*ಸಕಲೇಶಪುರದ ಪಟ್ಟಣದ ರಾಜಬೀದಿಯಲ್ಲಿ ಭೀಮ ಕೋರೆಂಗಾವ್ ವಿಜಯಸ್ತಂಭದ ಮಾದರಿ ರಥವನ್ನು ಎಳೆಯುವ ಘನ ಉದ್ದೇಶವೇನೆಂದರೆ…*
‘ಕೋರೆಗಾಂವ ವಿಜಯಸ್ತಂಭ’ವು ಎರಡು ಮಹತ್ವದ ಸಂದೇಶಗಳನ್ನು ಹೇಳುತ್ತದೆ.ಮೊದಲನೆಯ ಸಂದೇಶವೇನೆಂದರೆ, ಸ್ವಾಭಿಮಾನ ಪ್ರಜ್ಞೆಗಿರುವ ಅಪರಿಮಿತ ಶಕ್ತಿ, ಮಹಾರ್ ಪಡೆಯ ನಾಯಕ ಸಿದನಾಕನು ಪೇಳ್ವೆ ಬಾಜಿರಾಯನನ್ನು ರಹಸ್ಯವಾಗಿ ಭೇಟಿ ಮಾಡಿ,
‘ನಾವು ನಿಮ್ಮ ಪರವಾಗಿ ಹೋರಾಡಲು ಸಿದ್ಧರಿದ್ದೇವೆ. ಯುದ್ಧ ಗೆದ್ದ ನಂತರ, ಸಮಾಜದಲ್ಲಿ ನಮಗೆ ನೀನು ಎಂತಹ ಸ್ಥಾನವನ್ನು ನೀಡುವೆ?’ ಎಂದು ಕೇಳುತ್ತಾನೆ. ಆದರೆ ಬಾಜಿರಾಯನು, “ನೀವು ಅಸ್ಪಶ್ಯರೆಂಬುದನ್ನು ಮರೆಯಬೇಡಿ. ಧರ್ಮಗ್ರಂಥಗಳು ಹೇಳಿರುವಂತೆ ನಿಮ್ಮನ್ನು ನಡೆಸಿಕೊಳ್ಳುತ್ತೇನೆ” ಎನ್ನುತ್ತಾನೆ. ಸಾಲದ್ದಕ್ಕೆ, ಸಿದನಾಕನು
ಹೊರಹೋದ ಮೇಲೆ, ಅವನು ನಿಂತಿದ್ದ ಜಾಗವನ್ನು ಗೋಮೂತ್ರದಿಂದ ಶುದ್ದೀಕರಿಸುತ್ತಾನೆ . ಈ ಭೀಕರ ಅಪಮಾನದ ನೋವೇ ಮಹಾರ್ ಸೈನಿಕರ ರೆಟ್ಟೆಗಳಿಗೆ
ಅಸಾಧ್ಯ ಶಕ್ತಿಯನ್ನು ನೀಡಿತ್ತೆಂದು ಕಾಣುತ್ತದೆ.ಜಾತಿವಾದಿ ವ್ಯವಸ್ಥೆಯ ಪೋಷಕರಾಗಿದ್ದ ಭಾರತೀಯ ಅರಸರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಬ್ರಿಟಿಷರು ಈ ಜಾತಿವ್ಯವಸ್ಥೆಯ
ಬಲಿಪಶುಗಳಾದ ಮೂಲನಿವಾಸಿಗಳಿಗೆ ಒಂದು ಅತ್ಯುತ್ತಮ ಅವಕಾಶವನ್ನು ಒದಗಿಸಿಕೊಟ್ಟರೆಂಬುದೇ ನಿಜವಾದ ಇತಿಹಾಸವಾಗಿದೆ.
ಈ ಸ್ವಾಭಿಮಾನದ ಇತಿಹಾಸವನ್ನು ಸಕಲೇಶಪುರದ ಜನತೆ ತಿಳಿಸುವ ಸದುದ್ದೇಶದಿಂದ ಸ್ವಾಭಿಮಾನಿ ಹಿರಿಯರ ಮಾರ್ಗದರ್ಶನದಲ್ಲಿ ಕಿರಿಯರ ತಂಡ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕಾರ್ಯಕ್ರಮದ ಎರಡು ತಿಂಗಳ ಮುಂಚೆಯೇ ಎಲ್ಲೆಡೆ ನಡುಗುವ ಚಳಿ.. ಸಂಜೆ ಹೊತ್ತು ಕತ್ತಲೆ… ಕಾಡಾನೆ ದಾಳಿ ಮಾಡುವ ಭಯ ಯಾವುದನ್ನು ಲೆಕ್ಕಿಸದೆ, ಊರೂರು ಅಲೆದು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿ ಪ್ರೇರೇಪಿಸಿ ಕಳೆದ ನಾಲ್ಕು ವರ್ಷಗಳಿಂದ ಸಾವಿರಾರು ಜನರು ಭಾಗವಹಿಸಿ ವಿಜೃಂಭಣೆ ಇಂದ ಆಚರಿಸಿ ಪ್ರಕರ ವಾಗ್ಮಿಗಳಿಂದ ಉಪನ್ಯಾಸ ಕಾರ್ಯಕ್ರಮ ನಡೆಸಿ ಸತ್ಯವನ್ನು ಜನರಲ್ಲಿ ಪ್ರತಿಪಾದಿಸಿದರು… ನಂತರ ಐದನೇ ವರ್ಷದ ಆಚರಣೆಯನ್ನು ದೇಶದಲ್ಲೇ ಪ್ರಥಮ ಬಾರಿಗೆ ಸಕಲೇಶಪುರದ ಪಟ್ಟಣದ ರಾಜಬೀದಿಯಲ್ಲಿ ಭೀಮ ಕೋರೆಂಗಾವ್ ವಿಜಯಸ್ತಂಭದ ಮಾದರಿ ರಥವನ್ನು ಎಳೆಯುವ ಮೂಲಕ ಜಾತ್ರೆಯ ಮೆರಗು ಕೊಟ್ಟು ಬೃಹತ್ ಮೆರವಣಿಗೆಯೊಂದಿಗೆ ಸಮಾರಂಭವನ್ನು ನಡೆಸಿ ಇತಿಹಾಸಕ್ಕೆ ಮುನ್ನುಡಿ ಬರೆಯಲಾಯಿತು. ಈ ರಥ ಎಳೆದ ಘನ ಉದ್ದೇಶವೇನೆಂದರೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಈ ಸಂದೇಶ
“ನಾನಕ್ ಚಂದ್, ನನ್ನ ಜನರಿಗೆ ಹೇಳು, ನಾನು ಇದುವರೆವಿಗೂ ಏನನ್ನು ಸಾಧಿಸಿರುವೆನೋ ಅದನ್ನು ನನ್ನ ಜೀವನಪರ್ಯಂತ ನನ್ನ ಶತ್ರುಗಳ ಜೊತೆ ಕಾದಾಡುತ್ತಾ, ಅನಿಯತ ಸಮಸ್ಯೆಗಳನ್ನು ಎದುರಿಸುತ್ತಾ, ನಿರಂತರ ನೋವನ್ನು ಅನುಭವಿಸುತ್ತಾ ಪಡೆದಿದ್ದೇನೆ.
ತುಂಬಾ ಶ್ರಮವಹಿಸಿ ನಾನೀ ಹೋರಾಟದ ರಥವನ್ನು ಈಗ ಅದು ಎಲ್ಲಿದೆಯೋ ಅಲ್ಲಿಯವರೆಗೆ ತಂದಿದ್ದೇನೆ. ಏನೇ ಅಡೆತಡೆ ಬರಲಿ, ಅದರ ಮಾರ್ಗದಲ್ಲಿ ಎಂತಹದ್ದೇ ಏರುಪೇರುಗಳಾಗಲೀ, ತೊಂದರೆಗಳಾಗಲೀ ಆ ಹೋರಾಟದ ರಥ ಮುನ್ನಡೆಯಲೇ ಬೇಕು. ಅಕಸ್ಮಾತ್ ಈ ರಥವನ್ನು ನನ್ನ ಜನ ಮತ್ತು ನನ್ನ ಸಹಪಾಠಿಗಳು ಮುನ್ನಡೆಸಲು ಸಾಧ್ಯವಾಗದಿದ್ದರೆ ಈಗ ಅದು ಎಲ್ಲಿದೆಯೋ ಅದನ್ನು ಅಲ್ಲಿಯೇ ಇರಲು ಬಿಡಬೇಕು.
ಯಾವುದೇ ಸಂದರ್ಭದಲ್ಲಿಯೂ, ಯಾವುದೇ ಕಾರಣಕ್ಕೂ ಅದನ್ನು ಹಿಂದೆ ಸರಿಯಲು ಬಿಡಬಾರದು. ನನ್ನ ಅನಾರೋಗ್ಯದ ಸಂದರ್ಭದಲ್ಲಿ ಇದು ನನ್ನ ಜನರಿಗೆ ನಾನು ನೀಡುತ್ತಿರುವ ಸಂದೇಶ. ಬಹುಶಃ ನನ್ನ ಕೊನೆಯ ಸಂದೇಶ. ‘ಇದನ್ನು ನೀನು ಅವರಿಗೆ ಹೇಳು…’, ‘ಹೋಗು… ಅವರಿಗೆ ಹೇಳು…’, ‘ಹೋಗು… ಅವರಿಗೆ ಹೇಳು…” ಎನ್ನುತ್ತಾ ಅಂಬೇಡ್ಕರರು ‘ನಿದ್ರೆ’ಗೆ ಹೊರಳುತ್ತಾರೆ.
ಪ್ರಶ್ನೆಯೇನೆಂದರೆ ಬಾಬಾಸಾಹೇಬರ ಈ ಸಂದೇಶ ಈ ದೇಶದ ಶೋಷಿತ ಸಮುದಾಯಕ್ಕೆ ಅರ್ಥವಾಗಿಸಿ ಇತಿಹಾಸದ ಪುಟಗಳು ಉತ್ತರ ಹೇಳಬೇಕಷ್ಟೆ ಎಂಬುದು ಈ ಕೊರೆಗೋವ್ ವಿಜಯ ಸ್ತಂಬದ ತೇರಿನ ಜಾತ್ರೋತ್ಸವ….ಸಕಲೇಶಪುರದ ಸ್ವಾಭಿಮಾನಿ ಜನರೇ
ಮುಂದುವರೆದು ಮುಂದೆ ಎಳೆಯಿರಿ… ಮುಂದೆ ಎಳೆಯಿರಿ…
ಬ್ರಿಟಿಷರ ಗುಲಾಮರಾಗಿ ಇನ್ನು ಬದುಕುತ್ತಿದ್ದೇವೆ ಎನ್ನುವುದಕ್ಕೆ ನಮ್ಮ ಜನವರಿ ಒಂದನೇ ದಿನದ ಹೊಸ ವರ್ಷದ ಆಚರಣೆಯೇ ಉದಾಹರಣೆ.. ಅದರೆ ಈ ನೆಲದ ಮೂಲನಿವಾಸಿಗಳು ಈ ನೆಲದ ತ್ಯಾಗದ ಸಂಕೇತವಾಗಿ ಜನವರಿ ಒಂದನೇ ದಿನವನ್ನು ಭೀಮಾ ಕೊರೆಗಾಂವ್ ವಿಜೆಯೋತ್ಸವ ಆಚರಣೆ ಇದೇ ನಿಜವಾದ ದೇಶಪ್ರೇಮ ಇದೇ ಸ್ವಾಭಿಮಾನ… ಏನಂತೀರಾ…
ಯಡೇಹಳ್ಳಿ”ಆರ್”ಮಂಜುನಾಥ್.
9901606220