ರಾಷ್ಟ್ರೀಯ ಹೆದ್ದಾರಿ ಬಾಗೆ ಗ್ರಾಮದಲ್ಲಿ ಅಂಡರ್ ಪಾಸ್ ನಿರ್ಮಿಸಿದಿದ್ದರೆ ಅನಿರ್ದಿಷ್ಟಾವಧಿ ಧರಣಿಗೆ ನಿರ್ಧಾರ – ಜಾನ್ ಹೆನ್ರಿ, ಬೆಳಗೋಡು ಬಸವರಾಜ್ ಕರೆ
ಸಕಲೇಶಪುರ : ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ
ಕಾಮಗಾರಿ ಜೊತೆಯಲ್ಲಿ ಅಂಡರ್ ಪಾಸ್ ಇಲ್ಲವೇ ವೃತ್ತ
ನಿರ್ಮಿಸುವ ಕಾಮಗಾರಿಯನ್ನು ಕೂಡಲೇ ಕೈಗೊಳ್ಳಬೇಕು.
ಏನಾದ್ರೂ ನಿರ್ಲಕ್ಷ್ಯ ಮಾಡಿದ್ರೆ ಬಾಗೆಯಲ್ಲಿ ಎಲ್ಲಾ ಸಂಘಟನೆಗಳು ಸೇರಿ ಜನವರಿ 3 ರಂದು ಸಭೆ ಸೇರಿ ಚರ್ಚೆ
ಮಾಡಿ ಅನಿರ್ದಿಷ್ಟಾವಧಿ ಬೃಹತ್ ಪ್ರತಿಭಟನೆ ಮಾಡುವುದಾಗಿ ಸಾಮಾಜಿಕ ಹೋರಾಟಗಾರ ಜಾನ್ ಹೆನ್ರಿ ಮತ್ತು ದಲಿತ ಸಂಘರ್ಷ ಸಮಿತಿಯ ಜಿಲ್ಲಾ
ಸಂಘಟನಾ ಸಂಚಾಲಕ ಬೆಳಗೋಡು ಬಸವರಾಜು
ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ,
ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 75ರ
ಕಾಮಗಾರಿಯೂ 8 ವರ್ಷಗಳಿಂದ ಪೂರ್ಣಗೊಳಿಸದೆ
ಅವೈಜ್ಞಾನಿಕವಾಗಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಯನ್ನು ಆಮೆ ನಡಿಗೆಯಲ್ಲಿ ನಿರ್ವಹಿಸುತ್ತಿದ್ದು, ಇದರಿಂದ ಅನೇಕ ವಾಹನ ಸವಾರರಿಗೆ, ರೋಗಿಗಳಿಗೆ, ಆಂಬುಲೆನ್ಸ್ ವಾಹನಗಳಿಗೆ ಮತ್ತು ಶಾಲಾ-
ಕಾಲೇಜು ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿದೆ. ಇದರ
ನಡುವೆ. ರಾಜ್ಯ ಹೆದ್ದಾರಿ ರಸ್ತೆಯೂ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಸ್ಥಳವಾದ ಬಾಗೆಯಲ್ಲಿ ಅಂಡರ್ ಪಾಸಿಂಗ್ ಇಲ್ಲದೇ ಹಾಗೂ ಸರ್ಕಲ್
ನಿರ್ಮಿಸದೇ ಏಕಾಏಕಿ ರಾಷ್ಟ್ರೀಯ ಹೆದ್ದಾರಿಯೂ ನೇರವಾಗಿ ರಾಜ್ಯ ಹೆದ್ದಾರಿ ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ಪರ್ಯಾಯ ಮಾರ್ಗ ನಿರ್ಮಿಸದೇ ರಾಷ್ಟ್ರೀಯ ಹೆದ್ದಾರಿ
ಕಾಮಗಾರಿ ನಿರ್ಮಾಣವಾಗುತ್ತಿದೆ ಎಂದರು.
ರಾಜ್ಯ ಹೆದ್ದಾರಿಯಿಂದ ಚಲಿಸುವ ವಾಹನವು ರಾಷ್ಟಿçÃಯ
ಹೆದ್ದಾರಿಯಲ್ಲಿ ಸಂಚ-ರಿಸುವ ವಾಹನಗಳ ನಡುವೆ
ಅಪಘಾತ ಸಂಭವಿಸಿದರೆ ಇದಕ್ಕೆ ಹೊಣೆಯನ್ನು ಹೊರುವವರು ಯಾರು? ಇಂತಹ ಅವೈಜ್ಞಾನಿಕವಾಗಿ ರಸ್ತೆ
ಕಾಮಗಾರಿಗೆ ನಕ್ಷೆ ತಯಾರಿಸಿದ ಇಂಜಿನಿಯರ್ ರವರನ್ನು
ಅಮಾನತ್ತುಗೊಳಿಸಿ ಅವರ ವೈಯುಕ್ತಿಕ ಹಣದಿಂದಲೇ
ಉಂಟಾಗಿರುವ ನಷ್ಟವನ್ನು ಅಂದರೆ ಅಂಡರ್ ಪಾಸ್ ಅಥ
ವಾ ವೃತ್ತವನ್ನು ನಿರ್ಮಿಸುವ ಕಾಮಗಾರಿಯನ್ನು ನಿರ್ಮಿಸಲು
ಉಂಟಾಗುವ ವೆಚ್ಚವನ್ನು ಇಂಜಿನಿಯರ್ ರವರೇ ಭರಿಸಬೇಕು ಎಂದು ಆಗ್ರಹಿಸಿದರು. ಬಾಗೆಯಿಂದ ದಿನನಿತ್ಯ
ಸಾವಿರಾರು ಜನ ಬೆಂಗಳೂರು ಹಾಗೂ ಮಂಗಳೂರಿಗೆ ಪ್ರಯಾಣಿಸುತ್ತಿರುತ್ತಾರೆ. ಮಲೆನಾಡು ಭಾಗವಾಗಿರುವುದ-
ರಿಂದ ಅತಿ ಹೆಚ್ಚು ಮಳೆಯೂ ಸುರಿಯುತ್ತದೆ. ಆದ್ದರಿಂದ ಪ್ರಯಾಣಿಕರಿಗೆ ರಸ್ತೆಯ 2 ಬದಿಗಳಲ್ಲಿ ಬಸ್ ತಂಗುದಾಣವನ್ನು ನಿರ್ಮಿಸಬೇಕು. ಈಗಾಗಲೇ
ರಾಷ್ಟ್ರೀಯ ಹೆದ್ದಾರಿಯೂ ಪೂರ್ಣಗೊಂಡಿರುವ ಸ್ಥಳಗಳಲ್ಲಿ ರಸ್ತೆಗೆ ನಿರ್ಮಿಸಿರುವ ಪೈಪ್
ಕಲ್ಬರ್ಟ್ಗಳನ್ನು ಹಾಕಿ ನಿರ್ಮಿಸಿರುವ ಮೋರಿಗಳು
ಕೆಳಗೆ ರಸ್ತೆ ಸಮೇತ ಜಗ್ಗಿದ್ದು, ಅಂತಹ ಸ್ಥಳದಲ್ಲಿ ಮತ್ತೆ ರಸ್ತೆಯ ಮೇಲೆಯೇ ಕಾಂಕ್ರೀಟ್ ಸುರಿದು ರಸ್ತೆಗೆ ಉಬ್ಬು ನಿರ್ಮಿಸಿದಂತಾಗಿ ಈ ಸ್ಥಳಗಳನ್ನು ದ್ವಿ-ಚಕ್ರ ವಾಹನ ಸವಾರರು ಆಯತಪ್ಪಿ ಬೀಳುವ ಸಾಧ್ಯತೆ ಇದೆ. ಇಂತಹ ಸ್ಥಳಗಳನ್ನು ಪರಿಶೀಲಿಸಿ ಸರಿಪಡಿಸಬೇಕು.
ರಸ್ತೆ ನಿರ್ಮಾಣವಾಗಿರುವ ಕೆಲವು ಸ್ಥಳಗಳಲ್ಲಿ ಮಳೆ ನೀರು
ನಿಲ್ಲುತ್ತಿದ್ದು ಇಂತಹ ಸ್ಥಳಗಳಲ್ಲಿ ರಸ್ತೆಯನ್ನು ಸರಿಪಡಿಸಬೇಕು. ಈಗಾಗಲೇ ಅವೈಜ್ಞಾನಿಕವಾಗಿ
ನಿರ್ಮಿಸಿರುವ ತಡೆಗೋಡೆಗಳನ್ನು ಹೊಸದಾಗಿ ವೈಜ್ಞಾನಿಕವಾಗಿ ನಿರ್ಮಿಸಬೇಕು.ರಾಜ್ಯ ಹೆದ್ದಾರಿಯೂ
ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ಕಾಮಗಾರಿ ನಡೆಯುತ್ತಿರುವಾಗಲೇ ಅಂಡರ್
ಪಾಸ್ ಅಥವಾ ಸರ್ಕಲ್ ನಿರ್ಮಿಸುವ ಕಾಮಗಾರಿಯನ್ನು
ಕೂಡಲೇ ಕೈಗೊಳ್ಳಬೇಕು. ಈ ವಿಷಯವನ್ನು ಸರ್ಕಾರ ಅಥವಾ ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡಿದಲ್ಲಿ ಎಲ್ಲಾ ಸಂಘಟನೆಗಳ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಬಾಗೆಯಲ್ಲಿ ಅನಿರ್ದಿಷ್ಟವದಿ ಬೃಹತ್ ಧರಣಿಯನ್ನು ಕೈಗೊಳ್ಳಲಾಗುವುದು ಎಂದುಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡರಾದ ನಾಗರಾಜು ಹೆತ್ತೂರ್ ಇತರರು ಉಪಸ್ಥಿತರಿದ್ದರು.