ಪ್ರತಿಷ್ಠಿತ ಲಂಕೇಶ್ ಪ್ರಶಸ್ತಿ: ಆಲೂರು ತಾಲ್ಲೂಕು ಉದಯವಾಣಿ ವರದಿಗಾರ ಕುಮಾರಸ್ವಾಮಿ ಆಯ್ಕೆ.
ಆಲೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ (ರಿ) ಸಂಘಟನೆ ವತಿಯಿಂದ ಪ್ರತಿಶ್ಠಿತ “*ಲಂಕೇಶ್ ಪ್ರಶಸ್ತಿ”* ಗೆ ಆಲೂರು ತಾಲ್ಲೂಕು ಉದಯವಾಣಿ ವರದಿಗಾರರು ಕಾ.ನಿ.ಪ.ದ್ವನಿ (ರಿ)ಸಂಘಟನೆ ತಾಲ್ಲೂಕು ಅಧ್ಯಕ್ಷ ಟಿ.ಕೆ.ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ (ರಿ) ರಾಜ್ಯಾದ್ಯಕ್ಷ ಮಲ್ಲಿಕಾರ್ಜುನ್ ಬಂಗ್ಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಲೂರು ತಾಲ್ಲೂಕಿನಲ್ಲಿ ಪ್ರಸ್ತುತ ಉದಯವಾಣಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು ಇದರ ಜೊತೆಗೆ ಸುಮಾರು 10 ವರ್ಷಗಳಿಂದ ಹೆಚ್ಸಿಎನ್ ಸುದ್ದಿ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಈ ಹಿಂದೆ ಅಮೋಘ್ ಸುದ್ದಿ ವಾಹಿನಿ,ಜಸ್ಟ್ ನ್ಯೂಸ್,ಜನಮಿತ್ರ,ಹಲೊ ಹಾಸನ್,ಸುವರ್ಣವಾಣಿ,ಹಾಯ್ ಹಾಸನ್ ಸೇರಿದಂತೆ ಹಲವಾರು ದೃಶ್ಯ ಹಾಗೂ ಮುದ್ರಣ ಮಾದ್ಯಮಗಳಲ್ಲಿ ನೇರಾ,ನಿಷ್ಠುರ,ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದಾರೆ ಇವರನ್ನು ಗುರುತಿಸಿ ಮಾರ್ಚ್ 24 ರಂದು ಬೆಂಗಳೂರಿನ ನೆಲಮಂಗಲದ ಎಂವಿಎಂ ಕನ್ವರ್ಷನ್ ಹಾಲ್ ನಲ್ಲಿ ಆಯೋಜಿಸಿರುವ ಕರ್ನಾಟಕ ಕಾ.ನಿ.ಪ.ದ್ವನಿ(ರಿ) ವತಿಯಿಂದ ನಡೆಯುವ 2 ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಕಾರ್ಯಕ್ರಮದಲ್ಲಿ ಆಲೂರು ಟಿ.ಕೆ.ಕುಮಾರಸ್ವಾಮಿ ಅವರಿಗೆ *”ಲಂಕೇಶ್ ಪ್ರಶಸ್ತಿ”* ನೀಡಿ ಗೌರವಿಸುತ್ತಿರುವುದು ನಮ್ಮ ಹೆಮ್ಮೆ ಎನಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿಗೆ ಭಾಜನರಾದ ಟಿ.ಕೆ.ಕುಮಾರಸ್ವಾಮಿ ಅವರನ್ನು ಹಿರಿಯ ಪತ್ರಕರ್ತ ಬಿ.ಕೆ.ರಂಗಸ್ವಾಮಿ,ಪ್ರದೀಪ್ ಗೌಡ,ಕಿರಣ್ ಕುಮಾರ್ ಕಿರಳ್ಳಿ,ಗಿರೀಶ್ ಹೊಸೂರು,ದರ್ಶನ್ ಕೆರೆಹಳ್ಳಿ,ಅಚ್ಚುತ್, ಗೋಪಿ ರಾಜನಹಳ್ಳಿ,ತ್ಯಾಗರಾಜ್, ಸೇರಿದಂತೆ ಹಲವು ಪತ್ರಕರ್ತರು ಅಭಿನಂದಿಸಿ ಸಂತಸ ಹಂಚಿಕೊಂಡರು.