ಕರವೇ ಸ್ವಾಭಿಮಾನಿ ಸೇನೆಯಿಂದ ಎದೆ ಒಡೆದ ನೋವುಗಳು ಎಂಬ ಪುಸ್ತಕ ಲೋಕಾರ್ಪಣೆ
ಸಕಲೇಶಪುರ : ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ವತಿಯಿಂದ ಗುರುವಾರ ಪಟ್ಟಣದಲ್ಲಿರುವ ಸಂಘಟನೆಯ ಕಚೇರಿಯಲ್ಲಿ ತಾಲೂಕಿನ
ಇಬ್ಬಡಿ ಕೊಣ್ಣೂರು ಗ್ರಾಮದ ಕುಮ್ಸನ್ ಡೈಶಿನ್ ರವರು ಬರೆದಿರುವ “ಎದೆ ಒಡೆದ ನೋವುಗಳು” ಎಂಬ ಕನ್ನಡದ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು.
ಈ ವೇಳೆ ಮಾತನಾಡಿದ ಸ್ವಾಭಿಮಾನಿ ಸೇನೆಯ ತಾಲೂಕು ಅಧ್ಯಕ್ಷ ಸಾಗರ್ ಜಾನಕೆರೆ, ಕುಮ್ಸನ್ ಡೈಶಿನ್ ರವರು ಕನ್ನಡದಲ್ಲಿ ಅದ್ಭುತವಾದ ಪುಸ್ತಕವನ್ನು ಬರೆದಿರುವುದು ಸಂತೋಷದ ವಿಷಯ. ಸಮಾಜದಲ್ಲಿ ಇನ್ನೂ ಕೂಡ ಅಸ್ಪೃಶ್ಯತೆ ಜೀವಂತವಾಗಿದೆ ಇದನ್ನು ಹೋಗಲಾಡಿಸಲು ಎಲ್ಲಾ ವರ್ಗದ ಜನರು ಕೈಜೋಡಿಸಬೇಕು. ಸಮ ಸಮಾಜದ ನಿರ್ಮಾಣದ ದಿಕ್ಕಿನಲ್ಲಿ ನಾವೆಲ್ಲ ಸಾಗುವಂತರಾಗಬೇಕು ಆ ನಿಟ್ಟಿನಲ್ಲಿ ಈ ಪುಸ್ತಕ ಬೆಳಕು ಚೆಲ್ಲುವ ಕೆಲಸ ಮಾಡಿದೆ ಎಂದು ಹೇಳಿದರು.
ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಬೆಳಗೋಡು ಹೋಬಳಿ ಅಧ್ಯಕ್ಷ ದರ್ಶನ್ ಪೂಜಾರಿ ಸುಳ್ಳಕಿ ಘಟಕದ ಅಧ್ಯಕ್ಷ ತೇಜಸ್,ಬಾಗೆ ಘಟಕದ ಅಧ್ಯಕ್ಷ ಋತೇಶ್,ಶ್ರೀನಿವಾಸ್ ಸೇರಿದಂತೆ ಮುಂತಾದವರಿದ್ದರು.