸುರಿಯುತ್ತಿರುವ ಕ್ರಮವನ್ನು ಸಾರ್ವಜನಿಕರು ಬಲವಾಗಿ ವಿರೋಧಿಸುತ್ತಿರುವುದರಿಂದ, ತಾವುಗಳು ತಕ್ಷಣ ಸ್ಥಳಪರಿಶೀಲನೆ ನಡೆಸಿ, ಸಕಲೇಶಪುರ ಮುರಸಭೆಯವರು ಹೇಮಾವತಿ ನದಿಯ ಹಿನ್ನೀರು ನಿಲ್ಲುವ ಖಾಸಗಿಯವರ ಜಮೀನಿನಲ್ಲಿ ತೆಗೆದಿರುವ ಗುಂಡಿಯನ್ನು ಮುಚ್ಚಿಸಿ, ಘನ ತ್ಯಾಜ್ಯ ವಸ್ತುಗಳನ್ನು ಸುರಿಯುತ್ತಿರುವುದನ್ನು ತಡೆಯುವಂತೆ ಮನವಿ ಮಾಡಿದ್ದಾರೆ.

RELATED ARTICLES
- Advertisment -spot_img

Most Popular