Sunday, April 13, 2025
Homeಸುದ್ದಿಗಳುತೆಲಾಂಗಣ ರಾಜ್ಯದಲ್ಲಿ ಹಾಸನ ಡೈರಿ ಘಟಕಕ್ಕೆ ಜಾಗ ನೀಡಲು ಮನವಿ: ಎಚ್.ಡಿ ರೇವಣ್ಣ

ತೆಲಾಂಗಣ ರಾಜ್ಯದಲ್ಲಿ ಹಾಸನ ಡೈರಿ ಘಟಕಕ್ಕೆ ಜಾಗ ನೀಡಲು ಮನವಿ: ಎಚ್.ಡಿ ರೇವಣ್ಣ

ಹಾಸನ: ತೆಲಾಂಗಣ ರಾಜ್ಯದ ಹೈದರಾಬಾದ್ ನಗರದಲ್ಲಿ ಹಾಸನ ಡೈರಿಯ ಘಟಕವನ್ನು ತೆರೆಯಲು ಸೂಕ್ತ ಜಾಗ ನೀಡುವಂತೆ ಅಲ್ಲಿನ ಮುಖ್ಯಮಂತ್ರಿ ಕೆ.ಸಿ.ಎನ್ ಚಂದ್ರಶೇಖರ್ರವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಮಾಜಿ ಲೋಕೊಪಯೋಗಿ ಸಚಿವ ಹಾಗೂ ಶಾಸಕ ಎಚ್.ಡಿ ರೇವಣ್ಣ ಹೇಳಿದ್ದಾರೆ.

ತೆಲಂಗಣಾದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿರವರೊಂದಿಗೆ ಕೆ.ಸಿ.ಎನ್ ಚಂದ್ರಶೇಖರ್ರವರನ್ನು ಭೇಟಿ ಮಾಡಿದ ಸಂಧರ್ಭದಲ್ಲಿ ಹಾಸನ ಡೈರಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಡೈರಿಯ ಉತ್ಪನ್ನಗಳಿಗೆ ಹೊರ ರಾಜ್ಯಗಳಲ್ಲೂ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಹಾಸನ ಡೈರಿಯ ಘಟಕವನ್ನು ತೆಲಂಗಣ ರಾಜ್ಯದ ಹೈದರಾಬಾದ್ನಲ್ಲಿ ತೆರೆಯಲು ಜಾಗ ನೀಡಿದರೆ ನಾವು ಘಟಕ ಆರಂಭಿಸಲು ಕ್ರಮ ಕೈಗೊಳ್ಳುತ್ತೇವೆ. ಇದರಿಂದಾಗಿ ಅಲ್ಲಿ ಉದ್ಯೋಗ ಅವಕಾಶ ಸಹ ಸೃಷ್ಟೀಯಾಗುವುದು. ಈ ನಿಟ್ಟಿನಲ್ಲಿ ಜಾಗ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

RELATED ARTICLES
- Advertisment -spot_img

Most Popular