Sunday, November 24, 2024
Homeಸುದ್ದಿಗಳುಸಕಲೇಶಪುರಪೊಲೀಸ್ ಸಿಬ್ಬಂದಿಗಳು ಕರ್ತವ್ಯದ ಜೊತೆ ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು - ಎ. ಎಸ್....

ಪೊಲೀಸ್ ಸಿಬ್ಬಂದಿಗಳು ಕರ್ತವ್ಯದ ಜೊತೆ ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು – ಎ. ಎಸ್. ಪಿ ಮಿಥುನ್

 

ಪೊಲೀಸ್ ಸಿಬ್ಬಂದಿಗಳು ಕರ್ತವ್ಯದ ಜೊತೆ ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು – ಎ. ಎಸ್. ಪಿ ಮಿಥುನ್

 

ಯುವ ಜನತೆ ತಂಬಾಕು ಸೇವನೆಯಿಂದ ತಪ್ಪು ದಾರಿ ಹಿಡಿಯುತ್ತಿದ್ದಾರೆ. ಆತಂಕ ವ್ಯಕ್ತ ಪಡಿಸಿದ ಸಹಾಯಕ ಪೊಲೀಸ್ ಅಧೀಕ್ಷಕರು.

 

ಸಕಲೇಶಪುರ : ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ಪೊಲೀಸ್ ಇಲಾಖೆ ಇವರ ಸಹಭಾಗಿತ್ವದೊಂದಿಗೆ ತಂಬಾಕು ಸೇವನೆಯಿಂದ ದುಷ್ಟರಿಣಾಮಗಳು ಹಾಗೂ COTPA -2003 ಕಾಯ್ದೆ ಕುರಿತು ಪೊಲೀಸ್ ಅಧಿಕಾರಿಗಗಳಿಗೆ ತರಬೇತಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಸಹಾಯಕ ಪೊಲೀಸ್ ಅಧೀಕ್ಷಕ ಎಚ್ ಎನ್ ಮಿಥುನ್.

 

ಸ್ವಾಸ್ತ್ಯ ಸಮಾಜ ನಿರ್ಮಾಣವಾಗಬೇಕಾದರೆ ಜನರು ದುಷ್ಟಟಗಳಿಂದ ದೂರವಿರಬೇಕು. ಆದರೆ ಇಂದಿನ ಯುವ ಜನಾಂಗ ಮೋಜು ಮಸ್ತಿಗಾಗಿ ತಂಬಾಕು ಸೇವನೆ ಮಾಡಿ ತಮ್ಮ ಅರೋಗ್ಯದ ಜೊತೆಗೆ ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಯುವ ಜನಾಂಗಕ್ಕೆ ತಂಬಾಕು ಸೇವನೆಯಿಂದ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ಅರೋಗ್ಯ ಇಲಾಖೆ ಇನ್ನು ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು. ಕೆಲ ಚಲನಚಿತ್ರಗಳಿಂದ ಪ್ರೇರಣೆ ಪಡೆದು ಯುವಕರು ತಪ್ಪು ದಾರಿಗಿಳಿಯುತ್ತಿದ್ದಾರೆ ಇದರಿಂದ ಕುಟುಂಬದ ಸದಸ್ಯರು ಪರಿತಪಿಸುವಂತಾಗಿದೆ ಎಂದು ಹೇಳಿದರು.

 

ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಧಿಕಾರಿ ಮಹೇಶ್, ಉಪನ್ಯಾಸಕರಾಗಿ ದಂತ ವೈದ್ಯರಾದ ಹೇಮಂತ್, ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಆರ್. ರಾಣಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರರದ ಮಮತಾ, ಸಾಮಾಜಿಕ ಕಾರ್ಯಕರ್ತೆ ವಿಮಲಾ, ಸರಕಾರಿ ಅಭಿಯೋಜಕರಾದ ಪಾರ್ವತಿ, ಪಿಎಸ್ಐ ಖಾತಿಜಾ, ಕೃಷ್ಣಪ್ಪ ಸೇರಿದಂತೆ ಮುಂತಾದವರು ಇದ್ದರು.

RELATED ARTICLES
- Advertisment -spot_img

Most Popular