ಸೇಫ್ ಸಕಲೇಶಪುರ ಎಂಬ ಕಳ್ಳತನ ತಡೆಗೆ ವಿನುತನ ಪ್ರಯೋಗ
ಸಕಲೇಶಪುರ : ಅಪರಾಧ ತಡೆ ಹಾಗೂ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ಹಾಗೂ ಖಾಸಗಿಯವರ ಸಹಾಭಾಗೀತ್ವದಲ್ಲಿ ವಿನುತನ ಪ್ರಯೋಗಕ್ಕೆ ಪೊಲೀಸರು ಮುಂದಾಗಿದ್ದಾರೆ.
ಸಕಲೇಶಪುರ ಉಪವಿಭಾಗದ ವತಿಯಿಂದ ಇಂದು ಪಟ್ಟಣ ಲಯನ್ಸ್ ಸೇವಾ ಸಂಸ್ಥೆಯಲ್ಲಿ ವರ್ತಕರು, ವೈನ್ಸ್ ಶಾಪ್ ಮಾಲೀಕರು ಸೇರಿದಂತೆ ಇನ್ನಿತರ ರ ಅಂಗಡಿಗಳಲ್ಲಿ ಕಳ್ಳತನ ತಡೆಗಟ್ಟಲು ವಿಶೇಷ ಸಿಸಿ ಕ್ಯಾಮರಾ ಅಳವಡಿಕೆಯಿಂದ ಸುಲಭವಾಗಿ ಕಳ್ಳತನ ಮಾಡಿದವರನ್ನು ಪತ್ತೆ ಹಚ್ಚಲು ಸಾಧ್ಯ ಎಂದು ಸಹಾಯಕ ಪೊಲೀಸ ವರಿಷ್ಟಧಿಕಾರಿ ಮಿಥುನ್ ಹೇಳಿದರು.
ಶ್ರೀ ಕೃಷ್ಣ ಸೈನ್ ಇನ್ ಸೆಕ್ಯೂರಿಟಿ ಖಾಸಗಿ ಸಂಸ್ಥೆ ಸಿದ್ದ ಪಡಿಸಿರುವ ಸಿಸಿ ಕ್ಯಾಮರಾ ಅಳವಡಿಸಿ ಲೈವ್ ಮೊನಿಟರ್ ಮೂಲಕ ಕಳ್ಳರ ಪತ್ತೆಗೆ ಸಹಕಾರಿಯಾಗಲಿದೆ ಎಂದು ಸಂಸ್ಥೆಯ ರಕ್ಷಿತ್ ನೆರೆದಿದ್ದ ವರ್ತಕರರಿಗೆ ಈ ವಿನುತನ ಕ್ಯಾಮರಾ ಕಾರ್ಯ ನಿರ್ವಹಿಸುತ್ತದೆ ಎಂದು ವಿವರಣೆ ನೀಡಿದರು.
ಈ ಸಂಧರ್ಭದಲ್ಲಿ ವೃತ್ತ ನಿರೀಕ್ಷಕ ಚೈತನ್ಯ, ನಗರ ಠಾಣೆ ಪಿ ಎಸ್ ಐ ಸುನೀಲ್ ಸೇರಿದಂತೆ ಮುಂತಾದವರು ಇದ್ದರು