ಕಾರಿನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಯುವತಿ ಅಡ್ಡಗಟ್ಟಿ ಹಲ್ಲೆ ಆರೋಪ: ಅರಣ್ಯ ಇಲಾಖೆ ಅರ್.ಆರ್.ಟಿ ಸಿಬ್ಬಂದಿ ಮದನ್ ಬಂಧನ
ಸಕಲೇಶಪುರ: ಕಾರಿನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಯುವತಿಯೊರ್ವಳನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ ಆರೋಪದ ಮೇಲೆ ಯುವಕನೋರ್ವನನ್ನು ಬಂಧಿಸಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಹಾನುಬಾಳ್ ಹೋಬಳಿ ಅಗ್ನಿ ಗ್ರಾಮದ ಬೆಂಗಳೂರು ಮೂಲದ ವೀಣಾ ಎಂಬುವವರ ಮನೆಗೆ ಮದನ್ ತಾಯಿ ಕೆಲಸಕ್ಕೆ ಹೋಗುತ್ತಿದ್ದು, ವೀಣಾ ಅವರ ಮೊಬೈಲ್ ನಂಬರ್‌ನ್ನು ಪಡೆದ ಮದನ್ ಮೆಸೆಜ್ ಮಾಡುತ್ತಿದ್ದ, ಈ ಹಿನ್ನಲೆಯಲ್ಲಿ ಮದನ್‌ಗೆ ವಾರ್ನ್ ಮಾಡಿದ ವೀಣಾ ಮೊಬೈಲ್ ನಂ ಬ್ಲಾಕ್ ಮಾಡಿದ್ದರು. ಕೆಲವು ದಿನಗಳ ನಂತರ ವೀಣಾರವರ ಪುತ್ರಿಯ ನಂ ಹುಡುಕಿ ಅವರ ಪುತ್ರಿ ವರ್ಷಿಣಿಗೆ ಪೋನ್ ಮಾಡಿ ಮಿಸ್‌ಡ್ ಕಾಲ್ ಬಂದಿದೆ ಎಂದು ಹೇಳಿದ್ದ. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ವರ್ಷಿಣಿಗೆ ಪದೇ ಪದೇ ಕಾಲ್ , ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ ಈ ಹಿನ್ನಲೆಯಲ್ಲಿ ವರ್ಷಿಣಿ ಸಹ ಆತನ ನಂ ಬ್ಲಾಕ್ ಲೀಸ್‌ಟ್ಗೆ ಹಾಕಿದ್ದರು. ಇದರಿಂದ ಬೇಸತ್ತು ಮದನ್ ಕಿರುಕುಳದ ಬಗ್ಗೆ ಪೋಷಕರಿಗೆ ವರ್ಷಿಣಿ ತಿಳಿಸಿದ್ದು ಈ ಹಿನ್ನೆಲೆಯಲ್ಲಿ ವೀಣಾ ಮದನ್‌ಗೆ ಕಾಲ್ ಮಾಡಿ ವಾರ್ನ್ ಮಾಡಿದ್ದರು. ಇದರಿಂದ ಸಿಟ್ಟಾದ ಮದನ್ ವರ್ಷಿಣಿ ಕಾರಿನಲ್ಲಿ ಸಕಲೇಶಪುರಕ್ಕೆ ತೆರಳುತ್ತಿದ್ದ ವೇಳೆ ತನ್ನ ಮನೆಯ ಮುಂದೆ ಕಾರು ಅಡ್ಡಗಟ್ಟಿ ವರ್ಷಿಣಿ ಮೇಲೆ ಹಲ್ಲೆ ಮಾಡಿ ಬಟ್ಟೆ ಹರಿದು ಎಳೆದಾಡಿರುತ್ತಾನೆ. ಈ ವೇಳೆ ಕಾರು ಚಾಲಕ ವರ್ಷಿಣಿ ರಕ್ಷಿಸಲು ಬಂದಾಗ ಮದನ್ ಪರಾರಿಯಾಗಿರುತ್ತಾನೆ. ಈ ಹಿನ್ನೆಲೆಯಲ್ಲಿ ವರ್ಷಿಣಿ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತದೆ. ಮದನ್‌ನ್ನು ಪೋಲಿಸರು ವಶಕ್ಕೆ ಪಡೆದಿರುತ್ತಾರೆ.