ವಳಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಥಮ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ.
ಸಕಲೇಶಪುರ :- ತಾಲ್ಲೂಕಿನ ವಳಲಹಳ್ಳಿ ಗ್ರಾಮ ಪಂಚಾತಿಯಲ್ಲಿ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಥಮ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಯನ್ನು ವಳಲಹಳ್ಳಿ ಸಮುದಾಯ ಭವನದಲ್ಲಿ ಅಧ್ಯಕ್ಷರಾದ ವಸಂತ್(ಸುಬ್ರಮಣ್ಯ ) ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ತಾಲೂಕು ಪಂಚಾಯತಿ ಅಧ್ಯಕ್ಷರಾದ ವಳಲಹಳ್ಳಿ ರಾಜೇಗೌಡ ” ಗ್ರಾಮಪಂಚಾಯಿತಿ ಮಟ್ಟದಲ್ಲಿ ಸ್ಥಾಪನೆ ಆಗಿರುವ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಈ ಭಾಗದ ಹಳ್ಳಿ ಜನರಿಗೆ ಉಪಯೋಗವಾಗಲಿದೆ. ಸಂಘದಲ್ಲಿ ಅಧ್ಯಕ್ಷರು ಹಾಗೂ ನಿರ್ದೇಶಕರು ಪಾರದರ್ಶಕ ಆಡಳಿತ ಮಾಡುವ ಮೂಲಕ ಹೋರಾಟ ಮಾಡಿ ತಂದ ಗ್ರಾಮ ಪಂಚಾಯಿತಿ ಮಟ್ಟದ ಸಹಕಾರ ಸಂಘ ಸಾರ್ಥಕವಾಗುತ್ತದೆ. ಹಾಗೂ ಮಾದರಿ ಕೃಷಿಪತ್ತಿನ ಸಹಕಾರ ಸಂಘವಾಗುತ್ತದೆ. ಎಂದು ಹೇಳಿದರು.
ನೂತನ ಅಧ್ಯಕ್ಷರಾದ ವಸಂತ್ (ಸುಬ್ರಮಣ್ಯ) ಮಾತನಾಡಿ ” 35 ವರ್ಷದ ನಂತರ ಮತ್ತೆ ವಲಳಹಳ್ಳಿ ಗ್ರಾಮಪಂಚಾಯಿತಿಗೆ ಕೃಷಿ ಪತ್ತಿನ ಸಹಕಾರ ಸಂಘ ಬಂದಿರುವುದು ಖುಷಿಯ ವಿಚಾರ.ಪಾರದರ್ಶಕ ಆಡಳಿತ ಮಾಡುವ ಮೂಲಕ ರಾಜ್ಯದಲ್ಲಿ ಮಾದರಿ ಸಂಘವನಾಗಿ ಮಾಡೋಣ. ಇದಕ್ಕೆ ಎಲ್ಲಾ ಷೇರುದಾರರ ಬೆಂಬಲ ಅವಶ್ಯಕತೆ ಎಂದು ಬೆಂಬಲ ಕೋರಿದರು.
ಕಾರ್ಯಕ್ರಮದಲ್ಲಿ ನೂತನವಾಗಿ ಸ್ಥಾಪನೆಯಾದ ಕೃಷಿ ಪತ್ತಿನ ಸಹಕಾರ ಸಂಘದ ಅಮಾನತ್ತು ಖಾತೆಯಲ್ಲಿರುವ ಇರುವ ಉಳಿತಾಯ ಖಾತೆಗೆ ಜಮಯಿಸಲು ಸರ್ವ ಸದಸ್ಯರ ಒಮ್ಮತವನ್ನು ಅಧ್ಯಕ್ಷರು ಕೇಳಿ ಒಪ್ಪಿಗೆ ಪಡೆದರು . ಇದಕ್ಕಿಂತ ಮುಂಚೆ ಕರಡಿಗಾಲ ಹರೀಶ್ ರವರು ವೇದಿಕೆಯಲ್ಲಿದ್ದ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮ ದೀಪ ಬೆಳಗಿಸುವ ಮುಖಾಂತರ ಪ್ರಾರಂಭಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮಪಂಚಾತಿ ಸಹಕಾರ ಸಂಘದ ಉಪಾಧ್ಯಕ್ಷರಾದ ಕೆ.ಕೆ ಪ್ರಸನ್ನ, ಕೆ. ಪಿ ಕೃಷ್ಣೆಗೌಡ, ಪಾಲಾಕ್ಷ,ಹೂವಣ್ಣ, ನಿಂಗಯ್ಯ, ಕರಡಿಗಾಲ ಹರೀಶ್, ಮಿಥುನ್,ಹೇಮಲತಾ, ಸುಬ್ಬಣ್ಣ, ಜ್ಯೋತಿ ನಾಗೇಶ್,ಸೇರಿದಂತೆ ಗ್ರಾಮಪಂಚಾಯಿತಿ ಷೇರುದರಾರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.