ಸಕಲೇಶಪುರ/ಹೆತ್ತೂರು :ಅರಣ್ಯ ಇಲಾಖೆಯ ದೌರ್ಜನ್ಯದ ವಿರುದ್ಧ ಬೆಳೆಗಾರ ಆಕ್ರೋಶ: ಏಕಾಏಕಿ ಎಂಟು ವರ್ಷದ ಕಾಫಿಗಳನ್ನು ಗಿಡಗಳನ್ನು ಕಡಿದು ಹಾಕಿದ ಅರಣ್ಯ ಇಲಾಖೆ.
ತಾಲೂಕಿನ ಬ್ಯಾಗಡಿಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ದೇವರಾಜ್ ಎಂಬ ಬೆಳೆಗಾರನಿಗೆ ಯಾವುದೆ ನೋಟಿಸ್ ನೀಡದೆ ಕಳೆದ 8 ವರ್ಷಗಳಿಂದ ಅಪಾರ ಶ್ರಮಪಟ್ಟು ಬೆಳೆದಿದ್ದ ಕಟಾವಿಗೆ ಬಂದಿದ್ದ ಸುಮಾರು 200ಕ್ಕೂ ಹೆಚ್ಚು ಕಾಫಿ ಗಿಡಗಳನ್ನು ಯಾವುದೇ ನೋಟಿಸ್ ನೀಡದೆ ಏಕಾಏಕಿ ಕಡಿದು ಹಾಕಿದೆ. ಈ ಸಂಧರ್ಭದಲ್ಲಿ ತೋಟಕ್ಕೆ ಆಗಮಿಸಿದ ದೇವರಾಜ್ ರವರ ಆಕ್ರೋಷವನ್ನು ಕಂಡು ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳದಿಂದ ಹೋಗಿದ್ದಾರೆ.
ಈ ಹಿನ್ನೆಲೆಯಲ್ಲಿ ಗ್ರಾಮದ ಅಮಾಯಕ ರೈತ ದೇವರಾಜ್ ಮಾತನಾಡಿ ,ತಮ್ಮ ತಾತ ಮುತ್ತಾತ ಕಾಲದಿಂದಲೂ ಅನುಭವದಲ್ಲಿದ್ದಂತಹ ಜಮೀನನ್ನು ಅರಣ್ಯ ಇಲಾಖೆ ನಮ್ಮದೆಂದು ಹೇಳುತ್ತಿದ್ದು ಯಾವುದೇ ನೋಟಿಸ್ ನೀಡದೆ ಏಕಾಏಕಿ ದಾಳಿ ನಡೆಸಿ ಕಾಫಿ ಗಿಡಗಳನ್ನು ಕಡಿದು ಹಾಕಿದ್ದಾರೆ. ಇದು ಖಂಡನೀಯವಾಗಿದ್ದು ಮುಂದೇನು ಮಾಡಬೇಕೆಂಬುದು ನನಗೆ ತೋಚುತ್ತಿಲ್ಲ, ಬೆಳೆಗಾರರ ಸಂಘಕ್ಕೆ ದೂರು ನೀಡುವೆ ಎಂದಿದ್ದಾರೆ. ಕಾಪಿ ಗಿಡಗಳನ್ನು ಅರಣ್ಯ ಇಲಾಖೆ ಕಡಿದು ಹಾಕಿರುವುದು ದುರಂತವಾಗಿದ್ದು ಒಂದೆಡೆ ಸರ್ಕಾರಿ ಜಾಗದಲ್ಲಿ ಕೃಷಿ ಮಾಡಲು ಒತ್ತುವರಿ ಮಾಡಿದ್ದರೆ ಸಕ್ರಮ ಮಾಡಲಾಗುವುದು ಎಂದು ಸರ್ಕಾರ ಹೇಳುತ್ತಿದ್ದು ಮತ್ತೊಂದೆಡೆ ಅರಣ್ಯ ಭೂಮಿಯ ಹೆಸರಲ್ಲಿ ರೈತರಿಗೆ ಅರಣ್ಯ ಇಲಾಖೆ ಕಿರುಕುಳ ಕೊಡುವುದು ಎಷ್ಟು ಸರಿ ಎಂಬುದು ಪ್ರಶ್ನೆಯಾಗಿದೆ.