ಬಾಳ್ಳುಪೇಟೆ : ಕಳೆದ 10 ವರ್ಷಗಳಿಂದ ಮಹಿಳಾ ಮತ್ತು ಕಲ್ಯಾಣ ಇಲಾಖೆ ಯ ಆಹಾರ ತಯಾರಕ ಘಟಕದಲ್ಲಿ ಹಾಗೂ ಬಾಳ್ಳುಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಉಪ ಕೇಂದ್ರಗಳಲ್ಲಿ ಆಶಾಕಾರ್ಯಕರ್ತೆಯಾರಾಗಿಯು ಸಹ ಕಾರ್ಯ ನಿರ್ವಹಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.ಸಕಲೇಶಪುರ ತಾಲೂಕಿನ, ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳ್ಳುಪೇಟೆಯ ಉಪ ಕೇಂದ್ರಗಳಾದ ಬನವಾಸೆ ಗ್ರಾಮದ ವ್ಯಾಪ್ತಿಯಲ್ಲಿ ಕಲಾವತಿ ಎಂಬುವವರು, ಹಾಗೂ ಜೆ.ಪಿ ನಗರ ವ್ಯಾಪ್ತಿಯಲ್ಲಿ ಸುನೀತ ಎಂಬುವವರು ಕಳೆದ 10 ವರ್ಷಗಳಿಂದ ಆಶಾ ಕಾರ್ಯಕರ್ತೆಯರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಹಾರ ತಯಾರಕ ಘಟಕ (MSPC ) ದಲ್ಲಿಯು ಸಹ ಕಳೆದ 10 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುತ್ತಾರೆ, ಈ ಸಂಬಂಧ ಬಾಳ್ಳುಪೇಟೆ ಗ್ರಾಮಪಂಚಾಯತ್ ಸದಸ್ಯರಾದ ಗೌರಮ್ಮ ಕೃಷ್ಣಮೂರ್ತಿ ಅವರೂ ಮತ್ತು ದಾರಿ ದೀಪ ಸಂಜೀವಿನಿ ಒಕ್ಕೂಟದ ವತಿಯಿಂದ ತಾಲೂಕು ಆರೋಗ್ಯ ಅಧಿಕಾರಿಗಳು , ತಾಲೂಕು ಮಹಿಳಾ ಮತ್ತು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳಿಗು ಸಹಪತ್ರ ದ ಮೂಲಕ ದೂರು ನೀಡಿದ್ದರು ಸಹ ಈ ವರೆಗೂ ಯಾವುದೇ ಅಧಿಕಾರಿಗಳಿಂದ ಉತ್ತರ ದೊರೆತಿಲ್ಲ.ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ (NRHM) ಅಡಿಯಲ್ಲಿ ಆಶಾ ಕಾರ್ಯಕರ್ತೆಯರು ನಿರ್ವಹಿಸುತ್ತಿದ್ದು, ಸರ್ಕಾರದಿಂದ ಆಶಾ ಕಾರ್ಯಕರ್ತೆಯ-ರಿಗೆ 6 ರಿಂದ 8 ಸಾವಿರ ರೂ. ಗಳು ವೇತನ ಮತ್ತು ಗೌರವ ಧನವನ್ನು ಸಹ ನೀಡುತ್ತಿದ್ದು, ಕಲಾವತಿ ಮತ್ತು ಸುನೀತ ಇವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಹಾರ ತಯಾರಕ ಘಟಕದಲ್ಲು ಸಹ 10 ಸಾವಿರ ಸಂಬಳಕ್ಕೆ ಕಾರ್ಯ ನಿರ್ವಹಿಸುತ್ತಿದ್ದಾರೆ, ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ಗೌರವ ಧನ ಮತ್ತು ಪ್ರೋತ್ಸಾಹ ಧನ ನೀಡುತ್ತಿದ್ದರು ಸಹ ಕರ್ತವ್ಯ ನಿಷ್ಠೆ ಇಲ್ಲದೆ ಕೆಲಸ ಸಮಯದಲ್ಲಿ ಬೇರೆಡೆ ಕಾರ್ಯನಿರ್ವಹಿಸುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕರ್ತವ್ಯ ನಿಷ್ಠೆ ಇಲ್ಲದೆ, ಕರ್ತವ್ಯದ ಸಮಯದಲ್ಲಿ ಬೇರೆ ಕೆಲಸ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಹೇಳಿಕೆ :
ಕಳೆದ ಮೂರು ವರ್ಷಗಳಿಂದ ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರುತಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ.ಪ್ರಸ್ತುತ ಆಶಾ ಕಾರ್ಯಕರ್ತೆಯರಾಗಿ ಬೇರೊಂದು ಕಡೆ ಕಾರ್ಯನಿರ್ವಹಿಸುತ್ತಿರುವವರು ಯಾವುದಾದರೂ ಒಂದು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಬೇರೆ ನಿರುದ್ಯೋಗಿಗಳಿಗೆ ಅವಕಾಶ ಕಲ್ಪಿಸ ಬೇಕಾಗಿದೆ.
ಗೌರಮ್ಮ ಕೃಷ್ಣಮೂರ್ತಿ ಗ್ರಾ.ಪಂ.ಸದಸ್ಯರು, ಬನವಾಸೆ
ಗ್ರಾಮಸ್ಥರ ಒತ್ತಾಯ:
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಸಾಕಷ್ಟಿದ್ದು, ಗ್ರಾಮದಲ್ಲಿ ವಿದ್ಯಾವಂತ ನಿರುದ್ಯೋಗಿ ಯುವತಿಯರು ಮತ್ತು ಮಹಿಳೆಯರು ಇರುವುದರಿಂದ ಅರ್ಹ ನಿರುದ್ಯೋಗಿ ಮಹಿಳೆಯರಿಗೆ ಕೆಲಸ ನಿರ್ವಹಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅನುವು ಮಾಡಿ ಕೊಡಬೇಕು ಎಂಬುದಾಗಿದೆ.