Thursday, November 21, 2024
Homeಸುದ್ದಿಗಳುಹಾಸನಹಾಸನದಲ್ಲಿ ಪ್ರೀತಮ್ ಗೌಡರ ಬೃಹತ್ ರ್ಯಾಲಿ: 30,000ಕ್ಕೂ ಹೆಚ್ಚು ಸೇರಿದ ಅಭಿಮಾನಿಗಳು

ಹಾಸನದಲ್ಲಿ ಪ್ರೀತಮ್ ಗೌಡರ ಬೃಹತ್ ರ್ಯಾಲಿ: 30,000ಕ್ಕೂ ಹೆಚ್ಚು ಸೇರಿದ ಅಭಿಮಾನಿಗಳು

ಯಶಸ್ವಿಗೊಂಡ  ಬಿಜೆಪಿ ನಾಮಪತ್ರ ರ್ಯಾಲಿ, ರಸ್ತೆ ಉದ್ದಲಕ್ಕೂ ಜನಸಾಗರ

ನನ್ನ ವಿರುದ್ಧ ರಾಜಕಾರಣ ಮಾಡುವವರೆಲ್ಲಾ ಇನ್ನು ಮಲಗಿದ್ದಾರೆ: ಶಾಸಕ ಪ್ರೀತಂಗೌಡ ವ್ಯಂಗ್ಯ

ಹಾಸನ : ನನ್ನ ವಿರುದ್ಧ ರಾಜಕಾರಣ ಮಾಡುವವರೆಲ್ಲಾ ಇನ್ನು ಮಲಗಿದ್ದು, ಇನ್ನು ಎದ್ದಿರುವುದಿಲ್ಲ ಎಂದು ಟೀಕೆ ಮಾಡುವವರಿಗೆ ಶಾಸಕ ಪ್ರೀತಂ ಜೆ. ಗೌಡ ವ್ಯಂಗ್ಯವಾಡಿದರು. ನಾಮಪತ್ರ ಸಲ್ಲಿಸುವ ಮುನ್ನ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಬೃಹತ್ ಮೆರವಣಿಗೆಯಲ್ಲಿ 30 ಸಾವಿರಕ್ಕೂ ಹೆಚ್ಚು ಜನ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಾಲ್ಗೊಂಡು ರಸ್ತೆ ಉದ್ದಲಕ್ಕೂ ಜನಸಾಗರ ಎಂಬಂತೆ ಕಂಡು ಬಂದಿತು.

      ಹಾಸನ ವಿಧಾನಸಭೆ ಕ್ಷೇತ್ರದ ಶಾಸಕರಾದ ಪ್ರೀತಂ ಜೆ. ಗೌಡರ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮತ್ತು ಅಭಿಮಾನಗಳೊಂದಿಗೆ ನಗರದ ಜಿಲ್ಲಾ ಕ್ರೀಡಾಂಗಣ ಬಳಿಯಿಂದ  ತೆರದ ವಾಹನದೊಂದಿಗೆ ತಮಟೆ ವಾಧ್ಯ, ಡೋಲು, ಬೆದರು ಬೊಂಬೆ, ಕೀಲುಕುದುರೆ, ಮದ್ದಳೆಯೊಂದಿಗೆ ಡಿ.ಜೆ. ಹಾಗೂ ವಿವಿದ ಸಾಂಸ್ಕತಿಕ ಕಲಾ ತಂಡಗಳೊಂದಿದೆ ಮೆರವಣಿಗೆ ಮೂಲಕ ಹೊರಟು ಸಾಲಗಾಮೆ ರಸ್ತೆ, ಮಹಾವೀರ ವೃತ್ತ, ಹೇಮಾವತಿ ಪ್ರತಿಮೆ, ಆರ್.ಸಿ. ರಸ್ತೆ, ಎಸ್.ಪಿ ಕಛೇರಿ ಮುಂಬಾಗ ಸೇರಿದಂತೆ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಿ ಎನ್.ಆರ್ ವೃತ್ತದಲ್ಲಿ ಮೆರವಣಿಗೆ ಬಂದು ನಂತರ ಸೇರಿದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂವಿಧಾನ ನೀಡಿದ ಅಂಬೇಡ್ಕರ್ ಜನ್ಮ ದಿನದಂದು ಶುಭ ಶುಕ್ರವಾರ ಎಂದರೇ ಹಿಂದುಗಳ ಲಕ್ಷ್ಮೀ ದಿನವಾಗಿದೆ. ರಂಜಾನ್ ಪ್ರಯುಕ್ತ ಸಮಸ್ತ ಮುಸಲ್ಮಾನ್ ಬಾಂಧವರು ಉಪವಾಸ ಮಾಡುತ್ತಿದ್ದು, ಅವರಿಗೂ ಇದು ಶುಭ ದಿನವಾಗಿದ್ದು, ಕಳೆದ ವಾರವಷ್ಟೆ ನಮ್ಮ ಕ್ರೈಸ್ತ ಬಾಂಧವರು ಗುಡ್ ಫ್ರೈಡೆ ಆಚರಣೆ ಮಾಡಿದ್ದು, ಅವರಿಗೂ ಕೂಡ ಶುಕ್ರವಾರ ಎಂದರೇ ಒಳ್ಳೆಯ ದಿನವಾಗಿದೆ ಈ ಎಲ್ಲಾ ಶುಭ ದಿನದ ಜೊತೆಗೆ ನಾನು ಹುಟ್ಟಿದ ದಿನಾಂಕ ನವೆಂಬರ್ 14 ಅದಕ್ಕಾಗಿ ಈ ಶುಕ್ರವಾರವನ್ನು ಲಕ್ಕಿ ಸಂಖ್ಯೆ ಎಂದು ಆಯ್ಕೆ ಮಾಡಿಕೊಳ್ಳಲಾಗಿದೆ. ಕಳೆದ ಬಾರಿ ಜಿಲ್ಲಾ ಕ್ರೀಡಾಂಗಣದಿಂದ ಸಾಲಗಾಮೆ ರಸ್ತೆ ಮೂಲಕ ಎನ್.ಆರ್. ವೃತ್ತದ ಮೂಲಕ ನಾಮಪತ್ರ ಸಲ್ಲಿಸಿದ ನೆನಪನ್ನು ಇದೆ ವೇಳೆ ಮೆಲಕು ಹಾಕುತ್ತಿದ್ದೇನೆ. ಇವತ್ತು ಕೂಡ ಸಹಸ್ರಾರು ಜನಸಂಖ್ಯೆ ಮೂಲಕ ನಾಮಪತ್ರ ಸಲ್ಲಿಸುತ್ತಿದ್ದೇನೆ, ಹಾಸನದ ರಾಜಕಾರಣದ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಸಿದ ಉದಾಹರಣೆಗಳಿಲ್ಲ ಎಂದರು. ನೀವೆಲ್ಲಾ ಸೇರಿ ಒಬ್ಬ ಸಾಮಾನ್ಯ ಕುಟುಂಬದ ಒಬ್ಬ ವ್ಯಕ್ತಿಯನ್ನು ಬೆಳೆಸಬೇಕೆಂದು ಹೇಳಿ ತೀರ್ಮಾನ ಮಾಡಿ ಬಂದಿರುವುದಕ್ಕೆ ನನ್ನ ಸಾಷ್ಟಾಂಗ ನಮಸ್ಕಾರಗಳನ್ನು ತಿಳಿಸುತ್ತೇನೆ ಎಂದು ನಮಿಸಿದರು. ನಾನು ರಾಜಕಾರಣ ಭಾಷಣ ಮಾಡಲು ಹೋಗುವುದಿಲ್ಲ. ಕಾರಣ ನಮ್ಮ ವಿರುದ್ಧ ರಾಜಕಾರಣ ಮಾಡುವವರೆಲ್ಲಾ ಇನ್ನು ಮಲಗಿದ್ದಾರೆ ಇನ್ನು ಎದ್ದಿರುವುದಿಲ್ಲ. ಅವರು ಎದ್ದ ಮೇಲೆ ನಾನು ರಾಜಕಾರಣ ಮಾಡುತ್ತೇನೆಂದು ಟೀಕೆ ಮಾಡುವವರಿಗೆ ಟಾಂಗ್ ನೀಡಿದರು. ನನ್ನ ರಾಜಕೀಯ ವಿರೋಧಿ ಯಾರು ಎಂದು ಹೇಳಲು ಹೋದರೇ ಅವರು ಇನ್ನು ತಯಾರೆ ಆಗಿರುವುದಿಲ್ಲ ಎಂದ್ರೆ ನಾವು ಅವರಿಗೆ ಏನು ಹೇಳುವುದು? ಅವರ ಬಗ್ಗೆ ಯೋಚನೆ ಮಾಡುವುದೇ ಅವಶ್ಯಕತೆ ಇಲ್ಲ ಎಂದು ಟೀಕಿಸಿದರು. ನಮ್ಮ ರಾಜಕೀಯ ವಿರೋಧಿಗಳು ಯಾರು ಎಂದು ಹೇಳುವುದಾದರೇ ಜಾತ್ಯಾತೀತ ಜನತಾದಳ. ಇಡೀ ಹಾಸನ ಕ್ಷೇತ್ರದ ವಿಧಾನಸಭಾ ಮತದಾರರು ಒಂದು ಸಂಕಲ್ಪ ಮಾಡಲಾಗಿದ್ದು, ಮುಂದೆ ನಡೆಯುವ ವಿಧಾನ ಸಭಾ ಚುನಾವಣೆ ಮೇ.10 ರಂದು ನಡೆಯಲಿದ್ದು, ಕಮಲದ ಗುರುತಿಗೆ ಒಂದು ಲಕ್ಷ ಮತಗಳನ್ನು ಹಾಕುವುದರ ಮೂಲಕ ಸಾಮಾನ್ಯ ಕುಟುಂಬದ ಯುವಕನನ್ನು ಮತ್ತೊಮ್ಮೆ ವಿಧಾನಸೌದಕ್ಕೆ ಕಳುಹಿಸುವ ನಿಟ್ಟಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತ ಬಂದುಗಳು ಪಾಲ್ಗೊಂಡಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು. ಟಿಕೆಟ್ ವಿಚಾರದಲ್ಲಿ ಇತರೆ ಪಕ್ಷದವರಿಗೆ ನಾವೇ ಹೆಚ್ಚು ಪ್ರಚಾರ ಕೊಟುವುದು ಬೇಡ. ಟಿಕೆಟ್ ವಿಚಾರದಲ್ಲಿ ಅವರವರೆ ಪ್ರಚಾರ ಮಾಡಿಕೊಂಡು ಈಗಾಗಲೇ ಎಲ್ಲಾರಿಗೂ ತಿಳಿದಿದೆ ಎಂದು ಹೇಳಿದರು.

ಇವತ್ತು ಸೇರಿರುವ ಜನ  ನೋಡಿ ಹೊಳೆನರಸೀಪುರ ಹಾಗೂ ಹೇಮಾವತಿ ನಗರದ ಅಭ್ಯರ್ಥಿಗಳು ಎರಡು ತೀರ್ಮಾನ ಮಾಡಿರುತ್ತಾರೆ. ನನಗೆ ಟಿಕೆಟ್ ಕೊಡದಿದ್ರೆ ಸಾಕು ಎಂದು ಹೊಳೆನರಸೀಪುರದರು ಹೇಳಿದ್ರೆ, ಇನ್ನೊಂದು ಕಡೆ ಹೇಮಾವತಿ ನಗರದವರು ನನಗೆ ಟಿಕೆಟ್ ಕೊಡದಿದ್ರೆ ಸಾಕು ಎಂದು ಹೇಳುತ್ತಾರೆ. ಮಧ್ಯದಲ್ಲಿ ಯಾವುದೋ ಪಾರ್ಟಿಯಲ್ಲಿ ನಿಂತು ಸೋತು ಮೂರನೇ ಪ್ಲೇಸಿಗೆ ಬಂದಿದ್ರು. ಅವರು ಈಗ ಮನೆ ಸೇರಿಕೊಳ್ಳುವ ಸಮಸ್ಯೆ ಬಂದಿದೆ. ಕಳೆದ ಬಾರಿ ಈ ಪಾರ್ಟಿ, ಈ ಬಾರಿ ಇನ್ನೊಂದು ಪಾರ್ಟಿ. ಯಾರು ಟೋಪಿ ಹಾಕಿರುತ್ತಾರೆ ಎನ್ನುವುದೇ ಗೊತ್ತಾಗುವುದಿಲ್ಲ. ಜನರು ಅವರಿಗೆ ಯಾವುದೇ ಕಾರಣಕ್ಕೂ ಮತ ಹಾಕುವುದಿಲ್ಲ. ಕಳೆದ ಚುನಾವಣೆಯಲ್ಲಿ ಮೂರನೇ ಸ್ಥಾನ ಪಡೆದು ೫ ವರ್ಷದಲ್ಲಿ ಹಾಸನ ಕ್ಷೇತ್ರದಲ್ಲಿ ಮುಖನೇ ತೋರಿಸದೇ ಇರುವ ಒಬ್ಬ ಹೊಸ ಮುಖ ವ್ಯಕ್ತಿ ಬರುತ್ತಿದ್ದು, ಈ ಬಾರಿ ಅವರು ಬಂದರೇ ಠೇವಣಿಯೇ ಸಿಗುವುದಿಲ್ಲ ಎಂದು ನಾನು ಹೇಳುವುದಿಲ್ಲ. ಜನರೆ ಹೇಳುತ್ತಿದ್ದಾರೆ. ರಾಜಕೀಯ ವಿರೋಧಿಗಳಿಗೆ ಗೌರವವಿದೆ. ದಯಮಾಡಿ ಅವರು ಚುನಾವಣೆಗೆ ಬರಲಿ. ಕ್ಯಾಂಡಿಡೇಟ್ ತೀರ್ಮಾನ ಮಾಡುವ ಶಕ್ತಿ ಆದ್ರೂ ಕೊಡಲಿ. ಚುನಾವಣೆ ಮಾಡುವ ಶಕ್ತಿ ನಮ್ಮ ಕಾರ್ಯಕರ್ತ ಬಂದುಗಳು ಕೊಟದ್ದು, ಮುಂದಿನ ತಿಂಗಳ ೧೦ನೇ ದಿನಾಂಕದಂದು ಚುನಾವಣೆ ನಡೆಯಲಿದ್ದು, ಪ್ರತಿಯೊಬ್ಬರೂ ಪ್ರೀತಂಗೌಡ ಎಂದು ಭಾವಿಸಿ, ಕಳೆದ ೫ ವರ್ಷದಲ್ಲಿ ಏನೆಲ್ಲಾ ಜನಸೇವೆ ಮಾಡಿ, ಜನಸಾಮಾನ್ಯರ ಕೆಲಸ ಮಾಡಿದ್ದೇವೆ ಆ ಕೆಲಸಕ್ಕೆ ಕೂಲಿ ಕೇಳುವ ಕೆಲಸವನ್ನು ನೀವೆಲ್ಲಾ ಪ್ರತಿ ಮನೆ ಬಾಗಿಲಿಗೆ ಹೋಗಿ ಪ್ರೀತಂ ಗೌಡ ನಿಮ್ಮ ಮನೆ ಮಗ. ಮತ ಹಾಕವುದರ ಮೂಲಕ ಕಳೆದ ೨೫ ವರ್ಷಗಳಿಂದಲೂ ಕುಂಠಿತವಾಗಿದ್ದ ಅಭಿವೃದ್ಧಿ ಕೆಲಸವನ್ನು ಮುಂದುವರೆಸುವ ಕೆಲಸವನ್ನು ೫ ವರ್ಷದಲ್ಲಿ ಪ್ರೀತಂಗೌಡ ಮಾಡಿದ್ದು, ಆಶೀರ್ವಾದ ಮಾಡುವುದರ ಮೂಲಕ ಮತ್ತಷ್ಟು ಕೆಲಸ ಮಾಡುವುದಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದು ಪ್ರತಿಯೊಬ್ಬರೂ ಮತ ಕೇಳುವಂತೆ ಮನವಿ ಮಾಡಿದರು.

       ಬಿಜೆಪಿ ಶಕ್ತಿಪ್ರದರ್ಶನದ ಮೆರವಣಿಗೆಯಲ್ಲಿ ಹೆಚ್ಚು ಜನರು ಬಂದ ಕಾರಣ ಎಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಯಿತು. ಸುಮಾರು 3 ಗಂಟೆಗಳ ಕಾಲ ನಗರದಲ್ಲಿ ಸಂಚಾರ ಸಮಸ್ಯೆಯಿಂದ ವಾಹನ ಚಾಲಕರು ಪರದಾಡಿದರು. ಪ್ಲಾಸ್ಟಿಕ್ ನಲ್ಲಿ ಕುಡಿಯುವ ನೀರು ಕೊಟ್ಟಿದ್ದರಿಂದ ರಸ್ತೆ ಉದ್ದಲಕ್ಕೂ ಪ್ಲಾಸ್ಟಿಕ್ ಮಯವಾಗಿತ್ತು. ಇನ್ನು ಪ್ರೀತಂ ಗೌಡರ ಅಭಿಮಾನಿಗಳು ದೇಹದ ಮೇಲೆ ಕಮಲದ ಬಣ್ಣ ಹಾಕಿಸಿಕೊಂಡು ಪ್ರೀತಂ ಅವರ ಹೆಸರು ರಾರಾಜಿಸುತ್ತಿತ್ತು. ಇನ್ನು ಮುನ್ನೆಚ್ಚರಿಕ ಕ್ರಮವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಪೊಲೀಸ್ ಬಿಗಿಬಂದು ಬಸ್ತ್ ಮಾಡಲಾಗಿತ್ತು. ಅರೆ ಮಿಲಿಟರಿ ಪಡೆಯು ರ‍್ಯಾಲಿಯಲ್ಲಿ ಭದ್ರತೆ ಒದಗಿಸಿತು. ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಇದಕ್ಕೆ ಮೊದಲು ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

     ಮೆರವಣಿಗೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಬೇಲೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹೆಚ್.ಕೆ. ಸುರೇಶ್, ಸಕಲೇಶಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸಿಮೆಂಟ್ ಮಂಜುನಾಥ್,  ಹುಡಾ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ, ನಗರಸಭೆ ಅಧ್ಯಕ್ಷ ಆರ್. ಮೋಹನ್, ಹುಡಾ ಅಧ್ಯಕ್ಷ ಲಲಾಟ್ ಮೂರ್ತಿ, ವೇಣುಗೋಪಾಲ್, ಶರತ್, ತಂಬ್ಲಾಪುರ ಗಣೇಶ್, ರಂಗನಾಥ್, ಪ್ರೀತಿವರ್ಧನ್, ವಿಜಯಲಕ್ಷ್ಮಿ ಅಂಜನಪ್ಪ, ಇತರರು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular