ಸಕಲೇಶಪುರ : ಇಂದು ಗಣೇಶ ಚತುರ್ಥಿ ಹಬ್ಬ. ದೇಶದೆಲ್ಲೆಡೆ ಜನ ವಿನಾಯಕ ಚತುರ್ಥಿ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ.ತಾಲೂಕಿನ ಬಾಳ್ಳುಪೇಟೆಯಲ್ಲಿ ಚೌತಿ ಆಚರಣೆ ಜೋರಾಗಿದ್ದು ಸಂಭ್ರಮ ಸಡಗರದಿಂದ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ.
ಗ್ರಾಮ ಮುಖ್ಯ ವೃತ್ತದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದ್ದು,ಗಣೇಶ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಹೋಮ,ಹವನ ಜರುಗಿದ್ದು ಸ್ಥಳೀಯ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ದರ್ಶನ ಪಡೆದರು.
ಈ ಸಂಧರ್ಭದಲ್ಲಿ ಸಮಾಜ ಸೇವಕ ಪುನೀತ್ ಬನ್ನಳ್ಳಿ ಯುವ ಮುಖಂಡರಾದ ಶರತ್ ವಿರೇಶ್, ಮನು, ಗ್ರಾಮ ಪಂಚಾಯತಿ ಸದಸ್ಯ ಭರತ್ ಮುಖಂಡರಾದ ಕಿಶೋರ್, ಪ್ರದೀಪ್ ನಿಡನೂರು ಶರತ್, ದಾಮೋದರ್, ಉದೀಶ್ ಲೋಕೇಶ್ ಎಂ. ಎಸ್ ಶಿವಕುಮಾರ್ ಸೇರಿದಂತೆ ಮುಂತಾದವರಿದ್ದರು. ಗಣೇಶ ಪ್ರತಿಷ್ಠಾಪನೆ ಹಾಗೂ ಹೋಮಹವನ ಪೂಜಾ ಕಾರ್ಯವು ವಿದ್ವಾನ್ ಗಣಪತಿ ಭಟ್ಟರ ನೇತೃತ್ವದಲ್ಲಿ ಜರುಗಿತು. ನಾಳೆ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಗುರುವಾರ ವಿವಿಧ ಕಲಾತಂಡ, ವಾದ್ಯಗೋಷ್ಠಿಯ ಮೂಲಕ ರಾಜಬೀದಿಯಲ್ಲಿ ಮೆರವಣಿಗೆ ನಡೆಸಿ ವಿಸರ್ಜನೆ ಮಾಡಲಾಗುವುದೆಂದು ಸಂಘಟನೆ ತಿಳಿಸಿದ್ದಾರೆ.