Tuesday, March 25, 2025
Homeಸುದ್ದಿಗಳುಬ್ರೇಕ್ ಫೇಲ್ ಆಗಿ ಅರಣ್ಯಕ್ಕೆ ನುಗ್ಗಿದ ಅಯ್ಯಪ್ಪ ಮಾಲಾಧಾರಿಗಳಿದ್ದ ಮಿನಿ ಬಸ್:15 ಜನರಿಗೆ ಗಾಯ

ಬ್ರೇಕ್ ಫೇಲ್ ಆಗಿ ಅರಣ್ಯಕ್ಕೆ ನುಗ್ಗಿದ ಅಯ್ಯಪ್ಪ ಮಾಲಾಧಾರಿಗಳಿದ್ದ ಮಿನಿ ಬಸ್:15 ಜನರಿಗೆ ಗಾಯ

Road accident | ಬ್ರೇಕ್ ಫೇಲ್  ಆಗಿ ಅರಣ್ಯಕ್ಕೆ ನುಗ್ಗಿದ ಅಯ್ಯಪ್ಪ ಮಾಲಾಧಾರಿಗಳಿದ್ದ ಮಿನಿ ಬಸ್:15 ಜನರಿಗೆ ಗಾಯ

ಬೆಳ್ತಂಗಡಿ ತಾಲೂಕಿನ ಮುಂಡಾಜೆ ಬಳಿ ಅಯ್ಯಪ್ಪ ಮಾಲಾಧಾರಿಗಳಿದ್ದ ಬಷ್ಟೊಂದು ಬ್ರೇಕ್ ಫೇಲ್ ಅಗಿ ಕಾಡಿನ ಕಡೆಗೆ ನುಗ್ಗಿದೆ.

ಮಂಗಳೂರು: ಅಯ್ಯಪ್ಪ ಮಾಲಾಧಾರಿಗಳು ಪ್ರಯಾಣಿಸುತ್ತಿದ್ದ ಮಿನಿ ಬಸ್ ಒಂದು ಇದ್ದಕ್ಕಿದ್ದಂತೆಯೇ ಬ್ರೇಕ್ ಫೇಲ್ ಆಗಿ ಕಾಡಿನ ಒಳಗೆ ನುಗ್ಗಿದ ಘಟನೆ (Road accident) ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಬಳಿ ನಡೆದಿದೆ. ಬಸ್ಸಿನಲ್ಲಿ 21 ಜನರಿದ್ದು, ಈ ಪೈಕಿ 15 ಜನರಿಗೆ ಗಾಯಗಳಾಗಿವೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಬಳ್ಳಾರಿಯ ಜಿಲ್ಲೆಯ ಕೂಡ್ಲಿಗಿ ತಾಲೂಕಿನ 21 ಜನ ಮಿನಿ ಬಸ್‌ನಲ್ಲಿ ಶಬರಿಮಲೆಗೆ ಪ್ರಯಾಣಿಸುತ್ತಿದ್ದರು. ಬಸ್ಸು ಮುಂಡಾಜೆ ಬಳಿ ಒಮ್ಮೆಗೇ ಬ್ರೇಕ್ ಫೇಲ್ ಆಗಿದ್ದರಿಂದ ಕೂಡಲೇ ನಿಲ್ಲಿಸುವ ಉದ್ದೇಶದಿಂದ ಎಂಬಂತೆ ಚಾಲಕ ರಸ್ತೆ ಬದಿಯ ಕಾಡಿನ ಕಡೆಗೆ ನುಗ್ಗಿಸಿದ್ದಾನೆ. ಪಕ್ಕದ ಅಡೆತಡೆಗಳಿಂದಾಗಿ ಬಸ್ಸು ಮುಂದೆ ಚಲಿಸದೆ ನಿಂತಿದೆ. ಹೀಗಾಗಿ ದೊಡ್ಡ ಅಪಾಯ ತಪ್ಪಿದೆ. ಆದರೆ ಏಕಾಏಕಿ ವಾಹನ ಎರಾಬಿದ್ರಿ ಚಲಿಸಿದ್ದರಿಂದ ಹಲವರಿಗೆ ಗಾಯಗಳಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಆರು ಆಂಬ್ಯುಲೆನ್ಸ್‌ಗಳು ಧಾವಿಸಿದ್ದು, ಬೆಳ್ತಂಗಡಿ ಸಂಚಾರಿ ಪೊಲೀಸರು ಕೂಡಾ ದೌಡಾಯಿಸಿದ್ದಾರೆ. ಬಾಲಕ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಮಂಗಳೂರು ಮತ್ತು ಎಸ್.ಡಿ.ಎಮ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 15 ಮಂದಿಗೆ ಕಕ್ಕಿಂಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬೇರೆ ಆಸ್ಪತ್ರೆಗೆ ಕಳುಹಿಸಲಾಯಿತು.

 

 

 

RELATED ARTICLES
- Advertisment -spot_img

Most Popular