ಶಿರಾಡಿ ಘಾಟ್ ನಲ್ಲಿ ಭೂ ಕುಸಿತ : ರಾತ್ರಿ ಇಡೀ ಕರ್ತವ್ಯ ನಿರ್ವಹಿಸಿದ ಮಹಿಳಾ ಅಧಿಕಾರಿಗಳು.
ಉಪವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರ್ ಕಾರ್ಯಕ್ಕೆ ಸಾರ್ವಜನಿಕರ ಪ್ರಶಂಸೆ.
ಸಕಲೇಶಪುರ : ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ನಿರಂತರವಾಗಿ ಗುಡ್ಡ ಕುಸಿಯುತ್ತಿದ್ದು ಮಣ್ಣು ತೆರವು ಮಾಡುವ ಕಾರ್ಯಾಚರಣೆಯನ್ನು ತಾಲೂಕು ಮಹಿಳಾ ಅಧಿಕಾರಿಗಳು ಖುದ್ದು ನಿಂತು ವೀಕ್ಷಿಸಿದರು.
ತಾಲೂಕಿನ ದೊಡ್ಡ ತಪ್ಪಲು ಬಳಿ ಕಳೆದ ಒಂದು ವಾರದಿಂದ ಗುಡ್ಡ ಕುಸಿಯುತ್ತಿದ್ದು ಗುಡ್ಡ ಕುಸಿವ ರಭಸಕ್ಕೆ ವಾಹನಗಳು ಸಿಲುಕಿಕೊಳ್ಳುತ್ತಿದ್ದು ಪರಿಣಾಮ ಶಿರಾಡಿ ಘಾಟ್ ಬಂದ್ ಅಗಿದೆ. ಕರಾವಳಿ ಭಾಗಕ್ಕೆ ತೆರಳಲು ಸುರಕ್ಷಿತ ಮಾರ್ಗವೆಂದರೆ ಅದು ಶಿರಾಡಿ ಘಾಟ್ ಮಾತ್ರವಾಗಿದ್ದು ಇಲಿಯು ಕೂಡ ನಿರಂತರ ಗುಡ್ಡ ಕುಸಿತದಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಬುದುವಾರ ಸಂಜೆ ಕೂಡ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿದು ಲಾರಿ, ಕಂಟೈನರ್ ಗಳು ಮಣ್ಣಿನಲ್ಲಿ ಸಿಲುಕಿವೆ. ಮಣ್ಣಿನಲ್ಲಿ ಸಿಲುಕಿರುವ ವಾಹನಗಳ ತೆರವು ಕಾರ್ಯಚರಣೆ ರಾತ್ರಿ ಇಡೀ ನಡೆದಿದ್ದು ಉಪವಿಭಾಗಾಧಿಕಾರಿ ಎಂ. ಕೆ ಶ್ರುತಿ ಮತ್ತು ತಹಸೀಲ್ದಾರ್ ಮೇಘನಾ ತಡರಾತ್ರಿವರಿಗೂ ಸ್ಥಳದಲ್ಲಿದ್ದು ಕಾರ್ಯಚರಣೆ ವೀಕ್ಷಿಸಿ ಮಣ್ಣಿನಡಿ ಸಿಲುಕಿದ್ದ ಕೆಲವು ಲಾರಿಗಳನ್ನು ಹೊರ ತೆಗೆಯಲು ಯಶಸ್ವಿಯಾಗಿದ್ದಾರೆ. ಮಹಿಳಾ ಅಧಿಕಾರಿಗಳಾಗಿದ್ದು ಕೂಡ ತಡರಾತ್ರಿವರಿಗೂ ಸುರಿವಂ ಮಳೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಒಳಗಾಗಿದ್ದಾರೆ.