Friday, March 21, 2025
Homeಸುದ್ದಿಗಳುಸಕಲೇಶಪುರBig Breaking News ಕ್ಯಾಮನಹಳ್ಳಿ ಪಿಡಿಓ ಸಂಗಮೇಶ್ ಸಸ್ಪೆಂಡ್ : ತನಿಖೆಗೆ ಆದೇಶ.

Big Breaking News ಕ್ಯಾಮನಹಳ್ಳಿ ಪಿಡಿಓ ಸಂಗಮೇಶ್ ಸಸ್ಪೆಂಡ್ : ತನಿಖೆಗೆ ಆದೇಶ.

ಸಕಲೇಶಪುರ : ತನ್ನ ಹೆಂಡತಿಯ  ಹೆಸರಿಗೆ ಅಕ್ರಮವಾಗಿ ಹಕ್ಕು ಪತ್ರ ಮಂಜೂರು ಮಾಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಕ್ಯಾಮನಹಳ್ಳಿ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂಗಮೇಶ್ ಅವರನ್ನು ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಕಾಂತರಾಜ್ ಅವರು  ಅಮಾನತ್ತು ಮಾಡಿದ್ದಾರೆ.

 ಬಾಗೆ ಗ್ರಾಮ ಪಂಚಾಯತಿ ಸದಸ್ಯ ಚಾರ್ಲ್ಸ್ ರವರು ಇತ್ತೀಚೆಗೆ  ಸಂಗಮೇಶ್ ಅವರು ಸರ್ಕಾರಿ ಅಧಿಕಾರಿಯಾಗಿದ್ದು  ಸರ್ಕಾರದಿಂದ ಬಡವರಿಗೆ ನೀಡುವ ನಿವೇಶನವನ್ನು  ತನ್ನ ಪತ್ನಿ ಹೆಸರಿಗೆ ಖಾತೆ ಮಾಡಿಕೊಂಡಿದ್ದನ್ನು ದಾಖಲೆ ಸಮೇತ ಬಯಲಿಗೆಳೆದಿದ್ದರು.

 ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಾಂತರಾಜ್ ಅವರು ಕಡತಗಳನ್ನು ಪರಿಶೀಲಿಸಿ ಮೇಲ್ನೋಟಕ್ಕೆ ಆರೋಪ ಸಾಬೀತಾಗಿರುವುದರಿಂದ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದು, ಪಿಡಿಒ ಸಂಗಮೇಶ್ ಮೇಲಿನ  ಆರೋಪದ  ಸಂಪೂರ್ಣ ತನಿಖೆಗಾಗಿ ಆದೇಶ ನೀಡಿದ್ದಾರೆ.

RELATED ARTICLES
- Advertisment -spot_img

Most Popular