ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಜಾಮೀನು ಮಂಜೂರು.
ಬೆಂಗಳೂರು : ಮಹಿಳೆ ಕಿಡ್ನಾಪ್ ಕೇಸ್ ನಲ್ಲಿ ಬಂಧನವಾಗಿದ್ದ ಹೊಳೆನರಸೀಪುರ ಶಾಸಕ ಎಚ್. ಡಿ ರೇವಣ್ಣ ನವರಿಗೆ ಜನಪ್ರತಿನಿದಿಗಳ ನ್ಯಾಯಲಯ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ರೇವಣ್ಣ ಪರ ವಕೀಲ ಸಿ. ಸಿ ನಾಗೇಶ್ ವಾದ ಮಂಡಿಸಿದ್ದರು.ಕಳೆದ 5 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ರೇವಣ್ಣ. ಕೋರ್ಟ್ ಮುಂದೆ ರೇವಣ್ಣ ಬೆಂಬಲಿಗರ ಜಮಾಯಿಸಿದ್ದಾರೆ.ಇಂದು ರಾತ್ರಿ 10 ಗಂಟೆ ವೇಳೆಗೆ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.