ಸಕಲೇಶಪುರ : ಭಜರಂಗ ದಳದಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದ ಸಕಲೇಶಪುರ ರಘು.
ನೂರಾರು ಕಾರ್ಯಕರ್ತರಿಂದ ರಘು ಭೇಟಿ ತೀರ್ಮಾನ ವಾಪಸ್ ಪಡೆಯುವಂತೆ ಒತ್ತಾಯ.
ಸಕಲೇಶಪುರ: ವೈಯುಕ್ತಿಕ ಕಾರಣಗಳಿಂದ ಭ ಜರಂಗದಳ ಜವಬ್ದಾರಿಯಿಂದ ಹಿಂದೆ ಉಳಿಯಲು ತೀರ್ಮಾನಿಸಿರುವ ಭಜರಂಗದಳ ರಾಜ್ಯ ಸಹ ಸಂಚಾಲಕ ರಘು ಸಕಲೇಶಪುರರವರ ತೀರ್ಮಾನ ಹಿಂಪಡೆಯಬೇಕೆಂದು ಆಗ್ರಹಿಸಿ ವಿವಿಧ ಜಿಲ್ಲೆಗಳ ಭಜರಂಗದಳ ಕಾರ್ಯಕರ್ತರು ರಘುರವರ ನಿವಾಸಕ್ಕೆ ಭೇಟಿ ಮಾಡಿ ಮನವಿ ಮಾಡಿದರು.
ಕಳೆದ 2 ದಶಕಗಳಿಂದ ಹಿಂದೂ ಸಂಘಟನೆಯಲ್ಲಿ ನಿರಂತರವಾಗಿ ಗುರುತಿಸಿಕೊಂಡಿರುವ ರಘು ಸಕಲೇಶಪುರ ರಾಜ್ಯದ ಪ್ರಬಲ ಹಿಂದೂ ಮುಖಂಡರಲ್ಲಿ ಒಬ್ಬರಾಗಿದ್ದು , ತನ್ನ ನೇರ ನುಡಿ ಹಾಗೂ ಸಂಘಟನೆ ಚಾತುರ್ಯದಿಂದ ರಾಜ್ಯದ ವಿವಿಧೆಡೆ ಭಜರಂಗದಳ ಸಂಘಟನೆಯನ್ನು ಸದೃಡಗೊಳಿಸಿ ಹಿಂದೂ ಯುವಕರ ಕಣ್ಮಣಿಯಾಗಿದ್ದರು. ಆದರೆ ಕೆಲವೊಂದು ವೈಯುಕ್ತಿ ಕಾರಣಗಳಿಂದ ಸಂಘಟನೆಯಿಂದ ದೂರ ಉಳಿಯುವ ತೀರ್ಮಾನವನ್ನು ಅವರು ಕೈಗೊಂಡಿದ್ದರಿಂದ ಆತಂಕಗೊಂಡ ವಿವಿಧ ಜಿಲ್ಲೆಗಳಿಂದ ಕಾರ್ಯಕರ್ತರು ಆಗಮಿಸಿ ಸಂಘಟನೆಯಿಂದ ಹಿಂದೆ ಸರಿಯುವ ತೀರ್ಮಾನವನ್ನು ಪುನರ್ ಪರಿಶೀಲಿಸಿ, ನಿಮ್ಮ ನೋವುಗಳಿಗೆ ನಾವು ಧ್ವನಿಯಾಗಿರುತ್ತೇವೆ ಎಂದು ಮನವಿ ಮಾಡಿದರು. ಇದೇ ವೇಳೆ ಕೆಲವು ಕಾರ್ಯಕರ್ತರು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರು ಸಹ ಕಾರ್ಯಕರ್ತರಿಗೆ ಯಾವುದೆ ರೀತಿಯ ನೆರವು ನೀಡುತ್ತಿಲ್ಲ. ಕೆಲವು ಕಾರ್ಯಕರ್ತರ ಮೇಲೆ ದಾಖಲಾಗಿರುವ ಪ್ರಕರಣವನ್ನು ಸರ್ಕಾರ ತೆಗೆಯಲು ಮುಂದಾಗುತ್ತದೆ. ಆದರೆ ಹಗಲು ರಾತ್ರಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಕಾರ್ಯಕರ್ತರ ಮೇಲೆ ಹಲವಾರು ಪ್ರಕರಣಗಳಿದ್ದರು ಸಹ ಸರ್ಕಾರ ಯಾವುದೆ ಪ್ರಕರಣ ತೆಗೆಯಲು ಮುಂದಾಗುವುದಿಲ್ಲ, ಹಿಂದುತ್ವಕ್ಕಾಗಿ ಹೋರಾಟ ಮಾಡುವವರು ಯಾರೋ ಆದರೆ ಲಾಭ ಮಾಡಿಕೊಳ್ಳುವುದು ಮತ್ಯಾಯಾರೋ, ಈ ಹಿನ್ನೆಲೆಯಲ್ಲಿ ರಘುಜೀ ಭಜರಂಗದಳ ಸಂಘಟನೆಯಿಂದ ದೂರ ಉಳಿಯುವ ತೀರ್ಮಾನ ಕೈಗೊಂಡಿರುವುದು ಸರಿ, ತಮ್ಮ ಸ್ವಂತ ಶಕ್ತಿಯಿಂದಲೆ ಅವರು ಸಂಘಟನೆ ಮಾಡಲಿ ಯಾವುದೆ ಸಂಘಟನೆಗಳ ಹಂಗು ಅವರಿಗೆ ಬೇಡ,ಎಂದು ಕೆಲವು ಕಾರ್ಯಕರ್ತರು ಆಕೊ್ರೀಷ ವ್ಯಕ್ತಪಡಿಸಿದರು. ರಘುಜೀರವನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ಬೆಳಗ್ಗಿನಿಂದ ಕಾರ್ಯಕರ್ತರ ಸೈನ್ಯವೇ ಹರಿದು ಬಂದಿತು.
ಚಿಕ್ಕಮಗಳೂರಿನ ದತ್ತ ಪೀಠದಲ್ಲಿ ಇಂದು ಅರ್ಚಕರ ನೇಮಕಾತಿಗಾಗಿ ಹಲವಾರು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದ ಹಿಂದೂಪರ ಸಂಘಟನೆಗಳ ಪ್ರಮುಖರಲ್ಲಿ ರಘು ಒಬ್ಬರಾಗಿದ್ದರು. ಗೋ ಹತ್ಯೆ ವಿಚಾರದಲ್ಲಿ ಸ್ಥಳೀಯವಾಗಿ ಸಾಕಷ್ಟು ಸಂಘರ್ಷಗಳನ್ನು ಎದುರಿಸಿದ ವ್ಯಕ್ತಿಯಾಗಿದ್ದು ರಾಜ್ಯ ಸರ್ಕಾರ ಗೋ ಹತ್ಯೆ ತಡೆಗೆ ನಿಷೇಧ ಕಾಯ್ದೆ ಜಾರಿಗೆ ತರುವಲ್ಲಿ ರಘು ಅವರ ಪಾತ್ರ ದೊಡ್ಡದಿದೆ.ದಕ್ಷಿಣ ಪ್ರಾಂತ್ಯದಲ್ಲಿ ಅಕ್ರಮವಾಗಿ ಗೋ ಹತ್ಯೆ ನಡೆಸುವವರ ಪಾಲಿಗಂತೂ ಸಿಂಹ ಸ್ವಪ್ನವಾಗಿದ್ದರು. ಹೀಗೆ ಹತ್ತು ಹಲವು ಹಿಂದುತ್ವ ಪರ ಹೋರಾಟದಲ್ಲಿ ತೊಡಗಿಸಿಕೊಂಡು 50ಕ್ಕೂ ಹೆಚ್ಚು ಕೇಸ್ ಗಳನ್ನು ತನ್ನ ಮೇಲೆ ದಾಖಲಿಸಿಕೊಂಡು ಇದೀಗ ವೈಯಕ್ತಿಕ ಕಾರಣ ನೀಡಿ ಸಂಘಟನೆಯಿಂದ ದೂರ ಉಳಿಯುವ ತೀರ್ಮಾನ ತೆಗೆದುಕೊಂಡಿರುವುದು ಕಾರ್ಯಕರ್ತರಿಗೆ ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ