Sunday, November 24, 2024
Homeಸುದ್ದಿಗಳುರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ನಡೆಗೆರೆ ಗ್ರಾಮದಲ್ಲಿ 13.5 ಲಕ್ಷ ವೆಚ್ಚದ ಶೆಡ್ಡು ನಿರ್ಮಾಣ

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ನಡೆಗೆರೆ ಗ್ರಾಮದಲ್ಲಿ 13.5 ಲಕ್ಷ ವೆಚ್ಚದ ಶೆಡ್ಡು ನಿರ್ಮಾಣ

ಸಕಲೇಶಪುರ : ರಾಷ್ಟ್ರೀಯ ಗ್ರಾಮೀಣ ಜೀವನೊಪಾಯ ಮಿಷನ್ ಅಡಿಯಲ್ಲಿ ಹದಿಮೂರು ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ವಸಹಾಯ ಸಂಘದ ಶೆಡ್ ನಿರ್ಮಿಸಲಾಗುವುದು ಎಂದು ಕುರುಬತ್ತೂರು ಪಂಚಾಯಿತಿ ಸದಸ್ಯ ಲೋಹಿತ್ ಹೇಳಿದರು.

 

ಕುರುಬತ್ತೂರು ಗ್ರಾಮ ಪಂಚಾಯಿತಿ ನಡೆಗೆರೆ ಗ್ರಾಮದಲ್ಲಿ ಪಂಚಾಯತಿ ವತಿಯಿಂದ ನರೇಗಾ ಯೋಜನೆಯಲ್ಲಿ ನಿರ್ಮಾಣ ಮಾಡಲಿರುವ ಎನ್ ಆರ್ ಎಲ್ ಎಂ ಶೆಡ್ಡು ಸಂಘದ ಮನೆ ಎನ್ನು ಕೊಟ್ಟಿರುತ್ತಾರೆ ಅಂದಾಜು ಮೊತ್ತ 13.5 ಲಕ್ಷ ನಿರ್ಮಾಣವಾಗುತ್ತಿರುವ ಶೆಡ್ಡು.

ಇದುವರೆಗೂ ನಡೆಗೆರೆ ಗ್ರಾಮಕ್ಕೆ ಸರ್ಕಾರದ ವತಿಯಿಂದ ಯಾವುದೇ ಒಂದು ಅಂಗನವಾಡಿ ಸಮುದಾಯ ಭವನ ಆಗಿರಲಿಲ್ಲ ಶ್ರೀ ಶಕ್ತಿ ಸಂಘದವರು ಸಹಾಯ ಸಂಘದವರು ಭಾವಿಕಟ್ಟೆ ಹತ್ತಿರ ಸಂಘದ ಸಭೆಗಳು ನೆಡೆಸುತ್ತ  ಲೆಕ್ಕಪತ್ರವನ್ನು ಬರೆಯುತ್ತಿದ್ದರು ಆದ್ದರಿಂದ ಈ ಸಂಘದ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಆಗಿರುವುದು ಗ್ರಾಮದವರಿಗೆ ಖುಷಿ ತಂದಿರುತ್ತದೆ.

ಈ ಸಂಧರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಧರ್ಮಪ್ಪನವರು ಪಂಚಾಯತ್ ಸದಸ್ಯರಾದ ಲೋಹಿತ್ ರವರು ಹಾಗೂ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಬೆಳೆಗಾರ ಸಂಘದ ಅಧ್ಯಕ್ಷರು ಬಿ. ಟಿ  ಕಿರಣ್,   ಮಂಜುನಾಥ್ ಹೂವಣ್ಣ ಹಾಗೂ ಮಹಿಳಾ ಸಂಘದವರು ಇದ್ದರು

RELATED ARTICLES
- Advertisment -spot_img

Most Popular