ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ವಲಯ ಅರಣ್ಯಾಧಿಕಾರಿ ಶಿಲ್ಪಾ ಅಮಾನತ್ತು?
ಸಕಲೇಶಪುರ:ಸಕಲೇಶಪುರ ವಲಯದಲ್ಲಿ ವಲಯ ಅರಣ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕು|| ಶಿಲ್ಲಾ ಎಸ್. ಎಲ್ ಇವರ ವಲಯ ಸಿಬ್ಬಂದಿಗಳನ್ನು ನಿಯಂತ್ರಿಸುವಲ್ಲಿ ವಿಫಲತೆ, ಅರಣ್ಯ ಅಪರಾಧ ಪ್ರಕರಣಗಳ ತನಿಖೆ ನಡೆಸುವಲ್ಲಿ ವಿಫಲತೆ, ಅವರಿಗೆ ನೀಡಿದ ಭೌತಿಕ ಮತ್ತು ಆರ್ಥಿಕ ಪ್ರಗತಿಯನ್ನು ಸಾಧಿಸುವಲ್ಲಿ ವಿಫಲತೆ, ಸಾರ್ವಜನಿಕರೊಂದಿಗೆ ಸಮನ್ವಯ ಸಾಧಿಸಿಕೊಂಡು ಆನ ಮಾನವ ಸಂಘರ್ಷ ನಿಯಂತ್ರಿಸುವಲ್ಲಿ ವಿಫಲತೆ, ಅಧಿಕಾರಿ/ಸಿಬ್ಬಂದಿ ವರ್ಗದವರ ನಡುವ ಭಿನ್ನಾಭಿಪ್ರಾಯ ಉಂಟಾಗಲು ಹಾಗೂ ವಿಭಾಗದ ಹಾಗೂ ವಲಯದ ಆಡಳಿತಾತ್ಮಕ ತೊಡಕು ಉಂಟಾಗಲು ನೇರ ಕಾರಣಕರ್ತರಾಗಿರುವುದು, ಮೇಲಾಧಿಕಾರಿಗಳ ಯಾವುದೇ ಸೂಚನೆ ಹಾಗೂ ಆದೇಶ ಪತ್ರಗಳಿಗೂ ತಮ್ಮ ಕಾರ್ಯಶೈಲಿಯನ್ನು ತಿದ್ದುಕೊಳ್ಳದೇ ಇರುವುದು, ಜವಾಬ್ದಾರಿಯುತ ಸ್ನಾನದಲ್ಲಿರುವ ಸಮವಸ್ತ್ರಧಾರಿಯಾದ ಅಧಿಕಾರಿಯವರು ಆಡಳಿತಾತ್ಮಕ ಗಂಭೀರ ವಿಷಯಗಳ ಬಗ್ಗೆ ಗಮನ ಹರಿಸದ ಇರುವುದು, ವಲಯ ಅರಣ್ಯಾಧಿಕಾರಿಗೆ ಇರುವ ಕರ್ತವ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫಲತೆ, ಸರ್ಕಾರಿ ಸ್ಮತ್ತನ್ನು ರಕ್ಷಣೆ ಮಾಡುವಲ್ಲಿ ವಿಫಲರಾಗಿ ಆರ್ಥಿಕ ನಷ್ಟ ಉಂಟು ಮಾಡಿರುವುದರಿಂದ, ಕೇಂದ್ರ ಸ್ನಾನದಲ್ಲಿದ್ದಲ್ಲಿ ಈ ಕರ್ತವ್ಯ ಲೋಪಗಳಿಗೆ ಸಂಬಂಧಿಸಿದ ಪೂರಕ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆಯಿರುತ್ತದೆಂದು ಹಾಗೂ ಪೂರಕ ಸರ್ಕಾರಿ ಪರ ಸಾಕ್ಷಿಗಳಿಗೆ ಬೆದರಿಕೆ ಒಡ್ಡುವ ಸಾಧ್ಯತೆ ಇರುವುದರಿಂದ, ಸದರಿಯವರ ವಿರುದ್ಧ ಇಲಾಖಾ ವಿಚಾರಣೆಯನ್ನು ಬಾಕಿಯಿರಿಸಿ, ಕೂಡಲೇ ಸಕಲೇಶಪುರ ವಲಯದ ಕರ್ತವ್ಯದಿಂದ ಅಮಾನತ್ತುಗೊಳಿಸಿ, ಇವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಿಂದ ಆದೇಶ ಮಾಡಲಾಗಿರುತ್ತದೆ.