ಸಕಲೇಶಪುರ : ಭೂ ಕುಸಿತದ ಸ್ಥಳದಲ್ಲಿ ಕಾರು ಪಲ್ಟಿ
ಸಕಲೇಶಪುರ : ಆನೆಮಹಲ್ ನಿಂದ ಬ್ಯಾಕರವಳ್ಳಿ ಸಂಪರ್ಕಿಸುವ ರಸ್ತೆಯಲ್ಲಿ ಉಂಟಾಗಿದ್ದ ಭೂ ಕುಸಿತದ ಸ್ಥಳದಲ್ಲಿ ಕಾರು ಪಲ್ಟಿಯಾಗಿರುವ ಘಟನೆ ನೆಡೆದಿದೆ.
ಜಾನೇಕೆರೆ ಗ್ರಾಮದ ಉಡೆಮನೆ ಪಾಪಣ್ಣ ಎಂಬವರು ಸಕಲೇಶಪುರದಿಂದ ಸ್ವಗ್ರಾಮಕ್ಕೆ ತೆರಳುವ ವೇಳೆ ಕಳೆದ ಒಂದು ವಾರದಿಂದ ಸುರಿದ ಮಳೆಗೆ ಭೂ ಕುಸಿತವಾಗಿದ್ದ ಸ್ಥಳದಲ್ಲಿ ವಾಹನ ಚಾಲನೆ ಮಾಡಲು ಕ್ಲಿಷ್ಟಕಾರವಾಗಿ ಅಪಘಾತವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಭೂ ಕುಸಿತವಾಗಿರುವ ಸ್ಥಳದಲ್ಲಿ ತಕ್ಷಣವೇ ತಡೆಗೋಡೆ ನಿರ್ಮಾಣ ಮಾಡುವಂತೆ ಮಲೆನಾಡು ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಾಗರ್ ಜಾನೇಕೆರೆ ಒತ್ತಾಯಿಸಿದ್ದಾರೆ.
ಕಾರು ಪಲ್ಟಿಯಿಂದ ಗಾಯಗೊಂಡಿರುವ ಪಾಪಣ್ಣನವರಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


                                    
