ಸಕಲೇಶಪುರ :ಪಟ್ಟಣದ ಬ್ರಾಹ್ಮಣರ ಬೀದಿಯಲ್ಲಿ ಪ್ರತಿ ವರ್ಷ ಸಕಲೇಶ್ವರ ಸ್ವಾಮಿರವರ ರಥೋತ್ಸವದ ಅಂಗವಾಗಿ ರಂಗೋಲಿ ಸ್ಪರ್ದೆ ನಡೆಯುತ್ತಿದ್ದು, ಸ್ಪರ್ಧೆಯಲ್ಲಿ 94 ಜನ ಸ್ಪರ್ಧಿಗಳು ಭಾಗವಹಿಸಿದ್ದರು.
ಹೆಸರಾಂತ ವಕೀಲ ಆರ್.ಎನ್ ಕೃಷ್ಣಮೂರ್ತಿ ರವರು ತೀರ್ಪುಗಾರರಾಗಿ ಆಗಮಿಸಿ ರಂಗೋಲಿಗಳನ್ನು ವೀಕ್ಷಿಸಿದರು. ಈ ಬಾರಿ ವಿವಿದ ರೀತಿಯ ರಂಗೋಲಿ ಬಿಡಿಸಲಾಗಿದ್ದು ಕಾಂತರಾ ಚಲನಚಿತ್ರದ ಪ್ರಭಾವದಿಂದ ದೈವದ ಚಿತ್ರವನ್ನು ಸಹ ರಂಗೋಲಿ ರೂಪದಲ್ಲಿ ಬಿಡಿಸಿತ್ತು ವೀಕ್ಷಕರ ಗಮನ ಸೆಳೆಯಿತು.
ಶಯನೋತ್ಸವದ ದಿವಸ ವಿಜೇತರ ಹೆಸರನ್ನು ಘೋಷಿಸಲಾಗುತ್ತದೆಂದು ತಿಳಿದು ಬಂದಿದೆ.