Sunday, November 24, 2024
Homeಸುದ್ದಿಗಳುತುಳು ಆದಿದ್ರಾವಿಡ ಕಾರ್ಮಿಕರಿಂದ.. ಮೂಲಭೂತ ಸೌಕರ್ಯಕ್ಕಾಗಿ ಹೋರಾಟ

ತುಳು ಆದಿದ್ರಾವಿಡ ಕಾರ್ಮಿಕರಿಂದ.. ಮೂಲಭೂತ ಸೌಕರ್ಯಕ್ಕಾಗಿ ಹೋರಾಟ

ತುಳು ಆದಿದ್ರಾವಿಡ ಕಾರ್ಮಿಕರಿಂದ..

ಮೂಲಭೂತ ಸೌಕರ್ಯಕ್ಕಾಗಿ ಹೋರಾಟ

ಸಕಲೇಶಪುರ:

ಕಳೆದ ಒಂದು ವರ್ಷ ದಿಂದ ನಿವೇಶನಕ್ಕಾಗಿ ಹೋರಾಟ ನಡೆಸುತ್ತಿರುವ ಸ್ಥಳಕ್ಕೆ ನೀರು , ವಿದ್ಯುತ್

ನೀಡಿ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಪರಿಶಿಷ್ಟ ಪಂಗಡದ ತೊಟ ಕಾರ್ಮಿಕರು ಸಕಲೇಶಪುರದಲ್ಲಿ

ಅನಿರ್ದಿಷ್ಟಾವದಿ ದರಣಿ ಪ್ರಾರಂಭಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯತ ಕಚೇರಿ ಮುಂಭಾಗ ಮಕ್ಕಳ ಜೋತೆ ಧರಣಿ ಕಾಫಿ ತೋಟದ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಆದಿದ್ರಾವಿಡ ತುಳು ಸಮಾಜದ ಜಿಲ್ಲಾದ್ಯಕ್ಷ ಶಂಕರ್

ಹೆಬ್ಬಸಾಲೆ ಗ್ರಾಮದಲ್ಲಿ ಕಳೆದ ಒಬ್ಬತ್ತು ತಿಂಗಳಿನಿಂದ ಸರ್ಕಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿ ನಿವೇಶನ ಕ್ಕಾಗಿ ಬೇಡಿಕೆ ಸಲ್ಲಿಸಲಾಗಿದೆ. ಇಲ್ಲಿಯ ವರಗೆ ಹಕ್ಕು ಪತ್ರ ನೀಡಿಲ್ಲ ಎಂದು ದೂರಿದರು.

ಕನಿಷ್ಟ ನೀರು ಮತ್ತು ವಿದ್ಯುತ್ ಸಂಪರ್ಕ ನೀಡುವಂತೆ ಮನವಿಮಾಡಿದರು ಪ್ರಯೋಜನವಾಗುತ್ತಿಲ್ಲ ಎಂದು ಹೇಳಿದರು.

ಆದಿದ್ರಾವಿಡ ತುಳು ಸಮಾಜದ ಮುಖಂಡರುಗಳಾದ ರುಕ್ಮ, ನಾರಯಣ,ಉಪದ್ಯಕ್ಷ ಉಮೇಶ್ ಸಂಚಾಲಕರು ಆನಂದ, ಮಹಿಳಾ ಮುಖಂಡರುಗಳಾದ ಲಲಿತ,ಶೈಲ,ರೋಸಿ,ಶಾಂತ ಇತರರು ಇದ್ದರು.

ದಲಿತ ಸಂಘಟನೆಗಳ ಒಕ್ಕೂಟದವತಿಯಿಂದ ಈ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು ಅದ್ಯಕ್ಷರಾದ ನಲ್ಲೂಲ್ಲಿ ಈರಪ್ಪ,

ಮತ್ತು ಆದಿವಾಸಿ ಸಂಘಟನೆ ಒಕ್ಕೂಟದ ಅದ್ಯಕ್ಷ ನವೀನ್ ಸದಾ ಇದ್ದರು.

RELATED ARTICLES
- Advertisment -spot_img

Most Popular