ಹಿಂದೂ ಸಂಸ್ಕ್ರತಿ ದೇಶದಲ್ಲಿ ಉಳಿಯಬೇಕು: ಆರ್.ಎಸ್.ಎಸ್ ಹಿರಿಯ ಮುಖಂಡ ಸು.ರಾಮಣ್ಣ
ಸಕಲೇಶಪುರ: ದೇಶದಲ್ಲಿ ಹಿಂದೂ ಸಂಸ್ಕ್ರತಿ ಉಳಿಯಬೇಕಾದರೆ ಹಿಂದೂ ಕುಟುಂಬ ಪದ್ದತಿ ಉಳಿಯಬೇಕೆಂದು ಉಳಿಯಬೇಕೆಂದು ಆರ್.ಎಸ್.ಎಸ್ ಹಿರಿಯ ಮುಖಂಡ ಸು.ರಾಮಣ್ಣ ಹೇಳಿದರು.
ಹೆತ್ತೂರಿನಲ್ಲಿ ನಡೆದ ಕುಟುಂಬ ಮಿಲನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶ ಹಿಂದೂ ಕುಟುಂಬ ಪದ್ದತಿ ಜೀವಂತವಿರುವುದರಿಂದ ದೇಶ ಬಲಶಾಲಿಯಾಗಿದೆ. ಈ ಹಿಂದೆ ಅವಿಭಕ್ತ ಕುಟುಂಬಗಳು ಹೆಚ್ಚು ಇರುತ್ತಿತ್ತು. ಹಲವು ಕುಟುಂಬಗಳು ಒಟ್ಟಾಗಿ ನೆಲೆಸುತ್ತಿದ್ದವು.ಇದೀಗ ಅವಿಭಕ್ತ ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ.ಕುಟುಂಬಗಳ ಸಂಪ್ರದಾಯ ಆಚಾರ ವಿಚಾರಗಳನ್ನು ಬಿಡದೆ ಹಿರಿಯರು ಹಾಕಿಕೊಟ್ಟ ಆಚರಣೆಗಳನ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು.
ಸುಮಾರು 62 ಕುಟುಂಬಗಳು ಕುಟುಂಬ ಮಿಲನ್ ನಲ್ಲಿ ಭಾಗವಹಿಸಿದ್ದವು.ಬೌದ್ದಿಕ್ ಆಟ ಆಡಿ ಸಂತೋಷಪಟ್ಟರು.
ಈ ಸಂಧರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಅನುಸೂಯ, ಧರ್ಮ ಜಾಗರಣಾ ವಿಭಾಗ ಸಂಯೋಜಕ ಅನಿಲ್,ಆರ್.ಎಸ್.ಎಸ್ ಜಿಲ್ಲಾ ಕಾರ್ಯವಾಹ ನವೀನ್, ಜಿಲ್ಲಾ ಸಹ ಸಂಪರ್ಕ ಪ್ರಮುಖ್ ಹರೀಶ್,ಆರ್.ಎಸ್.ಎಸ್ ಹೆತ್ತೂರು ಹೋಬಳಿ ಪ್ರಮುಖ್ ಪ್ರಜ್ವಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.