Friday, November 22, 2024
Homeಸುದ್ದಿಗಳುಸಕಲೇಶಪುರಸಕಲೇಶಪುರ : ಹಿಂದೂ ಪರ ಸಂಘಟನೆಗಳ ಮುಖಂಡ ರಘು ಸಕಲೇಶಪುರ ಮನೆಗೆ ಪ್ರಜ್ವಲ್ ರೇವಣ್ಣ ಭೇಟಿ...

ಸಕಲೇಶಪುರ : ಹಿಂದೂ ಪರ ಸಂಘಟನೆಗಳ ಮುಖಂಡ ರಘು ಸಕಲೇಶಪುರ ಮನೆಗೆ ಪ್ರಜ್ವಲ್ ರೇವಣ್ಣ ಭೇಟಿ ಚುನಾವಣಾ ರಣತಂತ್ರ ಕುರಿತು ಮಹತ್ವದ ಚರ್ಚೆ

ಸಕಲೇಶಪುರ : ಹಿಂದೂ ಪರ ಸಂಘಟನೆಗಳ ಮುಖಂಡ ರಘು ಸಕಲೇಶಪುರ ಮನೆಗೆ ಪ್ರಜ್ವಲ್ ರೇವಣ್ಣ ಭೇಟಿ 

ಚುನಾವಣಾ ರಣತಂತ್ರ ಕುರಿತು ಮಹತ್ವದ ಚರ್ಚೆ 

ಸಕಲೇಶಪುರ – ಬಿಜೆಪಿ – ಜೆಡಿಎಸ್ ಪಕ್ಷದ ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣರವರು ಗುರುವಾರ ಹಿಂದೂ ಪರ ಸಂಘಟನೆಗಳ ಮುಖಂಡರಾದ ರಘು ಸಕಲೇಶಪುರ ರವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನೆಡೆಸಿದರು.

ರಘು ಸಕಲೇಶಪುರ ನಿವಾಸಕ್ಕೆ ಭೇಟಿ ನೀಡಿದ ಪ್ರಜ್ವಲ್ ಎನ್.ಡಿ. ಎ ಮೈತಿಕೂಟದ ಒಮ್ಮತದ ಅಭ್ಯರ್ಥಿಯಾಗಿದ್ದು ಪ್ರಧಾನಿ ಮೋದಿ ಕೈ ಬಳಪಡಿಸಲು ಬೆಂಬಲಿಸುವಂತೆ ಮನವಿ ಮಾಡಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಸಿಮೆಂಟ್ ಮಂಜು ಗೆಲುವಿಗೆ ಹಿಂದೂ ಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ರೂಪಿಸಿದ ಕಾರ್ಯತಂತ್ರ ಯಶಸ್ವಿಯಾಗಿದೆ ಈಗಾಗಿಯೇ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಪಡೆಯಲು ಸಾಧ್ಯವಾಗಿದೆ ಎಂದು ಪ್ರಜ್ವಲ್ ರೇವಣ್ಣ ಹೇಳಿದರು ಎಂದು ತಿಳಿದು ಬಂದಿದೆ.

ಈ ವೇಳೆ ಮಾತನಾಡಿದ ರಘು ಸಕಲೇಶಪುರ, ಸಂಘಟನೆ ಹಿರಿಯರು ಹಾಗೂ ಶಾಸಕ ಸಿಮೆಂಟ್ ಮಂಜು ಜೊತೆ ಚರ್ಚಿಸಿ ಮುಂದುವರಿಯುತ್ತೇವೆ ಎಂದು ಪ್ರಜ್ವಲ್ ರೇವಣ್ಣ ನವರಿಗೆ ತಿಳಿಸಿದ್ದು 

      ಸಂಘಟನೆ ಕಾರ್ಯಕರ್ತರು ಪ್ರತಿ ಚುನಾವಣೆಯಲ್ಲಿ ತರ್ಡ್ ಪಾರ್ಟಿ ಕ್ಯಾಂಪೈನ್ ನಲ್ಲಿ ಮತದಾನ ಕಡ್ಡಾಯ ಹಾಗೂ ದೇಶದ ಪರವಾಗಿ ಇರುವ ಮತ್ತು ದೇಶದ ಭದ್ರತೆಗೆ ಬದ್ಧವಾಗಿರುವ ವ್ಯಕ್ತಿಗೆ ಮತದಾನ ಮಾಡಬೇಕು.ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ವಿಶ್ವ ಗುರು ಮಾಡುವ ಸಂಕಲ್ಪ ಮಾಡಿದ್ದಾರೆ. 500 ವರ್ಷದ ಸುದೀರ್ಘ ಸಂಘರ್ಷದ ನಂತರ ರಾಮಮಂದಿರ ನಿರ್ಮಾಣ ಮಾಡಿದ ಪಕ್ಷಕ್ಕೆ ನಾವು ಬೆಂಬಲ ಸೂಚಿಸಬೇಕು ಎಂದು ಹೇಳಿದ್ದಾರೆ.

 ನರೇಂದ್ರ ಮೋದಿ ಅವರಿಗೆ ಹೆಚ್ಚು ಬಲ ಕೊಡುವ ನಿಟ್ಟಿನಲ್ಲಿ ಹಾಸನ ಜಿಲ್ಲೆಯಲ್ಲಿ  ಎನ್.ಡಿ.ಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಅತಿ ಹೆಚ್ಚು ಮತದ ಅಂತರದಲ್ಲಿ ಗೆಲ್ಲಿಸಬೇಕು. ಮೈತ್ರಿಕೂಟದ ಪಕ್ಷಕ್ಕೆ ಹೆಚ್ಚಿನ ಸಂಖ್ಯೆ ಬಲ ಬಂದಾಗ ಮಾತ್ರ ದೇಶಕ್ಕೆ ಹಿತವಾಗಿರುವ ಮಸೂದೆಗಳನ್ನು ಜಾರಿಗೆ ತರಲು ಸಾಧ್ಯ ಹೀಗಾಗಿ ಎನ್.ಡಿ.ಎ ಒಕ್ಕೂಟದ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ ಎಂದು ತಿಳಿಸಿದರು.

     

ಈ ಸಂಧರ್ಭದಲ್ಲಿ ಸಮಾಜ ಸೇವಕರು ಡಾಕ್ಟರ್ ರತ್ನಾಕರ್, ಕೌಶಿಕ್, ಪ್ರದೀಪ್, ಶೇಖರ್, ವೀಜಿತ್, ಶ್ರೀಜಿತ್, ದೀಪು, ಪ್ರತಾಪ್, ಸಂತೋಷ್, ದುಷ್ಯಂತ್, ಧರ್ಮೇಶ್, ಆಟೋ ಹರೀಶ್, ಸಚಿನ್ ಬಾಳೆಹಳ್ಳ, ರವಿ ಹೆಬ್ಬಸಾಲೆ, ವಿಜಿತ್. ಶ್ರೀಜಿತ್, ಸಚಿನ್ ಕ್ಯಾಮನಹಳ್ಳಿ, ಶಿವು ಜಿಪ್ಪಿ ಸೇರಿದಂತೆ ಜೆಡಿಎಸ್ ಮುಖಂಡರಾದ ಸುಪ್ರದೀಪ್ ಯಜಮಾನ್, ಸಚಿನ್ ಪ್ರಸಾದ್, ಭಾಸ್ಕರ್, ಬೆಕ್ಕನಹಳ್ಳಿ ನಾಗರಾಜ್, ಪ್ರಜ್ವಲ್, ಹೆತ್ತೂರು ವಿಜಯ್ ಕುಮಾರ್, ಒಕ್ಕಲಿಗ ಸಂಘದ ಸದಸ್ಯರು ಉಪಸ್ಥಿತರಿದ್ದರು…

RELATED ARTICLES
- Advertisment -spot_img

Most Popular