Monday, October 27, 2025
Homeಕ್ರೈಮ್ಕಳವಾಗಿದ್ದ ಪತ್ರಕರ್ತರ ಮೊಬೈಲ್ ನ್ನು ಹುಡುಕಿಕೊಟ್ಟ ಪೋಲಿಸರು

ಕಳವಾಗಿದ್ದ ಪತ್ರಕರ್ತರ ಮೊಬೈಲ್ ನ್ನು ಹುಡುಕಿಕೊಟ್ಟ ಪೋಲಿಸರು

ಕಳವಾಗಿದ್ದ ಪತ್ರಕರ್ತರ ಮೊಬೈಲ್ ನ್ನು ಹುಡುಕಿಕೊಟ್ಟ ಪೋಲಿಸರು

ಸಕಲೇಶಪುರ: ಕಳುವಾಗಿದ್ದ ಪತ್ರಕರ್ತರ ಮೊಬೈಲ್ ವೊಂದನ್ನು ಹುಡುಕಿಕೊಡುವಲ್ಲಿ ನಗರ ಪೋಲಿಸರು ಯಶಸ್ವಿಯಾಗಿದ್ದಾರೆ.

ಳೆದ ಒಂದು ತಿಂಗಳ ಹಿಂದೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಜೈಭೀಮ್ ಮಂಜುರವರು ಸುದ್ದಿಗೋಷ್ಠಿವೊಂದನ್ನು ನಡೆಸುವಾಗ ಅವರ ಮೊಬೈಲ್ ನ್ನು ಕಿಡಿಗೇಡಿಗಳು ಕಳವು ಮಾಡಿದ್ದರು. ಜೈಭೀಮ್ ಮಂಜುರವರಿಂದ ಮೊಬೈಲ್ ನ ಬಿಲ್, ಇ.ಎಮ್.ಇ ಸಂಖ್ಯೆಗಳನ್ನು ಪಡೆದ ನಗರ ಠಾಣೆ ಪೋಲಿಸರು ಕಳುವಾದ ಮೊಬೈಲ್ ನ್ನು ಪತ್ತೆ ಹಚ್ಚಿ ಮೊಬೈಲ್ ವಾರಸುದಾರರಿಗೆ ಹಿಂತಿರುಗಿಸಿದ್ದಾರೆ. ಕಳೆದು ಹೋಗಿದ್ದ ಮೊಬೈಲ್ ನ್ನು ಪತ್ತೆ ಹಚ್ಚಿಕೊಟ್ಟ ನಗರ ಠಾಣೆ ವೃತ್ತ ನಿರೀಕ್ಷಕ ವನರಾಜ್ , ಪಿ.ಎಸ್.ಐ ಮಹೇಶ್, ಹಾಗೂ ಪೋಲಿಸ್ ಪೇದೆ ಚಂದ್ರಕಾಂತ್ ಹಾಗೂ ಇತರ ಸಿಬ್ಬಂದಿಗಳಿಗೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಭಿನಂದನೆ ಸಲ್ಲಿಸಿದೆ.

RELATED ARTICLES
- Advertisment -spot_img

Most Popular