Sunday, April 20, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ರೈತ ಸಂಕ್ರಾಂತಿ  ಅನ್‌ಲೈನ್ ಸಂವಾದ ಲಯನ್ಸ್ ಭವನದಲ್ಲಿ

ಸಕಲೇಶಪುರ : ರೈತ ಸಂಕ್ರಾಂತಿ  ಅನ್‌ಲೈನ್ ಸಂವಾದ ಲಯನ್ಸ್ ಭವನದಲ್ಲಿ

ಸಕಲೇಶಪುರ : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಳೆ ಜ16ರಂದು ಕೃಷಿ ಸಮಸ್ಯೆಗಳ ಬಗ್ಗೆ ಅನ್ನದಾತರ ಜತೆ ಮುಕ್ತವಾಗಿ ಚರ್ಚೆ ನಡೆಸಲು  ರೈತ ಸಂಕ್ರಾಂತಿ  ಎಂಬ ಅನ್‌ಲೈನ್ ಸಂವಾದ ಹಮ್ಮಿಕೊಂಡಿದ್ದಾರೆ ಎಂದು ಶಾಸಕ ಎಚ್ ಕೆ ಕುಮಾರಸ್ವಾಮಿ ಹೇಳಿದರು.

ರೈತರು ಶಾಶ್ವತವಾಗಿ ಸಾಲಗಾರರಾಗದಂತೆ ಹಾಗೂ ಅವರಿಗೆ ಆರ್ಥಿಕ ಚೈತನ್ಯ ನೀಡುವ ಉದ್ದೇಶದಿಂದ ರೂಪಿಸಿರುವ ರೈತ ಚೈತನ್ಯ ಕಾರ್ಯಕ್ರಮದ ಬಗ್ಗೆ ಅನ್ನದಾತರಿಗೆ ಮನವರಿಕೆ ಮಾಡಿಕೊಡುವುದು ಹಾಗೂ ಕೃಷಿ ಸಮಸ್ಯೆಗಳ ಬಗ್ಗೆ ಇನ್ನಷ್ಟು ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ರೈತರ ಜತೆ ಸಂವಾದ ನಡೆಸುತ್ತಾರೆ ಎಂದು ಹೇಳಿದರು.
ಬಿಡದಿಯ  ತೋಟದಲ್ಲಿ ರೈತ ಸಂಕ್ರಾಂತಿ ಸಂವಾದ ಹಮ್ಮಿಕೊಳ್ಳಲಾಗಿದ್ದು,  ಸಂಜೆ 3 ರಿಂದ 5  ಗಂಟೆವರೆಗೂ ರೈತರ ಜತೆ ಸಂವಾದ ನಡೆಸುತ್ತಾರೆ. ಈ ಆನ್‌ಲೈನ್ ವಿಡಿಯೊ ಸಂವಾದ ಕಾರ್ಯಕ್ರಮವನ್ನು ಪಟ್ಟಣದ ಲಯನ್ಸ್ ಭವನದಲ್ಲಿ ಅಯೋಜನೆ ಮಾಡಿದ್ದೇವೆ ಎಂದರು  ಈ ಕಾರ್ಯಕ್ರಮಕ್ಕೆ  ರೈತರು, ಬೆಳೆಗಾರರು, ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಲು ಮನವಿ ಮಾಡಿದ್ದಾರೆ
RELATED ARTICLES
- Advertisment -spot_img

Most Popular