ಹಾಸನ: ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವಲ್ಲಿ ಯಶಸ್ವಿಯಾಗಿದ್ದಾರೆ.
ಸಕಲೇಶಪುರ ತಾಲೂಕಿನ ಯಸಳೂರು ಸಮೀಪದ ತಂಬಲಗೆರೆ ಗ್ರಾಮದ ಅನಿಲ್ ಮತ್ತು ನಾಗರಾಜ್ ಬಂಧಿತ ಆರೋಪಿಗಳು. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನವೀನ್ ಮತ್ತು ಸ್ನೇಹಿತರು ಕೆರೆಯದಡದಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ನಾಗರಾಜ್ ಮತ್ತು ಅನಿಲ್ ತಮ್ಮ ಬಂದುಕಿನಿಂದ ಗುಂಡು ಹಾರಿಸಿದ ಹಿನ್ನೆಲೆಯಲ್ಲಿ ನವೀನ್ ಸ್ಥಳದಲ್ಲೇ ಮೃತಪಟ್ಟರೆ ದಯಾನಂದ್ ಮತ್ತು ಪದ್ಮನಾಭರಿಗೆ ಗಂಭೀರವಾಗಿ ಗಾಯಗಳಾಗಿದ್ದು ಅವರು ಸಕಲೇಶಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏನಿದು ಪ್ರಕರಣ?
ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿರುವ ಮತ್ತು ಸ್ವಯಂಸೇವಾ ಸಂಘದಲ್ಲಿ ಗುರುತಿಸಿಕೊಂಡಿದ್ದ ಮೃತಪಟ್ಟ ನವೀನ್, ಅಕ್ರಮವಾಗಿ ಮರಳು ದಂಧೆ ಮಾಡುತ್ತಿದ್ದ ಎನ್ನಲಾಗಿದೆ. ಈ ವಿಚಾರವನ್ನು ಪೊಲೀಸರಿಗೆ ಆರೋಪಿ ನಾಗರಾಜ್ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ, ಮೃತ ನವಿನ್ ನಾಗರಾಜ್ ಗೆ ಬೆದರಿಕೆ ಜೊತೆಗೆ ಕೊಲೆ ಮಾಡುವುದಾಗಿ ಬೆದರಿಸಿದ್ದನಂತೆ. ಈ ಹಿನ್ನೆಲೆಯಲ್ಲಿ ನಾಗರಾಜ್ ಕೊಲೆ ಮಾಡುವ ಸಂಚುರೂಪಿಸಬಹುದು ಎಂಬ ಕಾರಣಕ್ಕೆ ನವೀನ್ ಮತ್ತು ಆತನ ಸ್ನೇಹಿತರು ಕೆರೆಯ ದಡದಲ್ಲಿ ಪಾರ್ಟಿ ಮಾಡುವ ವೇಳೆ ಆರೋಪಿ ನಾಗರಾಜ್ ಮತ್ತು ಅನಿಲ್ ಮೂಲಕ ಲೈಸೆನ್ಸ್ ಪಡೆದಿದ್ದ ಬಂದೂಕಿನಿಂದ ಗುಂಡು ಹಾರಿಸಿ ನವೀನನ್ನು ಕೊಲೆ ಮಾಡಲಾಗಿದೆ.
ಇನ್ನು ಪ್ರಕರಣಕ್ಕೆ ಪರೋಕ್ಷವಾಗಿ ಪೊಲೀಸರು ಕಾರಣ ಎಂದರೆ ತಪ್ಪಾಗಲ್ಲ. ಅಕ್ರಮ ಮರಳುಗಾಡಿಕೆ ಮಾಡುತ್ತಿದ್ದಾರೆ ಅಂತ ಪೊಲೀಸರಿಗೆ ಗೌಪ್ಯ ಮಾಹಿತಿ ನೀಡಿದರೆ ಆ ಮಾಹಿತಿ ಅಕ್ರಮ ಮರಳುಗಾರಿಕೆ ಮಾಡುವವರ ಗಮನಕ್ಕೆ ಬರುತ್ತದೆ ಎಂದರೆ ಮರಳುಗಾರಿಕೆಯಲ್ಲಿ ಪೊಲೀಸರ ಪಾತ್ರವೂ ಕೂಡ ಎದ್ದು ಕಾಣುತ್ತದೆ. ಗೌಪ್ಯ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ನವೀನ್ ಬೆದರಿಕೆ ಹಾಕಿದ್ದು ಈ ಪ್ರಕರಣ ಜನಗಳು ಪೊಲೀಸರು ಪರೋಕ್ಷವಾಗಿ ಕಾರಣ ಎಂದು ತಪ್ಪಾಗಲ್ಲ.