ನಾಗ ದೇವಾಲಯದಲ್ಲಿ ಅದ್ಧೂರಿ ಚಂಪಾ ಷಷ್ಠಿ ಆಚರಣೆ
ಸಕಲೇಶಪುರ : ತಾಲೂಕಿನ ಬಾಳ್ಳುಪೇಟೆಯಲ್ಲಿರುವ ನಾಗದೇವತಾ ದೇವಸ್ಥಾನದಲ್ಲಿ ಚಂಪಾ ಷಷ್ಠಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.
ಚಂಪಾ ಷಷ್ಠಿ ಹಿನ್ನೆಲೆ ನಾಗ ದೇವರಿಗೆ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಾಲಯಕ್ಕೂ ಹಲವು ಬಗೆಯ ಹೂವುಗಳಿಂದ ವಿಶೇಷ ಅಲಂಕಾರಿಸಿ ನಾಗದೇವರಿಗೆ ಆಶ್ಲೇಷ ಬಲಿ ಪೂಜೆ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಕ್ಷೀರಾಭಿಷೇಕ, ಎಳೆನೀರಾಭಿಷೇಕ ನಡೆದವು.
ಶನಿವಾರ ಮುಂಜಾನೆಯಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ, ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಸುಬ್ರಹ್ಮಣ್ಯ ದೇವನಿಗೆ ಪೂಜೆ ಸಲ್ಲಿಸಿದರು.ಶಾಸಕ ಸಿಮೆಂಟ್ ಮಂಜುನಾಥ್, ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ, ಎ ಜಗನ್ನಾಥ್ ದೇವಸ್ಥಾನಕ್ಕೆ ಭೇಟಿ ದೇವರ ದರ್ಶನ ಪಡೆದರು.ಚಂಪಾ ಷಷ್ಠಿ ಹಿನ್ನೆಲೆ ಸಾವಿರಾರು ಜನರಿಗೆ ಅನ್ನಸಂತರ್ಪಣೆ ನಡೆಸಲಾಯಿತು.
ವೇದ ಬ್ರಹ್ಮ ಗಣಪತಿ ಭಟ್ ಮಾತಾನಾಡಿ ಈ ಚಂಪಾ ಷಷ್ಠಿ ಮಾರ್ಗಶಿರ ಮಾಸದ ಶುಕ್ಲ ಪಕ್ಷದಂದು ನಡೆಯುತ್ತದೆ. ಸಂತೋಷ, ನೆಮ್ಮದಿ, ಸುಖ, ಶಾಂತಿ, ಆರೋಗ್ಯ, ಧನ್ಯಾತ್ಮಕ ಭಾವನೆಗಳು ಮನದಲ್ಲಿ ಅಭಿವೃದ್ಧಿಯಾಗಲಿ ಎನ್ನುವುದೇ ಈ ಹಬ್ಬದ ಪ್ರಮುಖ ಉದ್ದೇಶವಾಗಿದೆ ಎಂದರು.
ಈ ಸಂಧರ್ಭದಲ್ಲಿ ನಾಗದೇವತ ಸೇವಾ ಸಮಿತಿಯ ಅಧ್ಯಕ್ಷ ಬಿ.ಪಿ ಚಂದ್ರಶೇಖರ್ ಸಮಿತಿಯ ಮುಖಂಡರಾದ ಬಿ. ಬಿ ಲೋಕೇಶ್, ಷಣ್ಮುಖಯ್ಯ,ಅರವಿಂದ್ ರೈ,ವಿರೂಪಾಕ್ಷ,ಶ್ಯಾಮಲಾ,ಸೇರಿದಂತೆ ಮುಂತಾದವರಿದ್ದರು.