ಸಕಲೇಶಪುರ : ಹೇಮಾವತಿ ನದಿ ದಂಡೆ ಸಮೀಪ ಅಕ್ರಮವಾಗಿ ತಡೆಗೋಡೆ ನಿರ್ಮಾಣ ಆರೋಪದ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ತಾಲೂಕು ಆಡಳಿತ ತಡೆಗೋಡೆ ತೆರವುಗೊಳಿಸಿದ್ದಾರೆ.
ನಗರದ ಶ್ರೀನಿವಾಸ ಕನ್ವೇಷನ್ ಹಾಲ್ ಮಾಲಿಕತ್ವದ ಶ್ರೀನಿವಾಸ್(ಪಲ್ಲವಿ) ಅವರು ನಿರ್ಮಿಸಿದ್ದರು ಏನಲಾದ ತಡೆಗೋಡೆ ಕುರಿತು ಕೆಲ ಸಂಘ ಸಂಸ್ಥೆಗಳು ಆರೋಪ ಮಾಡಿದ್ದರು.ಹಾಗಾಗಿ ಇಂದು ಬೆಳಿಗ್ಗೆ ಜೆಸಿಬಿ ಯಂತ್ರದ ಮೂಲಕ ಬೃಹತ್ ತಡೆ ಗೋಡೆಯನ್ನು ತೆರವುಗೊಳಿಸಿದ್ದಾರೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿತ್ತು