ರೈತ ಕುಟುಂಬದ ಮೇಲೆ ಗುಂಡಾಗಿರಿ: ಆರೋಪಿಗಳನ್ನು ಬಂಧಿಸಲು ಪೊಲೀಸರ ಮಿನಾಮೇಷ
ಸಕಲೇಶಪುರ : ಹೇಮಾವತಿ ನದಿಯಿಂದ ಕಾಫಿ ಹಾಗೂ ಶುಂಠಿ ಬೆಳೆಗೆ ನೀರು ಹಾಯಿಸುವ ವಿಷಯಕ್ಕೆ ಖ್ಯಾತೆ ತೆಗೆದು ರೈತ ಕುಟುಂಬದ ಮೇಲೆ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ.
ಪಟ್ಟಣದ ಹೊರವಲಯದ ಕೌಡಳ್ಳಿ ಗ್ರಾಮದಲ್ಲಿ ಘಟನೆ ಜರುಗಿದ್ದು ಕೆಲ ಗುಂಡಾಗಳ ದೌರ್ಜನ್ಯ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ರೈತ ಮೋಹನ್ ಪತ್ನಿ ದೂರು ನೀಡಿ 48 ಗಂಟೆ ಕಳೆದರು ಪೊಲೀಸರು ಮಾತ್ರ ಆರೋಪಿಗಳನ್ನು ಬಂಧಿಸುವಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಮೋಹನ್ ಪತ್ನಿ ಪ್ರೀತಿ ಆರೋಪಿಸಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಪಟ್ಟದ ಒಕ್ಕಲಿಗ ಸಮುದಾಯ ಭವನದಲ್ಲಿ ನೆಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಕೆಲವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದು ಪಕ್ಷ ಸೇರ್ಪಡೆಯಾದ ದಿನವೇ ಈ ಘಟನೆ ನೆಡೆದಿದೆ.ಪಕ್ಷ ಸೇರ್ಪಡೆಯಾದವರಲ್ಲಿ ಕಾಂಗ್ರೆಸ್ ಮುಖಂಡನ ಸಂಬಂಧಿಕನೊಬ್ಬ ಇದ್ದು ತಾಲೂಕಿನ ನಮ್ಮದೇ ಆಡಳಿತ ನಾವು ಹೇಳಿದ ಹಾಗೆ ಅಧಿಕಾರಿಗಳು ಕೇಳಬೇಕು ಎಂಬ ದರ್ಪದ ಮಾತುಗಾಳಡಿದ್ದಾರೆ ಎಂದು ತಿಳಿದು ಬಂದಿದ್ದು ಅ ಕಾಂಗ್ರೆಸ್ ಮುಖಂಡ ನ ಕುಮ್ಮಕ್ಕನಿಂದ ಅವರ ಚೇಲಾಗಳು ಈ ರೈತ ಕುಟುಂಬಕ್ಕೆ ಕೆಟ್ಟ ಪದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದು ಇದೀಗ ಅ ರೈತ ಕುಟುಂಬ ರಕ್ಷಣೆಗಾಗಿ ಪೊಲೀಸ್ ಠಾಣೆ ಮೊರೆ ಹೋಗಿದ್ದಾರೆ.
ದೂರಿನ ಸಾರಾಂಶ : ನಾನು ಮತ್ತು ನನ್ನ ಪತಿ ಕೌಡಳ್ಳಿ, ಗ್ರಾಮದಲ್ಲಿ ವಾಸವಾಗಿದ್ದು 2 ಎಕರೆ ಕಾಫಿ ತೋಟವನ್ನು ಹೊಂದಿದ್ದು ಕಾಫಿ ಜೊತೆಗೆ ಶುಂಠಿ ಬೆಳೆಯನ್ನು ಬೆಳೆದುಕೊಂಡು ಜೀವನ ನಡೆಸುತ್ತಿದ್ದು ದಿನಾಂಕ 20-03-2024 ರಂದು ರಾತ್ರಿ ಸಮದಲ್ಲಿ ನನ್ನ ಗಂಡ ನೀರು ಹಾಯಿಸುವ ಸಂಧರ್ಭದಲ್ಲಿ ತಹಶೀಲ್ದಾರ್ ಮತ್ತು ಎ ಸಿ ಅವರನ್ನು ಕರೆದುಕೊಂಡು ಬಂದು ಹೇಮಾವತಿ ನೀರನ್ನು ಖಾಲಿಮಾಡುತ್ತಿದ್ದಾರೆ ಎಂದು ಹೇಳಿದಾಗ ನನ್ನ ಗಂಡ ನೀರು ಹೊಡೆಯುತ್ತಿದ್ದ ಲಾಂಬಣಿ ಮೋಟಾರ್ ಅತಿ ಚಿಕ್ಕದಿದು ಈ ಸಣ್ಣ ವಿಚಾರಕ್ಕೆ ಏಕೆ ಕಂಪ್ಲೆಂಟ್ ಮಾಡುತ್ತಿರ ಎಂದು ಎ ಸಿ ಅವರನ್ನು ಪ್ರಶ್ನಿಸಿ ನಾಳೆ ಬೆಳಿಗ್ಗೆ, ಮೋಟರನ್ನು ಎತ್ತಲು ಹೇಳಿ ಹೋಗಿರುತ್ತಾರೆ ನಂತರ ನನ್ನ ಗಂಡ ಮನೆಗೆ ಬಂದು ವಿಷಯ ಹೇಳಿ ಮೋಟರ್ ನೋಡಿಕೊಂಡು ಬರುವುದಾಗಿ ಹೇಳಿ ಹೋದಂತಹ ಸಂಧರ್ಭದಲ್ಲಿ ರಾತ್ರಿ 12.30 ರ ಸಮಯದಲ್ಲಿ, ಏಕಾಏಕಿ ಪ್ರದೀಪ್ ನಾಯು ಮಹೇಶ್, ಸುನಾಮಿ, ಕುಮ್ಮಿ, ಸಂತೋಷ, ಎಂಬುವವರು ಮನೆಯ ಕಿಟಕಿ ಹೊಡೆದು ನಾನು ಮತ್ತು ನನ್ನ ಮಗಳು ಆಚೆ ಬಂದಾಗ ನನ್ನನ್ನು ಎಳೆದು ಹಿಂಸೆ ನೀಡಿ ನನ್ನ ಗಂಡನನ್ನು ಕೊಲೆಮಾಡುತ್ತೇನೆ ಎಂದು ಹೆದರಿಸಿ ಅವಾಚ್ಯ ಶಬ್ದಗಳಿಂದ ಬೈದು ಮನೆಯ ಸುತ್ತಮುತ್ತ ನನ್ನ ಗಂಡನನ್ನು ಹುಡುಕಿ ಜೀವ ಬೇದರಿಕೆ ಹಾಕಿ ಹೋಗಿರುತ್ತಾರೆ ಆದ್ದರಿಂದ ನನಗೆ ಮತ್ತು ನನ್ನ ಗಂಡನ ಜೀವಕ್ಕೆ ಆಪತ್ತು ಇದ್ದು ತಾವು ನಮಗೆ ರಕ್ಷಣೆ ನೀಡುವುದಾಗಿ ಹಾಗೂ ತಪ್ಪತಸ್ಮರ ವಿರುದ್ಧ ಕಾನೂನು ಕ್ರಮ ಕೈಗೂಳ್ಳಬೇಕಾಗಿ ನಗರ ಠಾಣೆಗೆ ದೂರು ನೀಡಿದ್ದಾರೆ.