ಡಿ.13 ಕ್ಕೆ ಸಕಲೇಶಪುರಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಗಮನ
ಕಾಡಾನೆ ಹಾವಳಿ ವಿರುದ್ಧ ಪ್ರತಿಭಟನೆ ಪ್ರಮುಖ ಸಂಘಟನೆಯ ಮೂವರನ್ನು ಬಂಧಿಸುವ ವದಂತಿ ಎಲ್ಲೆಡೆ ಹಬ್ಬಿದೆ.
ಸಕಲೇಶಪುರ : ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಕಾಡಾನೆ ಹಾವಳಿ ಹೋರಾಟ ಸಂತ್ರಸ್ತರ ಸಮಿತಿ, ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುವ ಯೋಜನೆ ಇರುವುದರಿಂದ ಪೋಲಿಸ್ ಇಲಾಖೆ ಮುಂಜಾಗ್ರತ ಕ್ರಮವಾಗಿ ಸಂಘಟನೆಯ ಪ್ರಮುಖ ಮೂವರನ್ನು ಬಂಧಿಸಲು ಮುಂದಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ ಪೊಲೀಸ್ ಇಲಾಖೆ ಸ್ಪಷ್ಟನೆ ಪಡಿಸಬೇಕೆಂದು ಕೆಲವರು ಆಗಮಿಸಿದ್ದಾರೆ.