MLC ಸಿ.ಟಿ ರವಿ ಬಿಡುಗಡೆ : ಸತ್ಯಕ್ಕೆ ಸಂದ ಜಯ ಎಂದ ಶಾಸಕ ಸಿಮೆಂಟ್ ಮಂಜು
ಸಕಲೇಶಪುರ : ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಬಿಡುಗಡೆಗೆ ಆದೇಶ ನೀಡಿರುವ ಹೈಕೋರ್ಟ್ ತೀರ್ಪನ್ನು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಸಿಮೆಂಟ್ ಮಂಜು ಸ್ವಾಗತಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಪೊಲೀಸರನ್ನು ಬಳಸಿಕೊಂಡು ಸಿ.ಟಿ ರವಿಯರನ್ನು ಬಂಧಿಸಿದ್ದು ದೂರದೃಷ್ಟಕರ. ಸಿ.ಟಿ ರವಿ ಅವರು ನನಗೆ ಸನಾತನ ಹಿಂದೂ ಧರ್ಮದ ತಳಹದಿಯಿಂದ ಬಂದಂತವರು ಸುಸಂಸ್ಕೃತ ಕುಟುಂಬದಿಂದ ಬಂದವರು ಹೆಣ್ಣಿನ ಬಗ್ಗೆ ಕೀಳಾಗಿ ಮಾತನಾಡುವಷ್ಟು ಕೆಳಮಟ್ಟಕ್ಕೆ ಇಳಿಯುವವರಲ್ಲ ಆದರೆ ಕಾಂಗ್ರೆಸ್ ನವರು ಕುತಂತ್ರದಿಂದ ಬಂದಿಸಿದ್ದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವಾಗಿದೆ ಎಂದರು. ಇಂದಿನ ಹೈಕೋರ್ಟಿನ ತೀರ್ಪು ಸತ್ಯಕ್ಕೆ ಸಂದ ಜಯವಾಗಿದ್ದು ಸತ್ಯ ಎಂದು ಕೂಡ ಸಾಯುವುದಿಲ್ಲ ಎಂದು ಹೇಳಿದರು. ರವಿ ಅವರು ಜನ ಪ್ರತಿನಿಧಿಯಾಗಿದ್ದು ಅವರನ್ನು ಪೊಲೀಸರು ಮೃಗಿಯ ರೀತಿ ನೆಡೆಸಿಕೊಂಡಿದ್ದಾರೆ ಪೊಲೀಸರು ಈ ರೀತಿ ನಡೆದುಕೊಂಡ ಹಿಂದಿರುವ ಕಾಣದ ಕೈಗಳು ಯಾರೆಂದು ತಿಳಿಯಬೇಕಾದರೆ ಸಿಬಿಐ ತನಿಖೆಯೇ ಸೂಕ್ತವೆಂದರು.ರವಿ ಅವರ ಬಂಧನ ಹಾಗೂ ಪೊಲೀಸರು ನೆಡೆದುಕೊಂಡ ವರ್ತನೆ ಬಗ್ಗೆ ಈಗಾಗಲೇ ಪಕ್ಷದ ವರಿಷ್ಟರು ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಆಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.ರವಿ ಅವರ ಮೇಲೆ ಹಲ್ಲೆ ಮಾಡಲು ಮುಂದಾದ ದುಷ್ಕರ್ಮಿಗಳಿಗೆ ಕಾನೂನು ರಿತ್ಯೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗುವಂತೆ ಒತ್ತಾಯಿಸಿದರು.