ಅಂಗವಿಕಲತೆ ಶಾಪವಲ್ಲ: ಜಿ.ಪಂ ಮಾಜಿ ಸದಸ್ಯೆ ಚಂಚಲಾ ಕುಮಾರಸ್ವಾಮಿ
ಸಕಲೇಶಪುರ: ಅಂಗವಿಕಲತೆ ಶಾಪವಲ್ಲ ಎಂಬುದನ್ನು ವಿಕಲಚೇತನರಲ್ಲಿ ಧೈರ್ಯ ತುಂಬಿ ಪ್ರೋತ್ಸಾಹಿಸುವ ಕೆಲಸ ಎಲ್ಲಾರು ಮಾಡಬೇಕೆಂದು ಜಿ.ಪಂ ಮಾಜಿ ಸದಸ್ಯೆ ಚಂಚಲಾ ಕುಮಾರಸ್ವಾಮಿ ಹೇಳಿದರು.
ವಿಶ್ವ ವಿಶೇಷ ಚೇತನರ ದಿನಾಚರಣೆ ಅಂಗವಾಗಿ ಪಟ್ಟಣದ ಸುಭಾಷ್ ಮೈದಾನದಲ್ಲಿ ತಾಲೂಕು ವಿಕಲಚೇತನ ಒಕ್ಕೂಟ ಸಮಿತಿ ವತಿಯಿಂದ ವಿಕಲಚೇತನರಿಗಾಗಿ ವಿವಿಧ ಆಟೋಟಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕ್ರೀಡಾ ಕ್ಷೇತ್ರದಲ್ಲಿ ಅಂಗವಿಕಲ ಸಾಧನೆ ಪರಿಗಣಿಸಿ ವಿಶೇಷ ಅಂಕ ನೀಡಬೇಕು. ಅಲ್ಲದೆ ಶಾಲೆಗಳಲ್ಲಿಯೂ ವಿಶೇಷ ತರಬೇತಿ ನೀಡಿ ಅಂಗವಿಕಲರು ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗುವಂತೆ ಮಾಡಬೇಕು ಎಂದು ಹೇಳಿದರು
ಈ ಸಂಧರ್ಭದಲ್ಲಿ ತಾಲೂಕು ವಿಕಲ ಚೇತನ ಸಂಘದ ತಾಲೂಕು ಅ಼ಧ್ಯಕ್ಷರಾದ ಯೋಗೇಶ್ ಮಾತನಾಡಿ ತಾಲೂಕಿನ ವಿಕಲಚೇತನರಿಗಾಗಿ ಇಂದು ಕ್ರೀಡಾ ಸ್ಫರ್ಧೆಳನ್ನು ಆಯೋಜಿಸಲಾಗಿದ್ದು ಹಾಗೂ ವಿಶ್ವ ವಿಶೇಷ ಚೇತನರ ದಿನಾಚರಣೆ ದಿನಾಂಕ 17/12/22ರಂದು ಶನಿವಾರ ಲಯನ್ಸ್ ಸೇವಾ ಮಂದಿರ ಬಿ.ಎಂ.ರಸ್ತೆ ಯಲ್ಲಿ ನಡೆಯಲಿದೆ.ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಕಲಚೇತನರನ್ನು ಪ್ರೋತ್ಸಾಹಿಸ ಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಆಚಂಗಿ ಅಭಿಷೇಕ್, ಸೇರಿದಂತೆ ಮುಂತಾದ ಗಣ್ಯರು ನೆರವೇರಿಸಿದರು.ಸಂಘದ ಕಾರ್ಯದರ್ಶಿ ಮಧು,ಫಧಾಧಿಕಾರಿಗಳಾದ ಮುಂತಾದವರು ಹಾಜರಿದ್ದರರು