Monday, November 25, 2024
Homeಸುದ್ದಿಗಳುಸಕಲೇಶಪುರ1615 ನೇ ಮದ್ಯವರ್ಜನ ಶಿಬಿರ ಶಾಸಕ ಎಚ್ ಕೆ ಕುಮಾರಸ್ವಾಮಿಯವರಿಂದ ಉದ್ಘಾಟನೆ .

1615 ನೇ ಮದ್ಯವರ್ಜನ ಶಿಬಿರ ಶಾಸಕ ಎಚ್ ಕೆ ಕುಮಾರಸ್ವಾಮಿಯವರಿಂದ ಉದ್ಘಾಟನೆ .

1615 ನೇ ಮದ್ಯವರ್ಜನ ಶಿಬಿರ ಶಾಸಕ ಎಚ್ ಕೆ ಕುಮಾರಸ್ವಾಮಿಯವರಿಂದ ಉದ್ಘಾಟನೆ .

ಸಕಲೇಶಪುರದ ತೇರಪಂಥ್ ಸಭಾ ಭವನದಲ್ಲಿ 8 ದಿನಗಳವರೆಗೆ ನಡೆಯಲಿರುವ ಶಿಬಿರ.

> ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಸಕಲೇಶಪುರ ತಾಲ್ಲೂಕು.

> 1615ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಸಕಲೇಶಪುರ ತಾಲ್ಲೂಕು ಕಸಬಾ ವಲಯ,

> ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್ (ರಿ.), ಬೆಳ್ತಂಗಡಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು ಜಿಲ್ಲಾ ಜನಜಾಗೃತಿ ವೇದಿಕೆ, ಹಾಸನ

> ಜೈನ ಶ್ವೇತಾಂಬರ ತೇರಪಂಥ್ ಸಂಘ,

> ಸಕಲೇಶಪುರ ಲಯನ್ಸ್ ಸಂಸ್ಥೆ,

> ಸಕಲೇಶಪುರ, ರೋಟರಿ ಸಂಸ್ಥೆ,

> ಸಕಲೇಶಪುರ ಕ್ರಾಫರ್ಡ್‌ ಸರ್ಕಾರಿ ಆಸ್ಪತ್ರೆ, ಪೋಲಿಸ್ ಇಲಾಖೆ,

> ಸಕಲೇಶಪುರ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ,

 > ಸಕಲೇಶಪುರ ತಾಲ್ಲೂಕು ಸಕಲೇಶಪುರ ತಾಲ್ಲೂಕಿನ ಎಲ್ಲಾ ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಸಹೃದಯ ದಾನಿಗಳ ಸಂಯುಕ್ತಾಶ್ರಯದಲ್ಲಿ

8ದಿನಗಳವರೆಗೆ ಮದ್ಯವರ್ಜನ ಶಿಬಿರ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಚ್ ಕೆ ಕುಮಾರಸ್ವಾಮಿ ಕುಡಿತದ ಚಟದಿಂದ ಮಾನಸಿಕ ನೆಮ್ಮದಿ, ಆರೋಗ್ಯ ಮತ್ತು ಆರ್ಥಿಕ ಸ್ಥಿತಿಗತಿ ಹಾಳಾಗುತ್ತದೆ. ಹಾಗಾಗಿ ಕುಡಿತ ಸೇರಿದಂತೆ ಯಾವುದೇ ಚಟಕ್ಕೆ ಬಲಿಯಾಗದೇ ಎಲ್ಲರೂ ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಅವರು ತಿಳಿಸಿದರು.

ಮದ್ಯಸೇವನೆ ಸಮಾಜದ ದುಷ್ಟಟಗಳಲ್ಲಿ ಒಂದಾಗಿದೆ. ಇದು ಸಮಾಜದ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಇಂತಹ ಪಿಡುಗನ್ನು ಸಮಾಜದಿಂದ ಹೊರ ಓಡಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರಂತರ ಶ್ರಮಸಿಸುತ್ತಿರುವುದು ಶ್ಲಾಘನೀಯ ಎಂದರು .

ಕಾರ್ಯಕ್ರಮದಲ್ಲಿ 1615 ಮದ್ಯ ವರ್ಜನ ಶಿಬಿರದ ಅಧ್ಯಕ್ಷ ವಿಜಯ್ ರಾಜ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಚಂಚಲ ಕುಮಾರಸ್ವಾಮಿ, ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಸುಲೋಚನಾ ರಾಮಕೃಷ್ಣ, ಎಸ್. ಕೆ. ಡಿ. ಆರ್. ಡಿ. ಪಿ. ಬಿ. ಸಿ ಟ್ರಸ್ಟ್ ನಾ ಹಾಸನ ಜಿಲ್ಲಾ ನಿರ್ದೇಶಕರಾದ ಮಮತ ಹರೀಶ್ ರಾವ್, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಸಿ.ಪಿ ಪ್ರಸನ್ನ ಕುಮಾರ್, ನಗರ ಠಾಣೆಯ ಪಿ ಎಸ್ ಐ ಶಿವಶಂಕರ್, ಲಯನ್ಸ್ ಸೇವಾ ಸಂಸ್ಥೆಯ ಅಧ್ಯಕ್ಷ ಜಯ ಶಂಕರ್, ರೋಟರಿ ಕ್ಲಬ್ ಅಧ್ಯಕ್ಷ ಸಹನಾ ಶಶಿಧರ್ ಜಿಲ್ಲಾ ಜಾಗೃತಿ ವೇದಿಕೆಯ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಜನ ಜಾಗೃತಿ ವೇದಿಕೆಯ ಜಿಲ್ಲಾ ಸದಸ್ಯರರಾದ ಗಿರೀಶ್ ಉಮಾನಾಥ್ ಸುವರ್ಣ, ಮದ್ಯ ವರ್ಜನ ಶಿಬಿರದ ಗೌರವ ಅಧ್ಯಕ್ಷರಾದ ದೇವರಾಜ್ ಸೇರಿದಂತೆ ಮುಂತಾದವರು ಇದ್ದರು.

RELATED ARTICLES
- Advertisment -spot_img

Most Popular