ಪ್ರಜ್ಞಾವಂತ ನಾಗರಿಕ ಸಮಾಜ ಯೋಚನೆ ಮಾಡಬೇಕಲ್ವಾ…!
ಕಳೆದ ನಾಲ್ಕು ದಿನದಿಂದ ಎಲ್ಲರ ಮೊಬೈಲ್ ನಲ್ಲಿ ಕೆಲವು ಅಶ್ಲೀಲ ವಿಡಿಯೋಗಳು ರಾಜಕಾರಣ ಉದ್ದೇಶ ಇಟ್ಟುಕೊಂಡು ಹರಿದಾಡುತ್ತಿವೆ ಜನ ಬೀದಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.
ಇಲ್ಲಿ ಏನಾಗಿದೆ ಇಲ್ಲಿವರೆಗೆ ಅಂತ ಯಾರಿಗೂ ಗೊತ್ತಿಲ್ಲ
ಏನಾಗಿದೆ ಅನ್ನೋದಕ್ಕಿಂತ ಮುಂಚೆ ಈ ವಿಡಿಯೋಗಳನ್ನು ಪಬ್ಲಿಕ್ ಗೆ ಬಿಟ್ಟಿದ್ದಾರಲ್ಲ ಅವರು ಯೋಚನೆ ಮಾಡಬೇಕಾಗಿತ್ತು. ಇದರಿಂದ ನಾನು ಮಾಡುತ್ತಿರುವುದು ತಪ್ಪು ಎಂದು.
ಪ್ರಭಾವಿ ವ್ಯಕ್ತಿಯ ಮುಖ ತೋರಿಸದೆ ಪಾಪದ ಆ ಹೆಣ್ಣು ಮಕ್ಕಳ ನೇರ ನೇರ ಚಿತ್ರಗಳನ್ನು ತೋರಿಸಿ ಎಷ್ಟೊಂದು ಜನ ಹೆಣ್ಣು ಮಕ್ಕಳ ಬದುಕು ಇವತ್ತು ಬೀದಿಗೆ ತಂದಿದ್ದಾರೆ.
ಆಯ್ತು ಆ ಹೆಣ್ಣು ಮಕ್ಕಳು, ತಾಯಂದಿರು ಪ್ರಭಾವ, ಆಸೆ ಆಮಿಷ ಇನ್ಯಾವುದೋ ವಿಚಾರಕ್ಕೆ ಸಹಕರಿಸಿರಬಹುದು..
ಆದರೆ ಅವರ ಪುಟಾಣಿ ಪುಟಾಣಿ ಮಕ್ಕಳ ! ಅವರ ತಂದೆ-ತಾಯಿಂದಿರ ! ಅವರ ಅಣ್ಣ ತಮ್ಮಂದಿರ ! ಅಕ್ಕತಂಗಿಯರ ! ಕುಟುಂಬದ ಪರಿಸ್ಥಿತಿ ಯೋಚನೆ ಮಾಡಬೇಕಿತ್ತಲ್ವ ಛೇ ಯಾರಿದೆಲ್ಲ ಮಾಡೋದಕ್ಕೆ ಅಧಿಕಾರ ಕೊಟ್ಟೋರು ಕಾನೂನು ಚೌಕಟ್ಟಿಲ್ಲವೇ
ಏನ್ ಮಾಡ್ತಾ ಇದೆ ಚುನಾವಣೆ ಆಯೋಗ ? ಏನ್ ಮಾಡ್ತಾ ಇದೆ ಗೃಹ ಇಲಾಖೆ ? ಏನ್ ಮಾಡ್ತಾ ಇದೆ ಪೊಲೀಸ್ ಇಲಾಖೆ ?.
ಕೃತ್ಯ ಎಸೆಗಿರುವವನು, ವಿಡಿಯೋ ಮಾಡಿರುವವನು, ಆ ವಿಡಿಯೋಗಳನ್ನು ಸಾರ್ವಜನಿಕವಾಗಿ ಹರಿಬಿಟ್ಟಿರುವವನು ಮೂವರ ಅಪರಾಧ ಒಂದೇ ಆಗಿದೆ ಮೂವರೆಗೂ ಕಠಿಣ ಸಜೆ ಆಗಲೇಬೇಕು.
ಯಡೇಹಳ್ಳಿ ಆರ್ ಮಂಜುನಾಥ್
ಸಕಲೇಶಪುರ