ಜೆಜೆಎಂ ಕಾಮಗಾರಿಯಿಂದ ರಸ್ತೆಗಳಿಗೆ ಹಾನಿ.
ಕೆಪಿಸಿಸಿ ಸದಸ್ಯ ಯಡೇಹಳ್ಳಿ ಆರ್ ಮಂಜುನಾಥ್ ಅಸಮಾಧಾನ
ಸಕಲೇಶಪುರ : ಕೇಂದ್ರ ಸರಕಾರದ ಕುಡಿಯುವ ನೀರಿನ ಯೋಜನೆಯಾದ ಜಲಜೀವನ್ ಮಿಷನ್‌ಗೆ ನೀರಿನ ಮೂಲ ಇನ್ನೂ ಆಗಿಲ್ಲ. ಆದರೆ ತಾಲೂಕಿಯಾದ್ಯಂತ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಇದರಿಂದ ನಗರ ವ್ಯಾಪ್ತಿಯ ರಸ್ತೆಗಳು, ಹೆದ್ದಾರಿ, ಬಹುತೇಕ ಪಿಡಬ್ಲ್ಯುಡಿ ರಸ್ತೆಗಳು ಸಂಪೂರ್ಣ ಹಾನಿಗೊಳ್ಳುತ್ತಿವೆ ಎಂದು ಕೆಪಿಸಿಸಿ ಸದಸ್ಯ ಯಡೇಹಳ್ಳಿ ಮಂಜುನಾಥ್ ಆರೋಪಿಸಿದ್ದಾರೆ.
ತಾಲೂಕಿನ ಬಾಗೆ ಹಾಗೂ ಬೆಳಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜೆಜೆಎಂ ಕಾಮಗಾರಿ ಪ್ರಾರಂಭವಾಗಿದ್ದು. ಮನೆ ಮನೆಗೆ ಕುಡಿಯುವ ನೀರಿನ ಕಾಮಗಾರಿ ಯೋಜನೆ ಬಗ್ಗೆ ನಮಗೆ ಮೆಚ್ಚುಗೆ ಇದೆ. ಆದರೆ ಲೋಕೋಪಯೋಗಿ ಇಲಾಖೆಗೆ ಒಳಪಡುವ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾಮುಖ್ಯ ರಸ್ತೆ ಬದಿಗಳಲ್ಲಿ ಲೋಕೋಪಯೋಗಿ ಇಲಾಖೆ ಅನುಮತಿ ಪಡೆಯದೆಯೇ ಜಲಜೀವನ್ ಮಿಷನ್‌ಗೆ ಜೆಸಿಬಿ ಬಳಸಿ ಹೊಂಡಗಳನ್ನು ಚರಂಡಿಗಳನ್ನು ತೆಗೆದು ಪೈಪ್‌ಲೈನ್ ಅಳವಡಿಸಲಾಗುತ್ತಿದೆ. ಬೇಸಿಗೆಯಲ್ಲಿ ಪ್ರಾರಂಭವಾಗಿರುವ ಈ ಕಾಮಗಾರಿ ಬೇಕಾಬಿಟ್ಟಿ ನಡೆಸುತ್ತಿರುವುದರಿಂದ ನಂತರ ಮಳೆಗಾಲದಲ್ಲಿ ಅನ್ಯ ವಾಹನಗಳಿಗೆ ಸೈಡ್ ಕೊಡಲು ಹೋದ ಬಸ್, ಲಾರಿ ಸೇರಿದಂತೆ ಇತರ ವಾಹನಗಳು ಪೈಪ್ ಹಾಕಿದ ಚರಂಡಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಿವೆ. ಕೆಲವೆಡೆ ಕಾಂಕ್ರಿಟ್ ರಸ್ತೆಯನ್ನೇ ಅಗೆದು ಪೈಪ್ ಹಾಕಲಾಗಿದೆ.
ಕಾಮಗಾರಿ ಮೇಲೆ ಪ್ರೀತಿ
ಜಲಜೀವನ್ ಮಿಷನ್‌ಗೆ ಮಂಜೂರಾದ ಕಾಮಗಾರಿ ಅನುದಾನವನ್ನು ತರಾತುರಿಯಲ್ಲಿ ಪಡೆಯುವ ಉದ್ದೇಶದಿಂದ ಗುತ್ತಿಗೆದಾರರು ತರಾತುರಿಯಲ್ಲಿ ನಡೆಸುತ್ತಿದ್ದಾರೆ. ಅಧಿಕಾರಿಗಳು, ಸ್ಥಳೀಯರು ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದರೂ ಗುತ್ತಿಗೆದಾರರು ಮಾತ್ರ ಕ್ಯಾರೇ ಅನ್ನುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಜಲಜೀವನ್ ಮಿಷನ್ ಕಾಮಗಾರಿಯಿಂದ ರಸ್ತೆಯು ದುರ್ಬಲಗೊಂಡು ವಾಹನ ಸವಾರರಿಗೆ ಅಪಾಯಕಾರಿಯಾಗಿದೆ. ಚರಂಡಿಯಲ್ಲಿಹೋಗುತ್ತಿದ್ದ ನೀರು ರಸ್ತೆಯ ಮೇಲೆ ಸಾಗುತ್ತಿದೆ. ಅವೈಜ್ಞಾನಿಕ, ಅನಧಿಕೃತ ರಸ್ತೆ ಅಗೆತದಿಂದಾಗಿ ಸರಕಾರಕ್ಕೆ ನಷ್ಟವಾಗುತ್ತಿದೆ ಎಂದು ವಾಸ್ತವ ನ್ಯೂಸ್ ಹೇಳಿಕೆ ನೀಡಿದ್ದಾರೆ.ಕೂಡಲೇ