ಮಾಜಿ ಶಾಸಕ ಎಚ್ ಎಂ ವಿಶ್ವನಾಥ್ ಹೋರಾಟಗಾರರ ಪರ ನಿಲ್ಲುತ್ತಾರೋ….. ಪಕ್ಷದ ಪರ ನಿಲ್ಲುತ್ತಾರೋ…?ಎಂಬ ಬಹುದೊಡ್ಡ ಪ್ರಶ್ನೆ ಎದ್ದಿದೆ
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಸಾಗರ್ ರವರು ಮಾಜಿ ಶಾಸಕರಿಗೆ ಪ್ರಶ್ನೆ ಹಾಕಿದ್ದಾರೆ.
ಉತ್ತರಿಸುತ್ತಿರಾ ಮಾಜಿ ಶಾಸಕರೇ….?
ಸಕಲೇಶಪುರ : ನೆನ್ನೆ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕರೆದಿದ್ದ ಸಭೆಯಲ್ಲಿ ಈ ರೀತಿಯ ಒಂದು ಪ್ರಶ್ನೆ ಉದ್ಭವವಾಗಿದೆ.
ಹೌದು, ಮಲೆನಾಡು ಭಾಗದಲ್ಲಿ ಹಲವಾರು ವರ್ಷಗಳಿಂದ ಕಾಡಾನೆ ಸಮಸ್ಯೆಯನ್ನು ರೈತರು ಬೆಳೆಗಾರರು ಹಾಗೂ ಸಾರ್ವಜನಿಕರು ಎದುರಿಸುತ್ತಿದ್ದಾರೆ. ಆದರೆ ಕಾಡಾನೆ ಹಾವಳಿ ಸಮಸ್ಯೆಗೆ ಶಾಶ್ವತ ಪರಿಹಾರ ಇದುವರೆಗೂ ದೊರಕಿಲ್ಲ.ಈ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳು ಸಾಕಷ್ಟು ಹೋರಾಟಗಳನ್ನು ನಡೆಸಿದ್ದರು ಸಹ ಆಡಳಿತ ನೆಡೆಸಿದ ಸರ್ಕಾರಗಳು ಮಲೆನಾಡಿಗರಿಗೆ ಶಾಶ್ವತ ಪರಿಹಾರ ಹುಡುಕುವಲ್ಲಿ ವಿಫಲವಾಗಿದೆ.
ಕಳೆದ ನವೆಂಬರ್ 01 ರಂದು ತಾಲೂಕಿನ ಹೆಬ್ಬನಹಳ್ಳಿ ಗ್ರಾಮದ ಯುವ ರೈತ ಮನು ಕಾಡಾನೆ ದಾಳಿಗೆ ಮೃತಪಟ್ಟ ವೇಳೆ ಕನ್ನಡಪರ ಸಂಘಟನೆಗಳು, ಸುತ್ತಮುತ್ತಲ ಗ್ರಾಮಸ್ಥರು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು.
ಈ ಅಹೋರಾತ್ರಿ ಪ್ರತಿಭಟನೆಯಲ್ಲಿ ರೈತ ಮುಖಂಡ ಹುಟ್ಟು ಹೋರಾಟಗಾರ ಮಾಜಿ ಶಾಸಕ ಎಚ್. ಎಂ ವಿಶ್ವನಾಥ್ ಅವರು ಸಾಕ್ಷಿಯಾಗಿದ್ದರು. ಅಂದು ಮಧ್ಯ ರಾತ್ರಿ ರಾಜ್ಯದ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ನೇರವಾಗಿ ಮಾಜಿ ಶಾಸಕರ ಜೊತೆ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನು ಹಿಂಪಡೆಯಲಾಗಿತ್ತು. ಭರವಸೆ ನೀಡಿ ಒಂದುವರೆ ತಿಂಗಳು ಕಳೆದರೂ ಸಹ ಶಾಶ್ವತ ಪರಿಹಾರಕ್ಕೆ ಇದುವರೆಗೂ ಸರ್ಕಾರ ಕಡೆಯಿಂದ ಸ್ಪಷ್ಟವಾದ ನಿಲುವು ಗೋಚರಿಸಿಲ್ಲ ಹಾಗಾಗಿ ಇದೀಗ ರಾಜ್ಯದ ಮುಖ್ಯಮಂತ್ರಿಗಳು ತಾಲೂಕಿಗೆ ಆಗಮಿಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳು ಪುನಃ ಪ್ರತಿಭಟನೆ ಹಾದಿ ಹಿಡಿಯುವುದು ಅನಿವಾರ್ಯವಾಗಿರುವುದರಿಂದ ಮಾಜಿ ಶಾಸಕರು ಹೋರಾಟಗಾರರ ಪರವಾಗಿ ನಿಲ್ಲುತ್ತಾರೋ ಅಥವಾ ಪಕ್ಷದ ಪರವಾಗಿ ನಿಲ್ಲುತ್ತಾರೋ ಎಂಬುದೇ ಬಹುದೊಡ್ಡ ಪ್ರಶ್ನೆಯಾಗಿದೆ.
ನೆನ್ನೆ ನಡೆದ ಸಭೆಯಲ್ಲಿ ಈ ರೀತಿಯ ಒಂದು ಪ್ರಶ್ನೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಜಾನೇಕೆರೆ ಸಾಗರ್ ರವರು ಮಾಜಿ ಶಾಸಕರಿಗೆ ಪ್ರಶ್ನೆ ಇಟ್ಟಿದ್ದಾರೆ ಆದರೆ ಮಾಜಿ ಶಾಸಕರಿಂದ ಸಭೆಯಲ್ಲಿ ಯಾವುದೇ ಸ್ಪಷ್ಟ ಉತ್ತರ ಸಿಕ್ಕಿಲ್ಲ
ಮಾಜಿ ಶಾಸಕ ಎಚ್ ಎಂ ವಿಶ್ವನಾಥ್ ಪ್ರತಿ ಬಾರಿಯೂ ಕೂಡ ನಾನು ಜನರ ಪರ ಇದ್ದೇನೆ ಎಂದು ಹೇಳುವವರು ನೆನ್ನೆ ಕನ್ನಡಪರ ಸಂಘಟನೆಗಳ ಪ್ರಶ್ನೆಗೆ ತಬ್ಬಿಬ್ಬಾದ ಘಟನೆ ನಡೆದಿದೆ. ಇದಕ್ಕೆ ಪೂರಕವಾಗಿ ಕಳೆದ ಒಂದು ವಾರದ ಹಿಂದೆ ವಳಲಹಳ್ಳಿ ಕೂಡಿಗೆಯಲ್ಲಿ ಕಾಡಾನೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಶಾಸಕ ಎಚ್ ಕೆ ಕುಮಾರಸ್ವಾಮಿ ವಿಶ್ವನಾಥ್ ರವರು ಕೆಲವು ಸಲ ಎರಡು ಮುಖಗಳ ಪ್ರದರ್ಶನ ಮಾಡುತ್ತಾರೆ ಎಂದು ಆರೋಪಿಸಿದ್ದರು. ಇದು ಕೇವಲ ರಕ್ಷಣಾ ವೇದಿಕೆ ಅಥವಾ ಕನ್ನಡಪರ ಸಂಘಟನೆಗಳ ಪ್ರಶ್ನೆ ಅಲ್ಲ ತಾಲೂಕಿನ ಜನರ ಪ್ರಶ್ನೆಯಾಗಿದ್ದು ಮಾಜಿ ಶಾಸಕರು ಉತ್ತರಿಸುತ್ತಾರೆ ಎಂದು ಕಾದು ನೋಡಬೇಕಿದೆ.
ಕ್ಷೇತ್ರದ ಜನರು ಕೂಡ ಈ ಒಂದು ಪ್ರಶ್ನೆಯ ಉತ್ತರಕ್ಕಾಗಿ ಮಾಜಿ ಶಾಸಕರಿಂದ ನಿರೀಕ್ಷಿಸುತ್ತಿದ್ದಾರೆ