Friday, April 18, 2025
Homeಸುದ್ದಿಗಳುವನಗೂರು : ಗಮನ ಸೆಳೆದ ಗ್ರಾಮೀಣ ಮಹಿಳೆಯರ ಸಂತೆ

ವನಗೂರು : ಗಮನ ಸೆಳೆದ ಗ್ರಾಮೀಣ ಮಹಿಳೆಯರ ಸಂತೆ

ಸಕಲೇಶಪುರ ತಾಲೂಕಿನ ವಣಗೂರು ಕೂಡ ರಸ್ತೆಯಲ್ಲಿ ವನಗೂರು ಪಂಚಾಯಿತಿ ವತಿಯಿಂದ ಗ್ರಾಮೀಣ ಮಹಿಳೆಯರ ಸಂತೆ ನಡೆಯಿತು..ಮಲೆನಾಡು ಶೈಲಿಯ ಹೋಳಿಗೆ ಅಕ್ಕಿ ರೊಟ್ಟಿ ನಿಪಟ್ಟು ತಾಜಾ ತರಕಾರಿಗಳು ಮಜ್ಜಿಗೆ ಮಲೆನಾಡಿನ ಜೇನುತುಪ್ಪ ಉಳಿತುಪ್ಪ ಕಬ್ಬು ಸೀಬೆಹಣ್ಣು ಕಿತ್ತಳೆ ಹಣ್ಣು ಮಲೆನಾಡಿನ ಶುದ್ಧ ತುಪ್ಪ .ಏಲಕ್ಕಿ ಕಾಪಿ ನಾಟಿ ಬೀನ್ಸ್ ಇತರ ವಸ್ತುಗಳು ಸಾರ್ವಜನಿಕರ ಗಮನ ಸೆಳೆಯಿತು

ವನಗೂರು ಗ್ರಾಮ ಪಂಚಾಯಿತಿಯ ಎಲ್ಲಾ ಗ್ರಾಮದ ಮಹಿಳೆಯರು ಮಹಿಳೆಯರ ಸಂತೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು

ಕಾರ್ಯಕ್ರಮವನ್ನು ವನಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿಸಿಲೆ ಸತೀಶ್ .ಪಿ ಡಿ ಓ ತೇಜಸ್ವಿ ಶೆಟ್ಟಿ ಮಹಿಳೆಯರ ಸಂಘ ಅಧ್ಯಕ್ಷೆ ಬ್ಯಾಗಡಹಳ್ಳಿ ಶೋಭಾ ಪಟ್ಲ ಕುಮಾರ್ ಪಂಚಾಯಿತಿ ಸಿಬ್ಬಂದಿಗಳಾದ ವಸಂತ್ ಚಿನ್ನಪ್ಪ ಯೋಗೇಶ್ ಇತರರು ಉಪಸಿತರಿದ್ದರು

RELATED ARTICLES
- Advertisment -spot_img

Most Popular