- ಸಕಲೇಶಪುರ: ಕಾಡಾನೆ ದಾಳಿಯಿಂದ ಹೆಬ್ಬನಹಳ್ಳಿ ಗ್ರಾಮದಲ್ಲಿ ಮನು ಎಂಬ ಯುವಕ ಸಾವಿಗೀಡಾದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಆಕ್ರೋಷಗೀಡಾಗಿದ್ದು ಈ ಹಿನ್ನಲೆಯಲ್ಲಿ ಮನುವಿನ ಮೃತ ಶರೀರವನ್ನು ಸ್ಥಳದಲ್ಲಿಟ್ಟುಕೊಂಡು ಪ್ರತಿಭಟನೆ ಆರಂಭಿಸಲಾಗಿತ್ತು. ಇದೇ ವೇಳೆ ಪ್ರತಿಭಟನಾ ಸ್ಥಳದಿಂದ ತುಸು ದೂರದಲ್ಲಿ ನಿಲ್ಲಿಸಲಾಗಿದ್ದ ಅರಣ್ಯ ಇಲಾಖೆಯ ಜೀಪೋಂದಕ್ಕೆ ಕೆಲವರು ಬೆಂಕಿ ಹಾಕಿ ಸ್ಥಳದಿಂದ ಓಡಿದ್ದಾರೆ. ಈ ಸಂಧರ್ಭದಲ್ಲಿ ಸುದ್ದಿ ಮಾಡಲು ಬರುತ್ತಿದ್ದ ಸಕಲೇಶಪುರದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೆಲವು ಸದಸ್ಯರು ಇದನ್ನು ನೋಡಿ ತಕ್ಷಣ ಬೆಂಕಿ ಹರಡದಂತೆ ನಂದಿಸಿದ್ದರಿಂದ ಹೆಚ್ಚಿನ ಅಪಾಯವಾಗುವುದು ತಪ್ಪಿದೆ.