Sunday, April 20, 2025
Homeಸುದ್ದಿಗಳುಸಕಲೇಶಪುರಮಹಿಳೆಯರಿಂದ ಮಹಿಳೆಯರಿಗಾಗಿ ಮಹಿಳೆಯರಿಗೋಸ್ಕರ ಪಿಂಕ್ ಬೂತ್

ಮಹಿಳೆಯರಿಂದ ಮಹಿಳೆಯರಿಗಾಗಿ ಮಹಿಳೆಯರಿಗೋಸ್ಕರ ಪಿಂಕ್ ಬೂತ್

ಸಕಲೇಶಪುರ : ಮಹಿಳಾ ಮತದಾನ ಪ್ರಮಾಣ ಹೆಚ್ಚಿಸಲು ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಪಿಂಕ್‌ ಬೂತ್‌’ ತೆರೆಯಲು ಭಾರತೀಯ ಚುನಾವಣೆ ಆಯೋಗ ನಿರ್ಧರಿಸಿರುವ ಹಿನ್ನೆಲೆ ಪಟ್ಟಣದ ಕುಡುಗರಹಳ್ಳಿ ಬಡಾವಣೆಯ ಸರಕಾರಿ ಶಾಲೆಯಲ್ಲಿ ಪಿಂಕ್ ಬೂತ್ ತೆರೆಯಲಾಗಿದೆ.

ಮತಗಟ್ಟೆ ಸಂಖ್ಯೆ 78ರಲ್ಲಿ ಮಹಿಳಾ ಮತದಾರರು ಅಧಿಕವಾಗಿ ಇರುವ ಕಾರಣ, ಇಲ್ಲಿ ತೆರೆಯಲಾಗಿದೆ. ಕೇವಲ ಮಹಿಳಾ ಮತದಾರರು ಬಂದು ಮತದಾನ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಈ ಮತಗಟ್ಟೆಯು ಆಕರ್ಷಣಿಯವಾಗಿದೆ ಈ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿಯಿಂದ ಹಿಡಿದು ಮತಗಟ್ಟೆ ಸಹಾಯಕಿ, ಕಾವಲು ಸಿಬ್ಬಂದಿವರೆಗೂ ಸಂಪೂರ್ಣವಾಗಿ ಮಹಿಳೆಯರಿಂದಲೇ ನಿರ್ವಹಿಸಲ್ಪಡುತ್ತದೆ. ಈ ಕಾರಣದಿಂದ ಮತದಾನದ ಪ್ರಮಾಣವೂ ಹೆಚ್ಚಾಗುವಂತೆ ಮಾಡಲು ಪಿಂಕ್ ತೆರೆಯಲಾಗಿದೆ.
ಸ್ಥಳಕ್ಕೆ ಉವಿಭಾಗಧಿಕಾರಿ ಅನ್ಮೋಲ್ ಜೈನ್, ತಹಶಿಲ್ದಾರ್ ಮೇಘಾ, ಪುರಸಭ ಮುಖ್ಯಾಧಿಕಾರಿ ಡಾ. ಜಯಣ್ಣ, ಪುರಸಭ ಅರೋಗ್ಯ ನಿರೀಕ್ಷಕ ದಾನವೇಂದ್ರ ಇನ್ನಿತರರು ಬೇಟಿ ನೀಡಿದ್ದರು

RELATED ARTICLES
- Advertisment -spot_img

Most Popular