Thursday, April 3, 2025
Homeಸುದ್ದಿಗಳುಗ್ರಾಮೀಣದೇವಾಲದಕೆರೆ ಗ್ರಾ.ಪಂ‌ ವ್ಯಾಪ್ತಿಯಲ್ಲಿ ಹದಗೆಟ್ಟ ರಸ್ತೆ; ಅರಣ್ಯ ಇಲಾಖೆ ವಿರುದ್ದ ಗ್ರಾಮಸ್ಥರ ಅಕ್ರೋಶ;

ದೇವಾಲದಕೆರೆ ಗ್ರಾ.ಪಂ‌ ವ್ಯಾಪ್ತಿಯಲ್ಲಿ ಹದಗೆಟ್ಟ ರಸ್ತೆ; ಅರಣ್ಯ ಇಲಾಖೆ ವಿರುದ್ದ ಗ್ರಾಮಸ್ಥರ ಅಕ್ರೋಶ;

ಸಕಲೇಶಪುರ: ರಸ್ತೆ ನಿರ್ಮಾಣ ಕಾಮಗಾರಿಗೆ ವಿನಾಕಾರಣ ಅರಣ್ಯ ಇಲಾಖೆಯವರು ಅಡ್ಡಿಪಡಿಸುತ್ತಿರುವುದರಿಂದ ನೆಲಗಳ್ಳಿ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಮಂಜುನಾಥ್ ಸಂಘಿ ಆರೋಪಿಸಿದ್ದಾರೆ.
   ತಾಲೂಕಿನ‌ ದೇವಾಲದಕೆರೆ ಗ್ರಾ.ಪಂ‌ ವ್ಯಾಪ್ತಿಯಲ್ಲಿ ಹಲವು ರಸ್ತೆಗಳು ಹದಗೆಟ್ಟಿದ್ದು ಅರಣ್ಯ ಇಲಾಖೆ ಯಾವುದೇ ಕಾಮಗಾರಿಗಳನ್ನು ಮಾಡಲು ಅಡ್ಡಿ ಪಡಿಸುತ್ತಿದೆ. ನೆಲಗುಂಡಿ ಕುಗ್ರಾಮದಂತಾಗಿದೆ.  ನೆಲಗಳ್ಳಿ ಗ್ರಾಮದಲ್ಲಿ ಸುಮಾರು 15 ಕ್ಕೂ ಹೆಚ್ಚು ಕುಟುಂಬಗಳು ತಲೆ ತಲಾಂತರದಿಂದ ನೆಲೆಸಿದ್ದು ರಸ್ತೆ ಇಲ್ಲದ ಕಾರಣ ಗ್ರಾಮದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಪರದಾಡುವಂತಾಗಿದೆ.ಹದಗೆಟ್ಟ ರಸ್ತೆಯಿಂದಾಗಿ ಯಾವುದೇ ವಾಹನಗಳು ಬರುವಂತಿಲ್ಲ..ಸರ್ಕಾರಿ ಬಸ್ ಸಹ ಸಂಚರಿಸುತ್ತಿಲ್ಲ   ಗ್ರಾಮಸ್ಥರ ಪರಿಸ್ಥಿತಿ ದ್ವೀಪದಲ್ಲಿದ್ದಿಂತಾಗಿದೆ. ಕೂಡಲೆ ಇಲ್ಲಿ ಮಂಜೂರಾಗಿರುವ ರಸ್ತೆ ಕಾಮಗಾರಿಯನ್ನು ಮಾಡಲು ಅರಣ್ಯ ಇಲಾಖೆ ಅಡ್ಡಿ ಪಡಿಸುವುದು ಮನುಷ್ಯತ್ವ ವಿರೋದಿ ನೀತಿ ಎಂದು   ಆಕ್ರೋಷ ವ್ಯಕ್ತಪಡಿಸಿದರು.
ದೇವಲದಕೆರೆ ಗ್ರಾಮ ಪಂಚಾಯಿತಿ ಬರುವ ನೆಲಗಳ್ಳಿ ಗ್ರಾಮದ ಎಸ್‌ಸಿ ಕಾಲೋನಿಯ ರಸ್ತೆ ಮತ್ತು ದೇವಲದಕೆರೆಯಿಂದ ಮೂಡಿಗೆರೆಗೆ ಹೋಗುವ ರಸ್ತೆಯ ಎರಡು ವರ್ಷದ ಹಿಂದೆ ಸೇತುವೆಯು ಕುಸಿದು ಹೋಗಿದ್ದು ಮತ್ತು ಎರಡು ವರ್ಷದಿಂದ ಬಸ್ಸು ಕೂಡ ಸಂಚರಿಸುತ್ತಿಲ್ಲ ದೇವಲಕೆರೆಯಿಂದ ವಿದ್ಯಾರ್ಥಿಗಳಿಗೆ ಮೂಡಿಗೆರೆಗೆ ಹೋಗಲು ಬಸ್ಸಿಲ್ಲದ ಕಾರಣ ದೇವಲದ ಕೆರೆಯಿಂದ ನಡೆದುಕೊಂಡು ದೇವರುಂದಕ್ಕೆ ಕಾಲು ನಡಿಗೆಯಲ್ಲಿ  ಬಸ್ಸು ಹಿಡಿದು ಶಾಲೆಗೆ ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ  ಈ ಬಗ್ಗೆ  ಶಾಸಕರಾದ ಎಚ್ ಕೆ ಕುಮಾರಸ್ವಾಮಿ ಅವರಿಗೆ ನೆಲಗಳ್ಳಿ ಗ್ರಾಮಸ್ಥರು ಐದು  ಬಾರಿ ಮನವಿ ಮಾಡಿ ಅರಣ್ಯ ಇಲಾಖೆಯ ದಬ್ಬಾಳಿಕೆಯನ್ನು ಸರಿಪಡಿಸಲು ಬೇಡಿಕೊಂಡರು ಯಾವುದೇ ರೀತಿಯ ಪ್ರಯೋಜವಾಗಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. 
ಈ ಸಂಧರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಭರತ್ ಹಾಗೂ ಇತರರು ಹಾಜರಿದ್ದರು.
RELATED ARTICLES
- Advertisment -spot_img

Most Popular