ಪಿಕ್ ಅಪ್ ವಾಹನ ಡಿಕ್ಕಿ : ವ್ಯಕ್ತಿ ಸ್ಥಳದಲ್ಲೇ ಸಾವು
ಪೋಲೀಸರ ಸಮಯ ಪ್ರಜ್ಞೆ ಮಾರನಹಳ್ಳಿ ಬಳಿ ಅಪಘಾತದ ವಾಹನ ವಶ
ಸಕಲೇಶಪುರ : ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಪಿಕ್ ಅಪ್ ವಾಹನ ಹಾಗೂ ಬೈಕ್ ನಡುವೆ ನೆಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ ಘಟನೆ ನೆಡೆದಿದೆ.
ತಾಲೂಕಿನ ಬಾಳ್ಳುಪೇಟೆ ಬಳಿ ಮೈತ್ರಿ ಹೋಟೆಲ್ ಮುಂಭಾಗ ಘಟನೆ ನೆಡೆದಿದ್ದು ಬೈಕ್ ಸವಾರ ಸಿಂಗಾಪುರ ಗ್ರಾಮದ ಮಂಜುನಾಥ್ (40) ಸ್ಥಳದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಹಾಸನ ಕಡೆಯಿಂದ ವೇಗವಾಗಿ ಬಂದ ಪಿಕ್ ಅಪ್ ವಾಹನ ನೇರವಾಗಿ ಬೈಕ್ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇನ್ನು ಅಪಘಾತ ನೆಡೆಸಿದ ಪಿಕ್ ಅಪ್ ವಾಹನ ಚಾಲಕ ಸ್ಥಳದಲ್ಲಿ ವಾಹನ ನಿಲ್ಲಿಸದೆ ಸಕಲೇಶಪುರ ಕಡೆ ತೆರೆಳಿದ್ದ. ಸಕಲೇಶಪುರ ಗ್ರಾಮಾತರ ಪಿಎಸ್ಐ ಸದಾಶಿವ ತಿಪ್ಪಾರೆಡ್ಡಿ ಅವರಿಗೆ ಸ್ಥಳೀಯರು ಕರೆ ಮಾಡಿ ಘಟನೆ ಕುರಿತು ವಿವರಿಸಿದ್ದು ವಾಹನ ಚಾಲಕ ಪರಾರಿಯಾಗಿರುವ ಬಗ್ಗೆ ಗಮನಕ್ಕೆ ತಂದರು ತಕ್ಷಣವೇ ಕಾರ್ಯಪ್ರವೃತ್ತರಾದ ಪಿಎಸ್ಐ ಸ್ಥಳೀಯ ಪೊಲೀಸ್ ಸಿಬ್ಬಂದಿಗಳನ್ನು ಆಯಾ ಸ್ಥಳದಲ್ಲಿ ನಾಕಾ ಬಂದಿ ಹಾಕಿ 112 ವಾಹನ ಸಿಬ್ಬಂದಿಗಳು ಅಲರ್ಟ್ ಆಗಿರುವಂತೆ ಸೂಚನೆ ನೀಡಿದ ಪರಿಣಾಮ ತಾಲೂಕಿನ ಮಾರನಬಳಿ ಪರಾರಿಯಾಗುತ್ತಿದ್ದ ಪಿಕ್ ಅಪ್ ವಾಹನ ಸಮೇತ ಚಾಲಕನನ್ನು ವಶಕ್ಕೆ ಪಡೆಡೆದಿದ್ದಾರೆ.