Saturday, April 19, 2025
Homeಕ್ರೈಮ್ಲಾರಿ ಮಾಲೀಕರು ಹಾಗೂ ಪೊಲೀಸರ ನಿದ್ದೆ ಕೆಡಿಸಿದ್ದ ಡೀಸೆಲ್ ಕಳ್ಳರ ಬಂಧನ

ಲಾರಿ ಮಾಲೀಕರು ಹಾಗೂ ಪೊಲೀಸರ ನಿದ್ದೆ ಕೆಡಿಸಿದ್ದ ಡೀಸೆಲ್ ಕಳ್ಳರ ಬಂಧನ

ಸಕಲೇಶಪುರ : ತಾಲೂಕು ವ್ಯಾಪ್ತಿಯ ಹೆದ್ದಾರಿ ರಸ್ತೆಗಳಲ್ಲಿ ನಿಲ್ಲಿಸಿದ ಲಾರಿಗಳಿಂದ ಡೀಸೆಲ್ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ತಾಲೂಕು ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿಲ್ಲಿಸಿರುವ ಲಾರಿಗಳಿಂದ ಡೀಸೆಲ್ ಕಳ್ಳತನ ಮಾಡಿ ಲಾರಿ ಮಾಲೀಕರ ಹಾಗೂ ಪೊಲೀಸರ ನಿದ್ದೆಗೆಡಿಸಿದ್ದ ಕಳ್ಳರಾದ
ಬೆಳಮೆ ಗ್ರಾಮದ ಪುನೀತ್ ಬಿನ್ ನಂಜಯ್ಯ,
ಕಡದರಹಳ್ಳಿ ಗ್ರಾಮದ ನವೀನ್ ಬಿನ್ ಅಣ್ಣಪ್ಪ, ಕಡದರಹಳ್ಳಿ ಗ್ರಾಮದ ರಮೇಶ್ ಬಿನ್ ಗುರಪ್ಪ, ಕಡದರಹಳ್ಳಿ ಗ್ರಾಮದ ನಂದನ್ ಬಿನ್ ಅಣ್ಣಪ್ಪ ಎಬುವವರನ್ನು ಬಂದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ 800 ಲೀಟರ್ ಡೀಸೆಲ್, ಕೃತ್ಯಕ್ಕೆ ಬಳಸುತ್ತಿದ್ದ ಒಂದು ಇನ್ನೋವಾ ಕಾರು ಮತ್ತು 32.000/- ರೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಶುಕ್ರವಾರ ಬೆಳಗ್ಗಿನ ಜಾವ ಬಾಳ್ಳುಪೇಟೆ ಸಾಯಿಪ್ಯಾಲೆಸ್ ಹೋಟೆಲ್ ಸಮೀಪ ಕಳ್ಳರನ್ನು ಬಂಧಿಸಿದ್ದಾರೆ.
ಪೊಲೀಸ್ ಅಧೀಕ್ಷಕರಾದ ಮಹಮದ್ ಸುಜಿತಾ ಹಾಗೂ ಶ್ರೀ ಎಂ.ಕೆ. ತಮ್ಮಯ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಹಾಸನ ಜಿಲ್ಲೆ, ಶ್ರೀ ಪ್ರಮೋದ ಕುಮಾರ ಡಿವೈಎಸ್‌ಪಿ ಸಕಲೇಶಪುರ ಉಪ ವಿಭಾಗ ರವರ ಮಾರ್ಗದರ್ಶನದಂತೆ. ಹಾಗೂ ಶ್ರೀ ನಿರಂಜನ್ ಕುಮಾರ ಪೊಲೀಸ್ ನಿರೀಕ್ಷಕರವರ ನೇತೃತ್ವದಲ್ಲಿ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯ ಶ್ರೀ ಸದಾಶಿವ ತಿಪರಡ್ಡಿ ಪಿ.ಎಸ್.ಐ. ಶ್ರೀಮತಿ ಖತಿಜಾ ಪಿ.ಎಸ್.ಐ. ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ಶ್ರೀ ಖಾದರ್, ಹೆಚ್‌ಸಿ. 199. ಶ್ರೀ ಸುನೀಲ್ ಪಿ.ಸಿ. 95. ಶ್ರೀ ವೆಂಕಟೇಶ್ ಪಿಸಿ 614, ಚಾಲಕರಾದ ಶ್ರೀ ಯೋಗೇಶ್ ಎಹೆಚ್‌ 58 ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಾಲೂಕಿನ ಲಾರಿ ಮಾಲೀಕರು ಹಾಗೂ ಪೊಲೀಸರ ನಿದ್ದೆಗೆಡಿಸಿದೆ ಡೀಸೆಲ್ ಕಳ್ಳರನ್ನು ಬಂಧಿಸುವಲ್ಲಿ ಸಕಲೇಶಪುರದ ಪೊಲೀಸರು ಯಶಸ್ವಿಯಾಗಿದ್ದು ಇದರಿಂದ ಲಾರಿ ಮಾಲೀಕರು ನಿಟ್ಟಿಸುರು ಬಿಟ್ಟಿದ್ದಾರೆ

RELATED ARTICLES
- Advertisment -spot_img

Most Popular