ಮಲೆನಾಡು ಭಾಗವಾದ ಸಕಲೇಶಪುರ ತಾಲ್ಲೂಕಿನಲ್ಲಿ, ಹೊಸಹಳ್ಳಿ ಬೆಟ್ಟ, ಪಟ್ಲಾ ಬೆಟ್ಟ, ಬಿಸಿಲೆ ಘಾಟ್ ಸೇರಿದಂತೆ ಅನೇಕ ಬೆಟ್ಟಗಳಿವೆ. ಇಲ್ಲಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹೊಸಳ್ಳಿ ಬೆಟ್ಟ ಅತ್ಯಂತ ಎತ್ತರ ಪ್ರದೇಶದಲ್ಲಿದ್ದು ಇದನ್ನು ಹತ್ತಲು ಸಕತ್ ಥ್ರಿಲ್ ನೀಡುತ್ತದೆ. ಬೆಟ್ಟದ ಮೇಲೆ ನಿಂತು ನೋಡಿದರೆ ಎಲ್ಲೆಲ್ಲೂ ಕಾಣುವ ಹಸಿರು ಸಿರಿ ಮನಸ್ಸಿಗೆ ಮುದ ನೀಡುತ್ತದೆ. ಇಂತಹ ಪ್ರವಾಸಿ ತಾಣದಲ್ಲಿ ಇಂದಿನಿಂದ ಪಾರಾ ಗ್ಲೈಡಿಂಗ್ ಆರಂಭಿಸಲಾಗಿದ್ದು, ಸ್ಥಳೀಯ ಶಾಸಕ ಎಚ್.ಕೆ.ಕುಮಾರಸ್ವಾಮಿ ಪಾರಾ ಗ್ಲೈಡಿಂಗ್ ಚಾಲನೆ ನೀಡಿದರು. ಇಲ್ಲಿಗೆ ಬರುವ ಪ್ರವಾಸಿಗರು ಪಾರಾ ಗ್ಲೈಡಿಂಗ್‌ನಲ್ಲಿ ಎತ್ತರಕ್ಕೆ ಹಾರಿ ಹಸಿರು ಸಿರಿಯನ್ನು ಕಣ್ತುಂಬಿಕೊಳ್ಳುವ ಜೊತೆಗೆ ಒಂದು ಹೊಸ ರೀತಿಯ ಥ್ರಿಲ್ ಅನುಭವಿಸಬಹುದಾಗಿದೆ