ಹೊರ ರಾಜ್ಯದ ಕಾರ್ಮಿಕರಿಂದ ಗಾಂಜಾ ಮಾರಾಟ ಯತ್ನ ಪೋಲೀಸರಿಂದ ಇಬ್ಬರ ಬಂಧನ.
ಸಕಲೇಶಪುರ ಗ್ರಾಮಾಂತರ ಪೊಲೀಸರ ಮಿಂಚಿನ ಕಾರ್ಯಚರಣೆ
ಸಕಲೇಶಪುರ: ಕೂಲಿ ಕೆಲಸಕ್ಕೆ ಎಂದು ಹೊರ ರಾಜ್ಯದಿಂದ ಬಂದ ಕಾರ್ಮಿಕರಿಬ್ಬರೂ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಘಟನೆ ಬಾಳ್ಳುಪೇಟೆಯಲ್ಲಿ ನೆಡೆದಿದೆ.
ತಾಲೂಕಿನ ಬಾಳ್ಳುಪೇಟೆಯಿಂದ ಜಮ್ಮನಹಳ್ಳಿ, ಗ್ರಾಮದ ಕಡೆಗೆ ಹೋಗುವ ರಸ್ತೆಯಲ್ಲಿ ಇಬ್ಬರು ಅಪರಿಚಿತರು ಹೊಂಚು ಹಾಕುತ್ತಿದ್ದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಗ್ರಾಮಾಂತರ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಡಿಕೇರಿ ಜಿಲ್ಲೆಯ ವಿರಾಜಪೇಟೆ ತಾಲೂಕಿನ ಚೇಯಂಡಣೆ ಗ್ರಾಮದ ದಯಾ ರವರ ಕಾಫಿ ಎಸ್ಟೇಟ್ ನಲ್ಲಿ ಕೂಲಿ ಕೆಲಸಕ್ಕೆಂದು ಅಸ್ಸಾಂ ರಾಜ್ಯದಿಂದ ಬಂದಿದ್ದ ಸಂಶುಲ್ ಹಕ್ ಬಿನ್ ಮತಬ್ ಉದ್ದೀನ್( 27) ಮತ್ತು ಹುರುಮುಜ್ ಆಲಿ ಬಿನ್ ಜಾಮರ್ ಉದ್ದೀನ್ ( 26) ಬಂದಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ ಸುಮಾರು 36,000 ಸಾವಿರ ಬೆಲೆ ಬಾಳುವ 2.00 ಕೆ.ಜಿ. ಗಾಂಜಾ ಸೊಪ್ಪು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಪತ್ತೆಗಾಗಿ ಪೊಲೀಸ್ ಅಧೀಕ್ಷಕಿ ಮೊಹಮದ್ ಸುಜಿತಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ತಮ್ಮಯ್ಯ, ವೆಂಕಟೇಶನಾಯು,ಆರಕ್ಷಕ ಉಪ ವಿಭಾಗದ ಉಪಾಧೀಕ್ಷಕ ಪ್ರಮೋದ ಕುಮಾರ ಮಾರ್ಗದರ್ಶನದಲ್ಲಿ ಸಿಪಿಐ ನಿರಂಜನ್ ರವರು ತಂಡವನ್ನು ರಚಿಸಿ ಗಾಂಜಾ ಆರೋಪಿಗಳ ಪತ್ತೆಗಾಗಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ , ಪ್ರಸನ್ನ ರವರ ನೇತೃತ್ವದಲ್ಲಿ ಗುಪ್ತಮಾಹಿತಿ ಸಿಬ್ಬಂದಿಯಾದ ಖಾದರ್ ಆಲಿ ಸೇರಿದಂತೆ ಸಿಬ್ಬಂದಿಗಳಾದ ಆದಿತ್ಯ,ಶಶಾಂಕ್,ಚೇತನ್, ರಘು ಶರತ್ ಹಾಗೂ ಜೀಪಿನ ಚಾಲಕರಾದ ಯೋಗೇಶ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.