ಹೆತ್ತೂರಿನಲ್ಲಿ ರೋವರ್ ಮತ್ತು ರೇಂಜರ್ ಘಟಕಗಳ ಉದ್ಘಾಟನೆ.
ಸಕಲೇಶಪುರ: ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರೋವರ್ ಮತ್ತು ರೇಂಜರ್ ಘಟಕಗಳ ಉದ್ಘಾಟನೆಯನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಸಹಾಯಕ ಆಯುಕ್ತ ಕೀರ್ತಿ ಕುಮಾರ್ ನೆರವೇರಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ರೋವರ್ ಮತ್ತು ರೇಂಜರ್ ವಿದ್ಯಾರ್ಥಿಗಳು ಭಾಗವಹಿಸುವಂತೆ ಕಿವಿ ಮಾತು ಹೇಳಿದರು. ಪ್ರಾಂಶುಪಾಲ ಮಂಜುನಾಥ ಬಿ.ಡಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಕಲೇಶಪುರ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಆರ್ ಎನ್ ಕೃಷ್ಣಮೂರ್ತಿ ವಹಿಸಿ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ನ ಉಪಯೋಗಗಳು, ಉದ್ಯೋಗಾವಕಾಶಗಳನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಾಕೀರ್ ಮಲ್ನಾಡ್ ಕಸದಿಂದ ರಸ, ಪರಿಸರ ಜಾಗೃತಿಯಲ್ಲಿ ರೋವರ್ ಮತ್ತು ರೇಂಜರ್ ಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸೂಚಿಸಿದರು. ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ಚೇತನ್, ಡಾ. ರಾಜಶೇಖರ್ ಉಪಸ್ಥಿತರಿದ್ದರು. ಹಿರಿಯ ಉಪನ್ಯಾಸಕಿ ವೇದಾವತಿ ಸ್ವಾಗತಿಸಿ, ರೋವರ್ ಅವಿನಾಶ್ ವಂದಿಸಿದರು. ಮುಕ್ತ ಮತ್ತು ಸುಪ್ರಿತಾ ನಿರೂಪಿಸಿದರು.